»   » ಕಡೆಗೂ ಅಭಿಮಾನಿಗಳ ಆಸೆಗೆ 'ತಥಾಸ್ತು' ಎಂದ ಪುನೀತ್ ರಾಜ್ ಕುಮಾರ್.!

ಕಡೆಗೂ ಅಭಿಮಾನಿಗಳ ಆಸೆಗೆ 'ತಥಾಸ್ತು' ಎಂದ ಪುನೀತ್ ರಾಜ್ ಕುಮಾರ್.!

Posted by:
Subscribe to Filmibeat Kannada

ಕೋಟ್ಯಾಂತರ ಅಭಿಮಾನಿಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರನ್ನ ಭೇಟಿ ಮಾಡಿ, ಮಾತನಾಡುವ ಕನಸು. ಆದ್ರೆ ಅದೆಷ್ಟು ಜನಕ್ಕೆ 'ಆ' ಕನಸು ಈಡೇರುತ್ತೆ ಹೇಳಿ..?

ಎಲ್ಲರಿಗೂ ಸ್ಟಾರ್ ಗಳು ಅಷ್ಟು ಸುಲಭವಾಗಿ ಸಿಕ್ಕಲ್ಲ. ಸಿಕ್ಕಿದ್ದರೂ, ಮಾತನಾಡುವುದು ಅಷ್ಟು ಸುಲಭವಲ್ಲ.! ಅಭಿಮಾನಿಗಳ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಕಿಚ್ಚ ಸುದೀಪ್, ದರ್ಶನ್, ಯಶ್, ರಮ್ಯಾ, ಗಣೇಶ್ ಸೇರಿದಂತೆ ಅನೇಕ ತಾರೆಯರು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿದ್ದಾರೆ. [ಪುನೀತ್ ರಾಜ್ ಕುಮಾರ್ ಮೇಲೆ ಅಭಿಮಾನಿ ದೇವರುಗಳ ಸಿಟ್ಟು-ಸಿಡುಕು!]

ಇವರೆಲ್ಲರಂತೆ, ಅಪ್ಪು ಕೂಡ ಸೋಷಿಯಲ್ ಮೀಡಿಯಾಗೆ ಕಾಲಿಡಬೇಕು ಎಂಬುದು 'ಪವರ್' ಫ್ಯಾನ್ಸ್ ಬಯಕೆ ಆಗಿತ್ತು. ಈಗ ತಮ್ಮ ಭಕ್ತರಿಗೆ ಅಪ್ಪು 'ತಥಾಸ್ತು' ಎಂದಿದ್ದಾರೆ. ಮುಂದೆ ಓದಿ....

ಫೇಸ್ ಬುಕ್ ಗೆ ಎಂಟ್ರಿಕೊಟ್ಟ ಪುನೀತ್ ರಾಜ್ ಕುಮಾರ್

ಫೇಸ್ ಬುಕ್ ಗೆ ಎಂಟ್ರಿಕೊಟ್ಟ ಪುನೀತ್ ರಾಜ್ ಕುಮಾರ್

ಕಡೆಗೂ ನಿಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಗೆ ಕಾಲಿಟ್ಟಿದ್ದಾರೆ. ಫೇಸ್ ಬುಕ್ ಪುಟದ ಮೂಲಕ ನಿಮ್ಮೆಲ್ಲರ ಜೊತೆ ಕನೆಕ್ಟ್ ಆಗಿರಲಿದ್ದಾರೆ ಅಪ್ಪು. ['ಪವರ್ ಸ್ಟಾರ್' ಕ್ರೇಜ್ ಕಮ್ಮಿ ಆಗಿದೆ: ಆತಂಕಗೊಂಡ ಅಭಿಮಾನಿಗಳಿಂದ ಅಪ್ಪುಗೆ ಪತ್ರ!]

ನಕಲಿ ಪೇಜ್ ಗಳಿವೆ ಅನೇಕ!

ನಕಲಿ ಪೇಜ್ ಗಳಿವೆ ಅನೇಕ!

ಚಿತ್ರರಂಗಕ್ಕೆ ಎಂಟ್ರಿಕೊಟ್ಟು ವರ್ಷಗಳೇ ಉರುಳಿದರೂ, ಅಪ್ಪು ಇದುವರೆಗೂ ಫೇಸ್ ಬುಕ್ ಅಕೌಂಟ್ ಓಪನ್ ಮಾಡಿರ್ಲಿಲ್ಲ. ಅಪ್ಪು ಫ್ಯಾನ್ ಕ್ಲಬ್ ಅಕೌಂಟ್ ಗಳನ್ನ ಹೊರತು ಪಡಿಸಿ 'ಪುನೀತ್ ರಾಜ್ ಕುಮಾರ್' ಹೆಸರಿನಲ್ಲಿ ಅನೇಕ ಫೇಸ್ ಬುಕ್ ಅಕೌಂಟ್ ಗಳಿವೆ. ಆದ್ರೆ, ಅವೆಲ್ಲವೂ ಫೇಕ್ ಅಕೌಂಟ್ಸ್.

