»   »  'ಪವರ್ ಸ್ಟಾರ್' ಪುನೀತ್ ರಾಜ್ ಗೆ ಸೆಂಚುರಿ ಸಡಗರ

'ಪವರ್ ಸ್ಟಾರ್' ಪುನೀತ್ ರಾಜ್ ಗೆ ಸೆಂಚುರಿ ಸಡಗರ

Posted by:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳು ಸೆಂಚುರಿ ಭಾರಿಸುವುದು ಹೊಸದಲ್ಲ. ಇದೀಗ ಅವರ ಸೆಂಚುರಿ ಚಿತ್ರಗಳ ಪಟ್ಟಿಗೆ ಅವರ 'ಪವರ್ ***' ಸೇರ್ಪಡೆಯಾಗಿದೆ. ಈ ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಸೆಂಚುರಿ ಪೂರೈಸಿದೆ.

ಈ ಮೂಲಕ ಪುನೀತ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎಂಬುದು ಸಾಬೀತಾಗಿದೆ. ಕೆ ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತೆಲುಗಿನ 'ದೂಕುಡು' ಚಿತ್ರದ ರೀಮೇಕ್. ಇದು ರೀಮೇಕ್ ಚಿತ್ರವಾದರೂ ಪುನೀತ್ ಅವರು ಡಾನ್ಸ್, ಫೈಟ್ಸ್ ನಲ್ಲಿ ಗಮನಸೆಳೆಯುತ್ತಾರೆ. [ಪವರ್ *** ಚಿತ್ರ ವಿಮರ್ಶೆ]

puneeth-power-star-completes-100-days

ಒಂದೇ ವಾರದ ಚಿತ್ರದ ಬಜೆಟ್ ವಸೂಲಿ ಮಾಡಿರುವುದು ಪವರ್ *** ಚಿತ್ರದ ಹೆಗ್ಗಳಿಕೆಗಳಲ್ಲಿ ಒಂದು. ಇದುವರೆಗೂ ಚಿತ್ರದ ಒಟ್ಟಾರೆ ಗಳಿಕೆ ರು.50 ಕೋಟಿ ದಾಟಿದೆ ಎನ್ನುತ್ತವೆ ಮೂಲಗಳು. ರು.50 ಕೋಟಿ ಕ್ರಾಸ್ ಮಾಡಿದ ಸ್ಯಾಂಡಲ್ ವುಡ್ ನ ಮೊದಲ ಚಿತ್ರ 'ಪವರ್ ***' ಎಂಬುದು ಇನ್ನೊಂದು ವಿಶೇಷ.

ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದುವರೆಗೂ ರು.69 ಕೋಟಿ ಕಲೆಕ್ಷನ್ ಮಾಡಿದ್ದು ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿದ್ದಾರೆ ಪುನೀತ್. ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರದು ಸಮರ್ಥ್ ವೆಂಚರ್ಸ್, ಹೈದರಾಬಾದ್ ಕರ್ನಾಕಕ್ಕೆ ಶ್ರೀ ಗಣೇಶ್ ಪಿಕ್ಚರ್ಸ್ (ಗಂಗಾವತಿ). ರಾಮ್ ಅಚಂಟ, ಗೋಪಿಚಂದ್ ಅಚಂಟ, ಅನಿಲ್ ಸುಂಕರ ನಿರ್ಮಾಣದ ಈ ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ.

ಈ ಚಿತ್ರದ ಮೂಲಕ ತ್ರಿಷಾ ಕೃಷ್ಣನ್ ಅವರು ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ರಾಜಕುಮಾರ ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಪವರ್ *** ಎಂದು ಬದಲಾಯಿಸಲಾಯಿತು. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar's 'Power ***' movie completes successfully 100 days. The movie got their budget in just 1 weeks. According to the sources movie already joins Rs.50 crore club and till now it reaches Rs. 69 crore.
Please Wait while comments are loading...
Best of 2016

Kannada Photos

Go to : More Photos