»   » ಸಿನಿಮಾದಲ್ಲಿ ಮಾತ್ರವಲ್ಲ, 'ಬಾಹುಬಲಿ'ಯನ್ನ 'ಸತ್ಯ'ವಾಗ್ಲೂ ಕಗ್ಗೊಲೆ ಮಾಡುತ್ತಿರುವ ಕಟ್ಟಪ್ಪ!

ಸಿನಿಮಾದಲ್ಲಿ ಮಾತ್ರವಲ್ಲ, 'ಬಾಹುಬಲಿ'ಯನ್ನ 'ಸತ್ಯ'ವಾಗ್ಲೂ ಕಗ್ಗೊಲೆ ಮಾಡುತ್ತಿರುವ ಕಟ್ಟಪ್ಪ!

Written by: ಒನ್ಇಂಡಿಯಾ ಕನ್ನಡ ವಾರ್ತೆ
Subscribe to Filmibeat Kannada

2015, ಜುಲೈ 10 ರಂದು 'ಬಾಹುಬಲಿ' ಚಿತ್ರ ಬಿಡುಗಡೆ ಆದಾಗ... ಅದನ್ನ ಕಣ್ತುಂಬಿಕೊಂಡ ಪ್ರೇಕ್ಷಕರ ತಲೆಯಲ್ಲಿ ಮೂಡಿದ ಮೊದಲ ಪ್ರಶ್ನೆ - 'ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಯಾಕೆ.?'

'ಮಾಹಿಶ್ಮತಿ ರಾಜ್ಯದ ಕಟ್ಟಾಳು ಆಗಿದ್ದ ಕಟ್ಟಪ್ಪ... ಯುವರಾಜ ಅಮರೇಂದ್ರ ಬಾಹುಬಲಿಯನ್ನ ಪ್ರೀತಿಯಿಂದ ಆಡಿಸಿ ಬೆಳೆಸಿದ್ದ ಕಟ್ಟಪ್ಪ... ಅದೇ ಬಾಹುಬಲಿಯನ್ನ ಇರಿದು ಕೊಂದಿದ್ದಾದರೂ ಯಾಕೆ' ಎಂಬ ಹುಳ ಎಲ್ಲರ ತಲೆಯಲ್ಲೂ ಬಿಟ್ಟಂಗಾಗಿತ್ತು.[ತಪ್ಪದೆ ವಿಡಿಯೋ ನೋಡಿ: ರಾಜಮೌಳಿಗೆ 'ಕನ್ನಡ' ನೆನಪಿಸಿದ ಕನ್ನಡಿಗರು]

ಎರಡು ವರ್ಷಗಳಿಂದ ಮೆದುಳಿನಲ್ಲಿ ಕೊರೆಯುತ್ತಿದ್ದ ಈ ಹುಳಕ್ಕೆ ಮುಂದಿನ ವಾರ (ಏಪ್ರಿಲ್ 28) ಮುಕ್ತಿ ಸಿಗಲಿದೆ ನಿಜ. ಆದ್ರೆ, ಅದೇ ದಿನ ಕರ್ನಾಟಕದಲ್ಲಿ 'ಬಾಹುಬಲಿ' ಕಲೆಕ್ಷನ್ ನೆಗೆದು ಬೀಳುವುದು ಖಚಿತ. ಅದಕ್ಕೆ ನೇರ ಹೊಣೆ ಕಟ್ಟಪ್ಪ ಅಲಿಯಾಸ್ ಸತ್ಯರಾಜ್..!!! ಮುಂದೆ ಓದಿ....

