»   » ಒಂಬತ್ತು ವರ್ಷಗಳ ನಂತರ ಒಂದಾದ ಪುನೀತ್-ರಮ್ಯಾ ಜೋಡಿ

ಒಂಬತ್ತು ವರ್ಷಗಳ ನಂತರ ಒಂದಾದ ಪುನೀತ್-ರಮ್ಯಾ ಜೋಡಿ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಜೋಡಿ ಮಾಡಿದ ಮೋಡಿ ಮರೆಯುವ ಹಾಗೇ ಇಲ್ಲ.

'ಅಭಿ', 'ಆಕಾಶ್' ಮತ್ತು 'ಅರಸು' ದಂತಹ ಹಿಟ್ ಸಿನಿಮಾಗಳನ್ನ ಕೊಟ್ಟ ಈ ಜೋಡಿ ಇದೀಗ ಒಂಬತ್ತು ವರ್ಷಗಳ ನಂತರ ಮತ್ತೊಮ್ಮೆ ಒಂದಾಗಿದ್ದಾರೆ. 'ವಾವ್..!' ಅಂತ ನೀವೆಲ್ಲಾ ಹುಬ್ಬೇರಿಸುವ ಮುನ್ನ ಪೂರ್ತಿ ಮ್ಯಾಟರ್ ಓದಿ....

Puneeth Rajkumar and Ramya shoots for LED bulb add

ನಟಿ ಮತ್ತು ರಾಜಕಾರಣಿ ರಮ್ಯಾ ಮತ್ತು ಪುನೀತ್ ರಾಜ್ ಕುಮಾರ್ ಈಗ ಒಂದಾಗಿರುವುದು ಸಿನಿಮಾಗಾಗಿ ಅಲ್ಲ. ಬದಲಾಗಿ ಕರ್ನಾಟಕ ಸರ್ಕಾರ ಆಯೋಜಿಸಿರುವ ಎಲ್.ಇ.ಡಿ ಬಲ್ಬ್ ವಿಶೇಷ ಜಾಹೀರಾತಿನಲ್ಲಿ. [ನಿಮ್ಮ ಮನೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪಣ ತೊಟ್ಟ ಅಪ್ಪು-ರಮ್ಯಾ]

ಇಂಧನ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರ ಆಯೋಜಿಸಿರುವ ಎಲ್.ಇ.ಡಿ ಬಲ್ಬ್ ಜಾಗೃತಿ ಕಾರ್ಯಕ್ರಮಕ್ಕೆ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಪ್ರಚಾರ ರಾಯಭಾರಿಗಳು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

ಹೀಗಾಗಿ, ಜಾಹೀರಾತು ಶೂಟಿಂಗ್ ನಲ್ಲಿ ಅಪ್ಪು-ರಮ್ಯಾ ಒಟ್ಟಾಗಿ ಕ್ಯಾಮರಾ ಮುಂದೆ ಬಂದಿದ್ದಾರೆ. ಸದ್ಯದಲ್ಲೇ ಜಾಹೀರಾತು ಪ್ರಸಾರವಾಗಲಿದೆ.

English summary
After 9 long years, Kannada Actor Puneeth Rajkumar and Kannada Actress Ramya share on-screen space for LED bulb add organized by Government of Karnataka.
Please Wait while comments are loading...

Kannada Photos

Go to : More Photos