ಅಭಿಮಾನಿಗಳ ಜೊತೆ ಕನೆಕ್ಟ್ ಆದ ಅಪ್ಪು

ಅಭಿಮಾನಿಗಳ ಜೊತೆ ಕನೆಕ್ಟ್ ಆದ ಅಪ್ಪು

ಯಾರಿಂದಲೋ ತಮ್ಮ ಹೆಸರು ದುರ್ಬಳಕೆ ಆಗಬಾರದು ಮತ್ತು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಬೇಕು ಎಂಬ ಉತ್ಸಾಹದಿಂದ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಗೆ ಪದಾರ್ಪಣೆ ಮಾಡಿದ್ದಾರೆ.

'ದೊಡ್ಮನೆ ಹುಡ್ಗ'ನಿಗೆ ಪ್ರಮೋಷನ್

'ದೊಡ್ಮನೆ ಹುಡ್ಗ'ನಿಗೆ ಪ್ರಮೋಷನ್

'ದೊಡ್ಮನೆ ಹುಡ್ಗ' ಬಿಡುಗಡೆ ಆಗಿರುವ ಸಂದರ್ಭದಲ್ಲಿ ಫೇಸ್ ಬುಕ್ ಲೋಕಕ್ಕೆ ಪುನೀತ್ ಎಂಟ್ರಿಕೊಟ್ಟಿದ್ದಾರೆ. ಆ ಮೂಲಕ ತಮ್ಮ ಫೇಸ್ ಬುಕ್ ಪುಟದಿಂದ ಚಿತ್ರಕ್ಕೆ ಭರ್ಜರಿ ಪ್ರಮೋಷನ್ ನೀಡುತ್ತಿದ್ದಾರೆ.

ಪುನೀತ್ ಅಕೌಂಟ್ ವೆರಿಫೈಡ್.!

ಪುನೀತ್ ಅಕೌಂಟ್ ವೆರಿಫೈಡ್.!

ಈಗಾಗಲೇ ಪುನೀತ್ ರವರ ಫೇಸ್ ಬುಕ್ ಪೇಜ್ ನ ಎರಡುವರೆ ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿ, ಫಾಲೋ ಮಾಡುತ್ತಿದ್ದಾರೆ. ಪುನೀತ್ ಅಕೌಂಟ್ ಕೂಡ ವೆರಿಫೈ ಆಗಿದೆ.

ಟ್ವಿಟ್ಟರ್ ಗೆ ಇನ್ನೂ ಕಾಲಿಟ್ಟಿಲ್ಲ.!

ಟ್ವಿಟ್ಟರ್ ಗೆ ಇನ್ನೂ ಕಾಲಿಟ್ಟಿಲ್ಲ.!

ಸದ್ಯಕ್ಕೆ ಫೇಸ್ ಬುಕ್ ಗೆ ಮಾತ್ರ ಅಂದರ್ ಆಗಿರುವ ಪುನೀತ್ ಇನ್ನೂ ಟ್ವಿಟ್ಟರ್ ಲೋಕಕ್ಕೆ ಬರುವ ಮನಸ್ಸು ಮಾಡಿಲ್ಲ. ಪುನೀತ್ ಫ್ಯಾನ್ಸ್ ಕ್ಲಬ್ ಮಾತ್ರ ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿದ್ದಾರೆ.

ಅಪ್ಪುಗೆ ಲೆಟರ್ ಬರೆದಿದ್ದ ಅಭಿಮಾನಿಗಳು

ಅಪ್ಪುಗೆ ಲೆಟರ್ ಬರೆದಿದ್ದ ಅಭಿಮಾನಿಗಳು

ಅಭಿಮಾನಿಗಳಿಗೆ ಅಪ್ಪು ಹತ್ತಿರವಾಗಬೇಕು, ಬಿಡುವಿನ ಸಮಯದಲ್ಲಿ ಅಪ್ಪು ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣದ ಮುಖಾಂತರ ಮಾತನಾಡಬೇಕು ಅಂತ ಅಪ್ಪುಗೆ ಫ್ಯಾನ್ಸ್ ಲೆಟರ್ ಬರೆದಿದ್ದರು. ಅಭಿಮಾನಿಗಳ ಆಸೆ ನೆರವೇರಿಸಲು ಅಪ್ಪು ಫೇಸ್ ಬುಕ್ ಗೆ ಬಂದಿದ್ದಾರೆ.

ಹಾಗಾದ್ರೆ ಇನ್ಯಾಕೆ ತಡ?

ಹಾಗಾದ್ರೆ ಇನ್ಯಾಕೆ ತಡ?

ಪುನೀತ್ ರಾಜ್ ಕುಮಾರ್ ರವರ ಜೊತೆ ನೇರವಾಗಿ ಮಾತನಾಡುವ ಆಸೆ ನಿಮಗೆ ಇದ್ದರೆ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ ಪೇಜ್ ಗೆ ಭೇಟಿ ಕೊಡಿ....ಇದು ಅವರ ಅಫೀಶಿಯಲ್ ಫೇಸ್ ಬುಕ್ ಪೇಜ್.

English summary
Kannada Actor Puneeth Rajkumar has finally entered Facebook. Power Star fans can interact with Puneeth on RealPuneethRajkumar id.
Please Wait while comments are loading...

Kannada Photos

Go to : More Photos