twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆ ನಿರ್ದೇಶಕರ ಪ್ರೀತಿಗೆ ಪಾತ್ರರಾದ 'ಪವರ್ ಸ್ಟಾರ್' ಪುನೀತ್

    By Bharath Kumar
    |

    ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಂದ್ರೆ ಪರಭಾಷಾ ನಿರ್ದೇಶಕರಿಗೆ ಒಂಥರಾ ಇಷ್ಟ. ಸಾಮಾನ್ಯವಾಗಿ ತಮಿಳು ಅಥವಾ ತೆಲುಗು ನಿರ್ದೇಶಕರುಗಳು ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾದರೇ, ಅವರ ಮೊದಲ ಆಯ್ಕೆಯೇ ಪವರ್ ಸ್ಟಾರ್ ಆಗಿರ್ತಾರೆ ಅಂದ್ರೆ ನಂಬಲೇಬೇಕು.

    ಇದಕ್ಕೆ ತಾಜಾ ಉದಾಹರಣೆ ತಮಿಳಿನ ಯುವ ನಿರ್ದೇಶಕ ವೆಟ್ರಿಮಾರನ್ ಜೊತೆಗೆ ಪುನೀತ್ ರಾಜ್ ಕುಮಾರ್ ಸಿನಿಮಾ ಮಾಡುವುದಕ್ಕೆ ಒಪ್ಪಿಕೊಂಡಿರುವುದು. ಅಂದ್ಹಾಗೆ, ಪರಭಾಷಾ ನಿರ್ದೇಶಕರು ಪುನೀತ್ ಅವರನ್ನ ಇಷ್ಟಪಟ್ಟಿರುವುದು ಇದೇ ಮೊದಲಲ್ಲ. ಈ ಸಂಪ್ರದಾಯ 'ಅಪ್ಪು' ಚಿತ್ರದಿಂದಲೂ ನಡೆದುಕೊಂಡು ಬಂದಿದೆ.[ಮತ್ತೊಂದು ತಮಿಳು ರಿಮೇಕ್ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್?]

    ಹಾಗಾದ್ರೆ, ಪುನೀತ್ ಚಿತ್ರಗಳ ಮೂಲಕ ಯಾವೆಲ್ಲ ನಿರ್ದೇಶಕರು ಕನ್ನಡಕ್ಕೆ ಬಂದಿದ್ದಾರೆ ಎಂಬ ಮಾಹಿತಿ ಇಲ್ಲಿದೆ.....

    'ಅಪ್ಪು'ಗಾಗಿ ಕನ್ನಡಕ್ಕೆ ಬಂದಿದ್ದ 'ಪೂರಿ'

    'ಅಪ್ಪು'ಗಾಗಿ ಕನ್ನಡಕ್ಕೆ ಬಂದಿದ್ದ 'ಪೂರಿ'

    ಪುನೀತ್ ರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ ಚೊಚ್ಚಲ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪರಭಾಷೆ ನಿರ್ದೇಶಕರು ಎಂಬುವುದು ಗಮನಿಸಬೇಕಾದ ವಿಚಾರ. ಹೌದು, ಇಂದು ತೆಲುಗಿನ ಸ್ಟಾರ್ ಡೈರೆಕ್ಟರ್ ಎನಿಸಿಕೊಂಡಿರುವ ಪೂರಿ ಜಗನ್ನಾಥ್ ಪುನೀತ್ ಜೊತೆ ಸಿನಿಮಾ ಮಾಡುವ ಮೂಲಕ ಕನ್ನಡಕ್ಕೆ ಬಂದಿದ್ದರು. ಇದು ಇವರು ಮೊದಲ ಹಾಗೂ ಕೊನೆಯ ಕನ್ನಡ ಚಿತ್ರವಾಗಿದೆ.

    ವೀರಶಂಕರ್ ನಿರ್ದೇಶನದ 'ನಮ್ಮ ಬಸವ'

    ವೀರಶಂಕರ್ ನಿರ್ದೇಶನದ 'ನಮ್ಮ ಬಸವ'

    ತೆಲುಗಿನಲ್ಲಿ 'ಗುಡುಂಬಾ ಶಂಕರ್', 'ಪ್ರೇಮಕೋಸಂ' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ವೀರಶಂಕರ್ ಅವರು ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ನಮ್ಮ ಬಸವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖಾತೆ ತೆರೆದಿದ್ದರು.

    ತೆಲುಗು ನಿರ್ದೇಶಕನ 'ನಿನ್ನಿಂದಲೇ'

    ತೆಲುಗು ನಿರ್ದೇಶಕನ 'ನಿನ್ನಿಂದಲೇ'

    ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್ 'ಜಯಂತ್ ಸಿ ಪರಾಂಜಿ' ಪುನೀತ್ ರಾಜ್ ಕುಮಾರ್ ಅವರ ನಿನ್ನಿಂದಲೇ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದರ್ಪಣೆ ಮಾಡಿದ್ದರು.

