»   » 'ಉಪ್ಪಿ-2' ಹೀರೋಯಿನ್ ಪ್ರಿಯಾಂಕಾ ಉಪೇಂದ್ರ

'ಉಪ್ಪಿ-2' ಹೀರೋಯಿನ್ ಪ್ರಿಯಾಂಕಾ ಉಪೇಂದ್ರ

Written by: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಉಪೇಂದ್ರ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ. ಉಪ್ಪಿ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ. ಜೊತೆಗೆ 'ಉಪೇಂದ್ರ' ಅನ್ನೋ ಬಂಪರ್ ಹಿಟ್ ಸಿನಿಮಾದ ಮುಂದುವರಿದ ಭಾಗ ಅಂತ ಸಿನಿಮಾದ ಬಗ್ಗೆ ಇರೋ ಕುತೂಹಲಗಳನ್ನ ಡಬಲ್ ಮಾಡಿದೆ.

'ಉಪ್ಪಿ-2' ಉಪೇಂದ್ರ ಪ್ರೊಡಕ್ಷನ್ ಹೌಸ್ ನ ಮೊದಲ ಸಿನಿಮಾ. ಉಪ್ಪಿ ತಮ್ಮದೇ ಪ್ರೊಡಕ್ಷನ್ಸ್ ನಲ್ಲಿ ನಿರ್ಮಿಸ್ತಾ ಇರೋ ಚಿತ್ರದ ಮುಹೂರ್ತವೇ ಚಿತ್ರಪ್ರೇಮಿಗಳಿಗೆ ಹಬ್ಬ ನೀಡಿತ್ತು. ಕಳೆದ ಬಾರಿ ಉಪ್ಪಿ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟೆಂಬರ್ 18ಕ್ಕೆ ಸೆಟ್ಟೇರಿದ ಚಿತ್ರ ಶೂಟಿಂಗ್ ಶುರು ಮಾಡೋಕೇನೇ ಹೆಚ್ಚೂ ಕಡಿಮೆ 10 ತಿಂಗಳು ತೆಗೆದುಕೊಂಡಿದೆ. [ರಿಯಲ್ ಸ್ಟಾರ್ 'ಉಪ್ಪಿ 2' ಜತೆ ರಷ್ಯನ್ ಕೇಸರಿಬಾತ್]

ಉಪ್ಪಿ ಅಂಡ್ ಟೀಂ ಅಷ್ಟರಮಟ್ಟಿಗೆ ತಯಾರಿ ಮಾಡಿರೋ ಚಿತ್ರ ಇದು. ಉಪೇಂದ್ರ ಸಿನಿಮಾಗೆ ಬಾಲಿವುಡ್ ತಾರೆ ರವೀನಾ ಟಂಡನ್ ಮುಂತಾದವರನ್ನ ಕರೆಸಿದ್ದ ರಿಯಲ್ ಸ್ಟಾರ್ ಈ ಬಾರಿ 'ಉಪ್ಪಿ-2'ಗೆ ತಾರಾಗಣದಲ್ಲಿ ಯಾರ್ಯಾರನ್ನ ತರ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಈಗ ಈ ಚಿತ್ರತಂಡದ ಎಕ್ಸ್ ಕ್ಲೂಸೀವ್ ಮಾಹಿತಿ ಒನ್ ಇಂಡಿಯಾಗೆ ಸಿಕ್ಕಿದೆ. ಸ್ಲೈಡ್ ನಲ್ಲಿ ಡೀಟೇಲ್ಸ್ ನೋಡಿ.

ಉಪ್ಪಿ-2ಗೆ ಪ್ರಿಯಾಂಕಾ ಉಪೇಂದ್ರ ಹೀರೋಯಿನ್

ಉಪ್ಪಿ-2ಗೆ ಪ್ರಿಯಾಂಕಾ ಉಪೇಂದ್ರ ಹೀರೋಯಿನ್

ಉಪ್ಪಿ-2 ಚಿತ್ರದಲ್ಲೂ ಮೂರು ಹೀರೋಯಿನ್ ಗಳಿರ್ತಾರೆ. ಇಲ್ಲಿ ಮೂರನೇ ಹೀರೋಯಿನ್ನಾಗಿ ಪ್ರಿಯಾಂಕಾ ಉಪೇಂದ್ರ ನಟಿಸ್ತಿದ್ದಾರೆ. ಉಪ್ಪಿ ಆಯ್ಕೆ ಮಾಡೋದ್ರಲ್ಲಿ ಎಕ್ಸ್ ಪರ್ಟ್. ಹಾಗಾಗಿ ಪ್ರೊಡಕ್ಷನ್ ನೋಡ್ಕೊಂಡು ನಟಿಸೋದು ಕಷ್ಟ ಅನ್ನೋ ಕಾರಣಕ್ಕೆ ಮೂರನೇ ಹೀರೋಯಿನ್ನಾಗಿ ಆಯ್ಕೆ ಮಾಡಿದ್ದಾರೆ ಅನ್ಸುತ್ತೆ.

