»   » ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಡಬ್ಬಿಂಗ್ ವಿವಾದ, ಏನಾಗುತ್ತೋ?

ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಡಬ್ಬಿಂಗ್ ವಿವಾದ, ಏನಾಗುತ್ತೋ?

Posted by:
Subscribe to Filmibeat Kannada

ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಡಬ್ಬಿಂಗ್ ನಿಷೇಧ ಕಾನೂನು ಬಾಹಿರ ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಆದೇಶ ನೀಡಿದ ಮೇಲೆ, ಈ ಸಂಬಂಧದ ಎಲ್ಲಾ ವಿವಾದಗಳೀಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ.

ಸಿಸಿಐ ಆದೇಶದ ಬೆನ್ನಲ್ಲೇ ಡಬ್ಬಿಂಗ್ ಕೆಲಸ ತೆರೆಮೆರೆಯಲ್ಲಿ ಆರಂಭವಾಗಿದೆ ಎನ್ನುವ ಸುದ್ದಿ ಈಗ ಎಲ್ಲಡೆ ಹರಿದಾಡುತ್ತಿದೆ.

ಜೊತೆಗೆ, ಯಾವ ಕಾರಣಕ್ಕೂ ಡಬ್ಬಿಂಗ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಡಬ್ಬಿಂಗ್ ವಿರೋಧಿಗಳು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ. (ಡಬ್ಬಿಂಗ್ ಬೆಂಬಲಿಗರಿಗೆ ಆನೆಬಲ: ಮಂಡಳಿಗೆ ಮುಖಭಂಗ)

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ್ರು, ಎರಡು ಸಿನಿಮಾಗಳ ಡಬ್ಬಿಂಗ್ ಕೆಲಸ ಈಗಾಗಲೇ ಆರಂಭವಾಗಿದೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

ಬಿಡುಗಡೆಗೆ ಸಿದ್ದವಾಗಿರುವ ಬಹು ನಿರೀಕ್ಷಿತ ಒಂದು ತೆಲುಗು ಮತ್ತು ಒಂದು ತಮಿಳು ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಆಗುವುದು ಬಹುತೇಕ ಖಂಡಿತ ಎನ್ನುವ ಸುದ್ದಿಯಿರುವುದರಿಂದ, ಸಾ ರಾ ಗೋವಿಂದು ನೇತೃತ್ವದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಯಿದೆ.

ಎರಡು ಸಿನಿಮಾಗಳಲ್ಲದೇ, ಸುಮಾರು ನಲವತ್ತು ಸಿನಿಮಾಗಳು ಕನ್ನಡಕ್ಕೆ ಡಬ್ಬಿಂಗ್ ಆಗಲು ಸಜ್ಜಾಗಿದೆ. ಸದ್ಯ, ಐದು ಸಿನಿಮಾಗಳು ಅನುಮತಿ ಕೋರಿ ಮಂಡಳಿಗೆ ಅರ್ಜಿ ಸಲ್ಲಿಸಿದೆ.

ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕ ಕೂಡಲೇ ನಾವು ಗ್ರೀನ್ ಸಿಗ್ನಲ್ ನೀಡಲಿದ್ದೇವೆ ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ್ರು ತಿಳಿಸಿದ್ದಾರೆ.

ಗೊಂದಲಕ್ಕೀಡು ಮಾಡಿದ ಎಸ್ ನಾರಾಯಣ್ ಹೇಳಿಕೆ

ಗೊಂದಲಕ್ಕೀಡು ಮಾಡಿದ ಎಸ್ ನಾರಾಯಣ್ ಹೇಳಿಕೆ

ನಾವೆಲ್ಲಾ ಅಣ್ಣಾವ್ರ ಹಿಂಬಾಲಕರು, ನಾನು ಡಬ್ಬಿಂಗ್ ವಿರೋಧಿ. ಕನ್ನಡದ ಕಲಾವಿದರ, ನಿರ್ಮಾಪಕರ ಹಿತಕ್ಕೆ ಧಕ್ಕೆ ತರುವ ಕೆಲಸ ನಾನು ಮಾಡುವುದಿಲ್ಲ ಎಂದು ತಮಿಳು ಚಿತ್ರದ ರೈಟ್ಸ್ ಪಡೆದಿರುವ ಕಲಾಸಾಮ್ರಾಟ್ ಎಸ್ ನಾರಾಯಣ್ ಹೇಳಿಕೆ ನೀಡಿ ಈ ವಿಚಾರದಲ್ಲಿ ಮತ್ತಷ್ಟು ಗೊಂದಲ ಉಂಟು ಮಾಡಿದ್ದಾರೆ.

