»   » ಮುಗಿದಿಲ್ಲ ಪುನೀತ್ 'ಪವರ್ ಸ್ಟಾರ್' ಚಿತ್ರದ ಕಂಟಕ

ಮುಗಿದಿಲ್ಲ ಪುನೀತ್ 'ಪವರ್ ಸ್ಟಾರ್' ಚಿತ್ರದ ಕಂಟಕ

Written by: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನಿತ್ ಅಭಿನಯದ 'ಪವರ್ ಸ್ಟಾರ್' ಸಿನಿಮಾಗೆ ಕಂಟಕ ಇನ್ನೂ ಮುಗಿದ ಹಾಗೆ ಕಾಣ್ತಿಲ್ಲ. ನಾಲ್ಕು ಟೈಟಲ್ ಬದಲಾಯಿಸಿ ಐದನೇ ಟೈಟಲ್ ಆಗಿ 'ಪವರ್ ಸ್ಟಾರ್' ಅಂತ ಸೆಲೆಕ್ಟ್ ಮಾಡಿದ ಚಿತ್ರತಂಡಕ್ಕೆ ಈಗ 'ಪವರ್ ಸ್ಟಾರ್' ಟೈಟಲ್ ವಿವಾದ ಮತ್ತೆ ವಾಣಿಜ್ಯ ಮಂಡಳಿ ಅಂಗಳಕ್ಕೆ ಹೋಗಿದೆ.

ಪವರ್ ಸ್ಟಾರ್ ಟೈಟಲ್ ನಲ್ಲಿ ಎಲ್ಲೂ ಪವರ್ ನಂತರ ಸ್ಟಾರ್ ಅನ್ನೋ ಅಕ್ಷರಗಳು ಕಾಣಿಸೋದೇ ಇಲ್ಲ. ಕೆಲವೊಂದು ಪೋಸ್ಟರ್ ಗಳಲ್ಲಿ ಪವರ್ ನಂತರ ಎರಡು ಸ್ಟಾರ್ ಚಿನ್ಹೆ ಇದ್ರೆ ಮತ್ತೆ ಕೆಲವು ಪೋಸ್ಟರ್ ಗಳಲ್ಲಿ ಪವರ್ ನಂತರ ಮೂರು ಸ್ಟಾರ್ ಗಳಿದೆ. ಆದರೆ ಇದು ಈಗಾಗ್ಲೇ ರಿಜಿಸ್ಟರ್ ಆಗಿರೋ ಪವರ್ ಅನ್ನೊ ಸಿನಿಮಾದ ಟೈಟಲ್ ತರಹಾನೇ ಇದೆ. [ಬಳ್ಳಾರಿಯಲ್ಲಿ ಪುನೀತ್ 'ಪವರ್ ಸ್ಟಾರ್' ಆಡಿಯೋ]


ಸೂರ್ಯ ಅನ್ನೋರು ನಿರ್ಮಿಸಿ, ನಟಿಸ್ತಾ ಇರೋ ಪವರ್ ಸಿನಿಮಾ ಈಗಾಗ್ಲೇ ಶೂಟಿಂಗ್ ಶುರು ಮಾಡಿದೆ. ಚಿತ್ರ ಬಿಡುಗಡೆಗೆ ಕೂಡ ಪ್ಲಾನಿಂಗ್ ನಡೀತಿದೆ. ಹಾಗಾಗೀನೇ ನಮ್ಮ ಸಿನಿಮಾಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಅಂತ ದೂರು ನೀಡಿದ್ದಾರೆ. ಮುಂದೇನಾಗುತ್ತೋ ದೇವರೇ ಬಲ್ಲ.

ಏತನ್ಮಧ್ಯೆ ಪವರ್ ಸ್ಟಾರ್ ಚಿತ್ರ ಇದೇ ಜುಲೈ 25ಕ್ಕೆ ಬಿಡುಗಡೆ ಪ್ಲಾನ್ ಮಾಡಲಾಗಿದೆ. ಈಗಾಗಲೆ ಚಿತ್ರದ ಆಡಿಯೋವನ್ನು ಅದ್ದೂರಿಯಾಗಿ ಬಳ್ಳಾರಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಇದೀಗ ಮತ್ತೆ ಶೀರ್ಷಿಕೆ ವಿವಾದದಲ್ಲಿ ಚಿತ್ರ ಸಿಲುಕಿದೆ.

'ಪವರ್' ಸಿನಿಮಾ ತೆಲುಗಿನ ದೂಕುಡು ರೀಮೇಕ್. ಶ್ರೀನು ವೈಟ್ಲ ನಿರ್ದೇಶನದ 'ದೂಕುಡು' ಚಿತ್ರ ಬಾಕ್ಸ್ ಆಫೀಸಲ್ಲಿ ರು.100 ಕೋಟಿ ಗಳಿಸುವ ಮೂಲಕ ಟಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿತ್ತು. ಹಳಿತಪ್ಪಿದ್ದ ಮಹೇಶ್ ಬಾಬು ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರವಿದು. ನಂದಿ ಪ್ರಶಸ್ತಿ ಸೇರಿದಂತೆ ಫಿಲಂಫೇರ್ ಪ್ರಶಸ್ತಿಗಳಿಗೆ ಚಿತ್ರ ಪಾತ್ರವಾಗಿದೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ (ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ.

English summary
Power Star Puneeth Rajkumar most expected Kannada movie 'Power ***' lands in more controversy. The title 'Power' already registred by filmmaker called Surya. Now Puneeth movie facing one more trouble.
Please Wait while comments are loading...

Kannada Photos

Go to : More Photos