'ಬಾಹುಬಲಿ'ಯನ್ನ ಕಗ್ಗೊಲೆ ಮಾಡುತ್ತಿರುವ ಕಟ್ಟಪ್ಪ

'ಬಾಹುಬಲಿ'ಯನ್ನ ಕಗ್ಗೊಲೆ ಮಾಡುತ್ತಿರುವ ಕಟ್ಟಪ್ಪ

ತೆರೆಮೇಲೆ 'ಬಾಹುಬಲಿ'ಯನ್ನ ಕೊಲೆ ಮಾಡಿರುವ ಕಟ್ಟಪ್ಪ, ಕನ್ನಡಿಗರ ಬಗ್ಗೆ ಕೀಳಾಗಿ ಮಾತನಾಡಿ... ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ... 'ಬಾಹುಬಲಿ-2' ಚಿತ್ರದ ಬಿಡುಗಡೆಗೆ ವ್ಯಕ್ತವಾಗಿರುವ ವ್ಯಾಪಕ ವಿರೋಧಕ್ಕೆ ನೇರ ಹೊಣೆಯಾಗಿರುವ ಕಟ್ಟಪ್ಪ... ಕರ್ನಾಟಕದಲ್ಲಿ 'ಬಾಹುಬಲಿ'ಯನ್ನ ಕಗ್ಗೊಲೆ ಮಾಡಿದಂತೆಯೇ ಲೆಕ್ಕ.!['ಕನ್ನಡಿಗರು ಮುಚ್ಕೊಂಡ್ ಕೂತ್ಕೊಳ್ಳಿ': ಫೇಸ್ ಬುಕ್ನಲ್ಲಿ ತೆಲುಗು ಸಿನಿ'ಭಕ್ತ'ರ ಗೇಲಿ.!]

ಅಂದು ಹೇಳಿ ಕೇಳಿ ಬೆಂಗಳೂರು ಬಂದ್.!

ಅಂದು ಹೇಳಿ ಕೇಳಿ ಬೆಂಗಳೂರು ಬಂದ್.!

ಏಪ್ರಿಲ್ 28 ರಂದು 'ಬಾಹುಬಲಿ-2' ದೇಶಾದ್ಯಂತ ಬಿಡುಗಡೆ ಆಗಲಿದೆ. ಅಂದು ಬೆಂಗಳೂರು ಬಂದ್ ಮಾಡಲು ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿವೆ. ಕರ್ನಾಟಕ ರಾಜಧಾನಿ ಬಂದ್ ಆದರೆ, 'ಬಾಹುಬಲಿ' ದರ್ಶನ ಭಾಗ್ಯ ಸಿಗುವುದು ಡೋಲಾಯಮಾನ.[ಕರ್ನಾಟಕದಲ್ಲಿ 'ಬಾಹುಬಲಿ' ಬಿಡುಗಡೆ ಡೌಟ್: ಏಪ್ರಿಲ್ 28 ರಂದು ಬೆಂಗಳೂರು ಬಂದ್!]

ಕಲೆಕ್ಷನ್ ಆಗುವುದಾದರೂ ಹೇಗೆ.?

ಕಲೆಕ್ಷನ್ ಆಗುವುದಾದರೂ ಹೇಗೆ.?

ಬಂದ್ ಅಂತ ಹೇಳಿದ ಕೂಡಲೆ, ಫ್ಯಾಮಿಲಿ ಆಡಿಯನ್ಸ್ ರೋಡ್ ಗೆ ಇಳಿಯಲ್ಲ. ಅದರಲ್ಲೂ 'ಬಾಹುಬಲಿ' ಮಲ್ಟಿಪ್ಲೆಕ್ಸ್, ಐಮ್ಯಾಕ್ಸ್ ಗೆ ಹೇಳಿ ಮಾಡಿಸಿದ ಸಿನಿಮಾ. ಹೀಗಿರುವಾಗ, ಏಪ್ರಿಲ್ 28 ರಂದು ಬೆಂಗಳೂರು ಬಂದ್ ಆಗಿ, ಬೆಂಗಳೂರಿನ ವಿವಿಧ ಮಾಲ್ ಗಳಿಗೆ ಬೀಗ ಬಿದ್ದರೆ, ಕಲೆಕ್ಷನ್ ಆಗುವುದಾದರೂ ಹೇಗೆ.?[ಕಟ್ಟಪ್ಪ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಬಿಡುಗಡೆ ಇಲ್ಲ.! ಇದು ಕನ್ನಡಿಗರ ಕಟ್ಟಪ್ಪಣೆ.!]

ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇದೆ

ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇದೆ

ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇದೆ ಅಂತ ಎಲ್ಲರಿಗೂ ಗೊತ್ತು. ಅದರಲ್ಲೂ, 'ಬಾಹುಬಲಿ' ಸಿನಿಮಾ ಬೆಂಗಳೂರಿನಲ್ಲಿ ಬಿಗ್ ಓಪನ್ನಿಂಗ್ ಪಡೆಯಲಿದೆ ಎಂಬುದು ಕೂಡ ಅಷ್ಟೇ ಸತ್ಯ. ಇದೇ ಕಾರಣಕ್ಕೆ, 'ಬಾಹುಬಲಿ-2' ಚಿತ್ರದ ಕರ್ನಾಟಕದ ವಿತರಣೆ ಹಕ್ಕು ನೀಡಲು ನಿರ್ಮಾಪಕರು ದೊಡ್ಡ ಮೊತ್ತ ಕೋಟ್ ಮಾಡಿದ್ದಾರೆ. ಹೀಗಿರುವಾಗ, 'ಬಾಹುಬಲಿ-2' ಬಿಡುಗಡೆ ವಿರೋಧಿಸಿ ಬೆಂಗಳೂರು ಬಂದ್ ಮಾಡಿದರೆ, ನಿರ್ಮಾಪಕರು ಹಾಗೂ ವಿತರಕರಿಗೆ ಹೊಡೆತ ಬೀಳದೇ ಇರುತ್ತಾ.?

ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ.!

ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ.!

ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿರುವಾಗಲೇ, 'ಬಾಹುಬಲಿ-2' ಚಿತ್ರದ ಕರ್ನಾಟಕದ ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ. ನಿರ್ಮಾಪಕರು ಡಿಮ್ಯಾಂಡ್ ಮಾಡುತ್ತಿರುವಂತೆ ದೊಡ್ಡ ಅಮೌಂಟ್ ಕೊಟ್ಟು ಲಾಸ್ ಅನುಭವಿಸಲು ಇಲ್ಲಿನ ವಿತರಕರು ರೆಡಿ ಇಲ್ಲ.['ಟಾಲಿವುಡ್ ಟ್ರೋಲ್'ಗಳ ವಿರುದ್ಧ ತೊಡೆ ತಟ್ಟಿ ನಿಂತ ಫಿಲ್ಮಿಬೀಟ್ ಕನ್ನಡ ಓದುಗರು]

ನೆಗೆಟಿವ್ ಪಬ್ಲಿಸಿಟಿ ವರ್ಕ್ ಅಗುತ್ತಿಲ್ಲ

ನೆಗೆಟಿವ್ ಪಬ್ಲಿಸಿಟಿ ವರ್ಕ್ ಅಗುತ್ತಿಲ್ಲ

ಕೆಲವು ಚಿತ್ರಗಳು ನೆಗೆಟಿವ್ ಪಬ್ಲಿಸಿಟಿಯಿಂದ ಸಿಕ್ಕಾಪಟ್ಟೆ ಸದ್ದು ಮಾಡಬಹುದು. ಅದರಿಂದ ಕಲೆಕ್ಷನ್ ಕೂಡ ಹೆಚ್ಚಾಗಬಹುದು. ಆದ್ರೆ, ಇದು 'ಬಾಹುಬಲಿ-2' ವಿಚಾರದಲ್ಲಿ ವರ್ಕ್ ಆಗಿಲ್ಲ. ಬದಲಾಗಿ ಮಾರಕವಾಗಿದೆ. ಸತ್ಯರಾಜ್ ಎಂದೋ ನೀಡಿದ್ದ ಹೇಳಿಕೆ ಇಂದು 'ಬಾಹುಬಲಿ-2' ಚಿತ್ರಕ್ಕೆ ಕಂಟಕವಾಗಿ ಪರಿಣಮಿಸಿದೆ.

ಎಲ್ಲದಕ್ಕೂ ಕಾರಣ ಕಟ್ಟಪ್ಪ.!

ಎಲ್ಲದಕ್ಕೂ ಕಾರಣ ಕಟ್ಟಪ್ಪ.!

ಕಟ್ಟಪ್ಪ ಕ್ಷಮೆ ಕೇಳುವವರೆಗೂ ಶತಾಯಗತಾಯ ಕರ್ನಾಟಕದಲ್ಲಿ 'ಬಾಹುಬಲಿ-2' ಬಿಡುಗಡೆ ಸಾಧ್ಯ ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಕಟ್ಟಪ್ಪ ಕ್ಷಮೆ ಕೇಳದೆ ಹೋದರೆ, ಕರ್ನಾಟಕದಲ್ಲಿ 'ಬಾಹುಬಲಿ' ಕಗ್ಗೊಲೆ ಆದ ಹಾಗೆ.!! ತೆರೆಮೇಲೆ ಬಾಹುಬಲಿಯನ್ನ ಮೋಸದಿಂದ ಕೊಂದ ಕಟ್ಟಪ್ಪ, ಸತ್ಯವಾಗ್ಲೂ 'ಬಾಹುಬಲಿ'ಯನ್ನ ಬೇಜವಾಬ್ದಾರಿಯಿಂದ ಕೊಂದ ಹಾಗೆ.!!

English summary
Protests against Satyaraj's statement will definately lead to adverse effects on 'Baahubali-2' collection in Karnataka
Please Wait while comments are loading...

Kannada Photos

Go to : More Photos