ಓಹೋ ಹಿಮಾಲಯದಲ್ಲಿ ಶೂಟಿಂಗ್

ಓಹೋ ಹಿಮಾಲಯದಲ್ಲಿ ಶೂಟಿಂಗ್

ಸಿನಿಮಾದ ಮೊದಲ ಭಾಗವನ್ನೇ ಹಿಮಾಲಯದಲ್ಲಿ ಶೂಟಿಂಗ್ ಮಾಡ್ತಿದ್ದಾರೆ ರಿಯಲ್ ಸ್ಟಾರ್. ಹಿಮಾಲಯದ ಶೂಟಿಂಗ್ ಗಾಗಿ ಸಂಪೂರ್ಣ ತಯಾರಿಯೊಂದಿಗೆ ಚಿತ್ರತಂಡ ಜೂ.20ರ ನಂತರ ಹಿಮಾಲಯಕ್ಕೆ ತೆರಳಲಿದೆ.

ಹಿಮಾಲಯದಿಂದ ಎಂಟ್ರಿಕೊಡ್ತಾರೆ ಉಪ್ಪಿ

ಹಿಮಾಲಯದಿಂದ ಎಂಟ್ರಿಕೊಡ್ತಾರೆ ಉಪ್ಪಿ

ಸಿನಿಮಾದಲ್ಲಿ ರಿಯಲ್ ಸ್ಟಾರ್ ಎಂಟ್ರಿ ಹಿಮಾಲಯದಿಂದಲೇ ಶುರುವಾಗುತ್ತಂತೆ. ಉಪೇಂದ್ರ ಚಿತ್ರದ ಕೊನೆಯಲ್ಲಿ ನಾನು ಯಾರು ಅನ್ನೋದನ್ನ ತಿಳಿಯೋದಕ್ಕೆ ದಿಗಂತದ ಕಡೆ ನಡೆದುಕೊಂಡು ಹೋಗೋ ಸೀನ್ ಇದೆ. ಉಪ್ಪಿ ಅಲ್ಲಿಂದ ಹೊರಬರೋದೇ ಮೊದಲ ಸೀನ್ ಅನ್ನೋದು ಕುತೂಹಲದ ಜೊತೆಗೆ ಸತ್ಯವೂ ಅಂತೆ.

ಉಪ್ಪಿ-2 ಸಿನಿಮಾಗೆ ಹಾಲಿವುಡ್ ಹಾಡು

ಉಪ್ಪಿ-2 ಸಿನಿಮಾಗೆ ಹಾಲಿವುಡ್ ಹಾಡು

ಈಗಾಗಲೇ ಉಪ್ಪಿ 2 ಸಿನಿಮಾಗೆ ಹಾಲಿವುಡ್ ನ ರ್ಯಾಪ್ ಸಿಂಗರ್ ಒಬ್ಬರು ಹಾಡಿದ್ದಾರೆ. ಓಪನಿಂಗ್ ಸಾಂಗ್ ಕನ್ನಡದಲ್ಲಿ ಇರೋದಿಲ್ಲವಂತೆ. ಅದು ಉಪ್ಪಿ ಇಂಟ್ರಡಕ್ಷನ್ ಸಾಂಗ್ ಆಗಿರಲಿದ್ದು ಅಮೆರಿಕನ್ ರ್ಯಾಪರ್ ಇದನ್ನ ಹಾಡಿರೋ ಸುದ್ದಿ ಬಂದಿದೆ.

ವಿದ್ಯಾಬಾಲನ್ ಡೇಟ್ಸ್ ಸಮಸ್ಯೆ

ವಿದ್ಯಾಬಾಲನ್ ಡೇಟ್ಸ್ ಸಮಸ್ಯೆ

ಬಾಲಿವುಡ್ ಬೆಡಗಿ ವಿದ್ಯಾಬಾಲನ್ ರನ್ನ ಉಪ್ಪಿ ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ರು. ಆದರೆ ವಿದ್ಯಾಬಾಲನ್ ಬೇರೆ ಸಿನಿಮಾಗಳಲ್ಲಿ ಬಿಜಿ. ಆದರೆ 'ಉಪ್ಪಿ-2' ಮುಹೂರ್ತ ಮಾಡಿ 10 ತಿಂಗಳು ಕಾದಿದ್ದು, ಇನ್ನು ಕಾಯೋಕೆ ಸಾಧ್ಯವಿಲ್ಲ ಅಂತ ಉಪ್ಪಿ ಸಿನಿಮಾ ಶುರು ಮಾಡ್ತಿದ್ದಾರೆ.

ಕಲ್ಪನೆಯನ್ನೂ ಮೀರಿದ ವಿಶೇಷತೆಗಳು

ಕಲ್ಪನೆಯನ್ನೂ ಮೀರಿದ ವಿಶೇಷತೆಗಳು

ಸ್ವತಃ ಉಪ್ಪಿ ಹೇಳೋ ಪ್ರಕಾರ ನನ್ನ ಕಥೆಯನ್ನ ಬೇರೆಯವ್ರಿಗೆ ಕೊಟ್ರೂ ಇದನ್ನ ಬೇರೆಯವರು ಮಾಡೋಕೆ ಸಾಧ್ಯವಿಲ್ಲ ಅಂತ. ಹಾಗಂದ ಮೇಲೆ ಉಪ್ಪಿ-2ನಲ್ಲಿ ಅದಿನ್ನೆಂಥೆಂತಹ ಥ್ರಿಲ್ ಇರುತ್ತೋ ಕಾದು ನೋಡಿ.

English summary
Actress Priyanka Upendra should playing a heroine role in Realstar Upendra's upcoming directorial venture Uppi 2. The movie is making a huge buzz even from its pre production stage. The movie, which is all set to go on floors in July 2014, Oneindia exclusive.
Please Wait while comments are loading...

Kannada Photos

Go to : More Photos