    'ಯಾರೇ ಕೂಗಾಡಲಿ' ಎಂದಿದ್ದ ಸಮುದ್ರಕಣಿ

    'ಯಾರೇ ಕೂಗಾಡಲಿ' ಎಂದಿದ್ದ ಸಮುದ್ರಕಣಿ

    ಪ್ರಯೋಗಾತ್ಮಕ, ಕಮರ್ಷಿಯಲ್ ಸಿನಿಮಾಗಳಿಗೆ ಖ್ಯಾತಿ ಪಡೆದುಕೊಂಡಿರುವ ತಮಿಳಿನ ಸ್ಟಾರ್ ಡೈರೆಕ್ಟರ್ ಸಮುದ್ರಕಣಿ, ತಮ್ಮ ಯಶಸ್ವಿ ಚಿತ್ರಗಳ ಮೂಲಕ ಗಮನ ಸೆಳೆದವರು. ತಮಿಳು ಹಾಗೂ ತೆಲುಗಿನಲ್ಲಿ ತಾವೇ ನಿರ್ದೇಶನ ಮಾಡಿದ್ದ ಚಿತ್ರವೊಂದನ್ನ ಕನ್ನಡಕ್ಕೆ ರೀಮೇಕ್ ಮಾಡುವಾಗ ಪುನೀತ್ ಗೆ ಆಕ್ಷನ್ ಕಟ್ಸ ಹೇಳಿದ್ದು ಅದೇ ಸಮುದ್ರಕಣಿ. ಆ ಚಿತ್ರವೇ 'ಯಾರೆ ಕೂಗಾಡಲಿ'

    'ಚಕ್ರವ್ಯೂಹ' ನಿರ್ದೇಶಿಸಿದ್ದ ಸರವಣನ್

    'ಚಕ್ರವ್ಯೂಹ' ನಿರ್ದೇಶಿಸಿದ್ದ ಸರವಣನ್

    ತಮಿಳಿನ ಯುವ ನಿರ್ದೇಶಕ ಎಂ.ಸರವಣನ್ ಕನ್ನಡದಲ್ಲಿ ಸಿನಿಮಾ ಮಾಡಬೇಕು ಎಂದಾಗ ಮೊದಲು ಆಯ್ಕೆ ಮಾಡಿಕೊಂಡಿದ್ದು ಪುನೀತ್ ರಾಜ್ ಕುಮಾರ್ ಅವರನ್ನ. ಹೀಗಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಚಿತ್ರವೇ 'ಚಕ್ರವ್ಯೂಹ'.

    'ಗೌತಮ್ ಮೆನನ್'ಗೂ ಪುನೀತ್ ಇಷ್ಟ

    'ಗೌತಮ್ ಮೆನನ್'ಗೂ ಪುನೀತ್ ಇಷ್ಟ

    ದಕ್ಷಿಣದ ಮತ್ತೊಬ್ಬ ಯಶಸ್ವಿ ನಿರ್ದೇಶಕ ಗೌತಮ್ ಮೆನನ್. ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ನಿರ್ದೇಶಕ. ಸೂರ್ಯ, ಅಜಿತ್, ಕಮಲ್ ಹಾಸನ್, ವೆಂಕಟೇಶ್ ಅಂತವರ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಗೌತಮ್ ಮೆನನ್ ಇದೀಗ ಕನ್ನಡದಲ್ಲಿ ತಮ್ಮ ಚೊಚ್ಚಲ ಚಿತ್ರಕ್ಕೆ ಸಿದ್ದವಾಗುತ್ತಿದ್ದಾರೆ. ಮೂಲಗಳ ಪ್ರಕಾರ ಗೌತಮ್ ಅವರ ಈ ಪ್ರಾಜೆಕ್ಟ್ ಗೆ ಪುನೀತ್ ರಾಜ್ ಕುಮಾರ್ ನಾಯಕ ಎಂದು ಹೇಳಲಾಗುತ್ತಿದೆ.

    ಕನ್ನಡಕ್ಕೆ 'ವೆಟ್ರಿಮಾರನ್'!

    ಕನ್ನಡಕ್ಕೆ 'ವೆಟ್ರಿಮಾರನ್'!

    'ಕಾಕಮುಟ್ಟೈ', 'ವಿಸಾರಣೈ' ಅಂತ ಚಿತ್ರಗಳಿಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ವೆಟ್ರಿಮಾರನ್ ಈಗ ಕನ್ನಡಕ್ಕೆ ಬರುವ ತಯಾರಿ ಮಾಡಿಕೊಂಡಿದ್ದಾರೆ. ಅಂದ್ಹಾಗೆ, ವೆಟ್ರಿಮಾರನ್ ಕನ್ನಡದಲ್ಲಿ ನಿರ್ದೇಶನ ಮಾಡಲು ಆಯ್ಕೆ ಮಾಡಿಕೊಂಡಿರುವ ನಟ ಪುನೀತ್ ರಾಜ್ ಕುಮಾರ್. ಈಗಾಗಲೇ ವೆಟ್ರಿಮಾರನ್ ಹಾಗೂ ಪುನೀತ್ ಒಂದು ಸುತ್ತ ಭೇಟಿ ಮಾಡಿದ್ದಾರೆ. ಆದ್ರೆ, ಯಾವುದೇ ಅಂತಿಮ ನಿರ್ಣಯಗಳು ಹೊರ ಬಿದ್ದಿಲ್ಲ.

    English summary
    Why Kannada Actor Puneeth Rajkumar Is Favourite For Other industry Directors.
    Friday, February 17, 2017, 15:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X