twitter
    For Quick Alerts
    ALLOW NOTIFICATIONS  
    For Daily Alerts

    ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ

    By ಹರಾ
    |

    ತಮ್ಮ ಹಿತಾಸಕ್ತಿಗಾಗಿ ನಿರ್ಮಾಪಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸ್ಟಾರ್ ನಟರು ನಿರ್ಮಾಪಕರ ಸಂಕಷ್ಟಕ್ಕೆ ಕೈಜೋಡಿಸದೆ ಇರುವುದಕ್ಕೆ ಹಲವು ನಿರ್ಮಾಪಕರು ಗರಂ ಆಗಿದ್ದಾರೆ. ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ವಿರುದ್ಧ ನಿರ್ಮಾಪಕ ಕೃಷ್ಣೇಗೌಡ ಖಾರವಾಗಿ ಮಾತನಾಡಿದ್ದಾರೆ.

    ನಿನ್ನೆ ಬಸಂತ್ ರೆಸಿಡೆನ್ಸಿಯಲ್ಲಿ ನಿರ್ಮಾಪಕರ ಸಂಘ ಸಭೆ ಸೇರಿದ ಬಳಿಕ ಬಿಟಿವಿ ನ್ಯೂಸ್ ಚರ್ಚಾ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ, ನಿರ್ಮಾಪಕರಾದ ಬಾಮಾ ಹರೀಶ್, ಕೇಶವ್ ಮತ್ತು ಕೃಷ್ಣೇಗೌಡ ಪಾಲ್ಗೊಂಡಿದ್ದರು. [ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು]

    Producer Krishnegowda annoyed with Actor Ramesh Aravind's statement

    ಸ್ಟಾರ್ ನಟರಿಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸ್ವಾತಂತ್ರ್ಯ ಇಲ್ವೇ? ಅನ್ನುವ ಪ್ರಶ್ನೆ ತೂರಿ ಬಂದ ಬೆನ್ನಲ್ಲೇ ನಿರ್ಮಾಪಕ ಕೃಷ್ಣೇಗೌಡ, ತಿಂಗಳುಗಳ ಹಿಂದೆ ನಟ ರಮೇಶ್ ಅರವಿಂದ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು. [ನಿರ್ಮಾಪಕರು ರೊಚ್ಚಿಗೇಳುವುದಕ್ಕೆ 'ಇವರುಗಳೇ' ಕಾರಣ.!]

    ''ನಟ ರಮೇಶ್ ಅರವಿಂದ್ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಇರೋದಾ. ನಮಗೂ ಇದೆ. ನಾವು ಡಬ್ಬಿಂಗ್ ಮಾಡ್ತೀವಿ ಅಂದಾಗ ಅವರೆಲ್ಲಾ (ಕಲಾವಿದರು) ಸೇರಿ ಬೀದಿಗಿಳಿದು ಪ್ರತಿಭಟನೆ ಮಾಡಿದರು. ಅವಾಗ ನಾಚಿಕೆ ಆಗ್ಲಿಲ್ವೇ?''

    Producer Krishnegowda annoyed with Actor Ramesh Aravind's statement

    ''ನಮ್ಮ ಉಳಿವಿಗಾಗಿ ಡಬ್ಬಿಂಗ್ ಮಾಡ್ತೀವಿ ಅಂದ್ವಿ. ನನಗೆ ನನ್ನ ಬದುಕು ಅನಿವಾರ್ಯ. ಇದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ವಾ?'' ಅಂತ ನಿರ್ಮಾಪಕ ಕೃಷ್ಣೇಗೌಡ ಮರುಪ್ರಶ್ನೆ ಮಾಡಿದರು. [ಒಗ್ಗೂಡದ ಕಲಾವಿದರ ಬಗ್ಗೆ ನಟ ಜಗ್ಗೇಶ್ ಗರಂ]

    ನಟ ರಮೇಶ್ ಅರವಿಂದ್ ಹೇಳಿದ್ದೇನು?
    ನಟ ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಕಿಚ್ಚ ಸುದೀಪ್ ರನ್ನ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡ್ತೀವಿ ಅಂತ ನಿರ್ಮಾಪಕರ ಸಂಘ ಪಟ್ಟು ಹಿಡಿದಾಗ, ನಾಯಕ ನಟ ರಮೇಶ್ ಅರವಿಂದ್ ಮಾಧ್ಯಮ ಮತ್ತು ಪತ್ರಿಕಾ ಮಿತ್ರರಿಗೆ ನೀಡಿದ ಪ್ರತಿಕ್ರಿಯೆ ಇದು -

    Producer Krishnegowda annoyed with Actor Ramesh Aravind's statement

    ''ನಾವು ಇಷ್ಟ ಪಡುವ ಕೆಲಸವನ್ನ ಆಯ್ಕೆ ಮಾಡಿಕೊಳ್ಳುವ ಅಧಿಕಾರ ನಮ್ಮ ಸಂವಿಧಾನ ನೀಡಿದೆ. ನಾನು ಆಕ್ಟ್ ಮಾಡ್ತೀನೋ, ನಿರ್ದೇಶನ ಮಾಡ್ತೀನೋ, ಪುಸ್ತಕ ಬರೆಯುತ್ತೇನೋ ಅಥವಾ ಶೋ ಒಂದನ್ನ ಹೋಸ್ತ್ ಮಾಡುತ್ತೇನೋ ನನಗೆ ಬಿಟ್ಟದ್ದು.'' [ಸುದೀಪ್, ರಮೇಶ್ ಅರವಿಂದ್ ನಿರ್ಬಂಧಕ್ಕೆ ಪ್ರತಿಕ್ರಿಯೆ]

    '' ವೀಕೆಂಡ್ ವಿತ್ ರಮೇಶ್ ಒಂದು ಪಾಸಿಟೀವ್ ಶೋ. ಸಾಧಕರ ಹೆಜ್ಜೆಗಳನ್ನ ಹೇಳುವ ಮೂಲಕ ಯುವ ಜನತೆಗೆ ಸ್ಪೂರ್ತಿ ನೀಡುವ ಶೋ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಅಮೋಘ. ನನ್ನ ಕಾಂಟ್ರ್ಯಾಕ್ಟ್ ಅನುಸಾರ ಮೊದಲ ಸೀಸನ್ ನ ನಾನು ಯಾವುದೇ ಅಡೆತಡೆ ಇಲ್ಲದೆ ಕಂಪ್ಲೀಟ್ ಮಾಡುತ್ತೇನೆ'' ಅಂತ ನಟ ರಮೇಶ್ ಅರವಿಂದ್ ಹೇಳಿದ್ದರು.

    English summary
    Kannada Actor Ramesh Aravind had reacted ''Our constitution gives us a basic right to work'', with regard to the Stars hosting Reality Shows. On this statement Producer Krishnegowda comments, ''I too have my basic right to dubb movies''. With this, the controversy between Producers and Stars is becoming more rigid.
    Monday, June 1, 2015, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X