ಪುಲಿ ಚಿತ್ರದ ರೈಟ್ಸ್

ಪುಲಿ ಚಿತ್ರದ ರೈಟ್ಸ್

ವಿಜಯ್ ಅಭಿನಯದ ಪುಲಿ ಚಿತ್ರದ ಕರ್ನಾಟಕದ ರೈಟ್ಸ್ ಅನ್ನು ಎಸ್ ನಾರಾಯಣ್ ಪಡಿದಿದ್ದಾರೆ. ಜೊತೆಗೆ ಚಿತ್ರದ ಎಲ್ಲಾ ರೀತಿಯ ರೈಟ್ಸನ್ನು ನಾರಾಯಣ್ ಪಾಲಾಗಿದೆ. ಪುಲಿ ಚಿತ್ರ ಕನ್ನಡ ವರ್ಸನ್ ನಲ್ಲಿ ಬರಲು ಸಜ್ಜಾಗುತ್ತಿದೆ ಎನ್ನುವ ಸುದ್ದಿಯನ್ನು ಖುದ್ದು ಕೃಷ್ಣೇಗೌಡ್ರು ಹೇಳಿದ್ದರು.

ನಾನು ಅನುಮತಿ ಕೊಟ್ಟಿಲ್ಲ

ನಾನು ಅನುಮತಿ ಕೊಟ್ಟಿಲ್ಲ

ಪುಲಿ ಚಿತ್ರದ ರೈಟ್ಸನ್ನು ನಾನು ಪಡೆದುಕೊಂಡಿದ್ದೇನೆ. ನಾನು ಡಬ್ಬಿಂಗಿಗೆ ಅನುಮತಿ ನೀಡಿಲ್ಲ. ನನ್ನ ಪರ್ಮಿಷನ್ ಇಲ್ಲದೇ ಡಬ್ಬಿಂಗ್ ಮಾಡುವ ಹಾಗಿಲ್ಲ. ಹಾಗಾಗಿ ಈ ಬಗ್ಗೆ ಗೊಂದಲ ಬೇಡ ಎಂದು ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.

ರುದ್ರಮದೇವಿ

ರುದ್ರಮದೇವಿ

ಬಿಡುಗಡೆಗೆ ಸಜ್ಜಾಗಿರುವ ಅನುಷ್ಕಾ ಶೆಟ್ಟಿ ಅಭಿನಯದ ತೆಲುಗು ರುದ್ರಮದೇವಿ ಚಿತ್ರದ ಡಬ್ಬಿಂಗ್ ಹೈದರಾಬಾದಿನಲ್ಲಿ ನಡೆಯುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಕರ್ನಾಟಕದ ಹಂಚಿಕೆದಾರರು ಕನಕಪುರ ಶ್ರೀನಿವಾಸ್. ಆದರೆ ಡಬ್ಬಿಂಗ್ ಬಗ್ಗೆ ಇವರಿಂದ ಇದುವರೆಗೆ ಏನೂ ಸ್ಪಷ್ಟನೆ ಬಂದಿಲ್ಲ.

ನಿರ್ಣಾಯಕ ಹಂತಕ್ಕೆ ಬಂದು ನಿಂತ ಡಬ್ಬಿಂಗ್

ನಿರ್ಣಾಯಕ ಹಂತಕ್ಕೆ ಬಂದು ನಿಂತ ಡಬ್ಬಿಂಗ್

ಪುಲಿ ಮತ್ತು ರುದ್ರಮದೇವಿ ಚಿತ್ರಗಳು ಡಬ್ಬಿಂಗ್ ಆಗುತ್ತಿವೆ ಎನ್ನುವ ಸುದ್ದಿಯ ನಡುವೆ, ಡಬ್ಬಿಂಗ್ ವಿರೋಧಿಗಳ ಹೋರಾಟ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಒಂದು ಕಡೆ ಸಿಸಿಐ ಆದೇಶ ಉಲ್ಲಂಘಿಸುವಂತಿಲ್ಲ. ಇನ್ನೊಂದೆಡೆ ತಟಸ್ಥ ನಿಲುವು ತಾಳಿರುವ ಕೆಎಫ್ ಸಿಸಿ ಮಧ್ಯೆ, ಡಬ್ಬಿಂಗ್ ವಿರೋಧಿಗಳ ಹೋರಾಟ ಎಷ್ಟರ ಮಟ್ಟಿಗೆ ತಿರುವು ಪಡೆದುಕೊಳ್ಳುತ್ತದೆ /ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Vijay, Kichcha Sudeep starer Tamil movie Puli and Anushka Shetty starer Telugu movie Rudhramadevi all set to dubbed in Kannada.
Please Wait while comments are loading...

Kannada Photos

Go to : More Photos