»   » 40 ವರ್ಷಗಳ ಬಳಿಕ ದ್ವಾರಕೀಶ್-ಡಾ.ರಾಜ್ ಕುಮಾರ್ ಕುಟುಂಬ ಸಮಾಗಮ

40 ವರ್ಷಗಳ ಬಳಿಕ ದ್ವಾರಕೀಶ್-ಡಾ.ರಾಜ್ ಕುಮಾರ್ ಕುಟುಂಬ ಸಮಾಗಮ

Posted by:
Subscribe to Filmibeat Kannada

ಹಲವು ವಿಶೇಷತೆಗಳಿಂದ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿರುವ 'ಚೌಕ' ಚಿತ್ರತಂಡದ ಕಡೆಯಿಂದ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿ ಹೊರಬಿದ್ದಿದೆ.

ಬರೋಬ್ಬರಿ 40 ವರ್ಷಗಳ ಬಳಿಕ 'ಕನ್ನಡದ ಕುಳ್ಳ' ದ್ವಾರಕೀಶ್ ಮತ್ತು ಡಾ.ರಾಜ್ ಕುಮಾರ್ ಕುಟುಂಬ ಒಂದಾಗಿದೆ. ಇದಕ್ಕೆ ಕಾರಣವಾಗಿರುವುದು 'ಚೌಕ' ಎಂಬುದೇ ಚಿತ್ರತಂಡದ ಹೆಗ್ಗಳಿಕೆ.

ಅಂದು 'ಭಾಗ್ಯವಂತರು' ಇಂದು 'ಚೌಕ'

ಅಂದು 'ಭಾಗ್ಯವಂತರು' ಇಂದು 'ಚೌಕ'

1977 ರಲ್ಲಿ ಬಿಡುಗಡೆ ಆದ ಡಾ.ರಾಜ್ ಕುಮಾರ್ ಅಭಿನಯದ 'ಭಾಗ್ಯವಂತರು' ಚಿತ್ರವನ್ನ ದ್ವಾರಕೀಶ್ ನಿರ್ಮಿಸಿದ್ದರು. ಅಂದು ಅಣ್ಣಾವ್ರ ಈ ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ ದಾಖಲೆ ಮಾಡಿದ್ದು ಸುಳ್ಳಲ್ಲ. 'ಭಾಗ್ಯವಂತರು' ಚಿತ್ರದ ಬಳಿಕ ದ್ವಾರಕೀಶ್ ಮತ್ತು ಡಾ.ರಾಜ್ ಕುಮಾರ್ ಕುಟುಂಬ ಒಂದಾಗಿರುವುದು 'ಚೌಕ' ಚಿತ್ರದಲ್ಲಿಯೇ..! [ಇದಪ್ಪಾ ಕುಳ್ಳ ದ್ವಾರಕೀಶ್ ಅವರ ಹೊಸ ಸಾಹಸ ಅಂದ್ರೆ]

'ಚೌಕ' ಚಿತ್ರಕ್ಕೆ ಪುನೀತ್ ಗಾಯನ

'ಚೌಕ' ಚಿತ್ರಕ್ಕೆ ಪುನೀತ್ ಗಾಯನ

'ಚೌಕ' ಚಿತ್ರಕ್ಕಾಗಿ ಡಾ.ರಾಜ್ ಕುಮಾರ್ ರವರ ಮುದ್ದಿನ ಮಗ ಪುನೀತ್ ರಾಜ್ ಕುಮಾರ್ ಒಂದು ಗೀತೆಯನ್ನು ಹಾಡಿದ್ದಾರೆ. [ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

ಅನೂಪ್ ಸೀಳಿನ್ ಸಂಗೀತ ಸಂಯೋಜನೆ

ಅನೂಪ್ ಸೀಳಿನ್ ಸಂಗೀತ ಸಂಯೋಜನೆ

'ಚೌಕ' ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಗಾಯನ ಇರುವ ಹಾಡಿಗೆ ಅನೂಪ್ ಸೀಳಿನ್ ಸಂಗೀತ, 'ಬಹದ್ದೂರ್' ಚೇತನ್ ಸಾಹಿತ್ಯ ಇದೆ. [ದ್ವಾರಕೀಶ್ ನಿರ್ಮಾಣದ 'ಚೌಕ' ಚಿತ್ರ ಬಿಡುಗಡೆ ಯಾವಾಗ.?]

ಹೊಸ ಸಂಗಮ

ಹೊಸ ಸಂಗಮ

ಅಂದು ಡಾ.ರಾಜ್ ಕುಮಾರ್-ದ್ವಾರಕೀಶ್ ಸಮಾಗಮವಾದಂತೆ 40 ವರ್ಷಗಳ ಬಳಿಕ ಇಂದು ಅವರ ಪುತ್ರರಾದ ಪುನೀತ್ ರಾಜ್ ಕುಮಾರ್-ಯೋಗೀಶ್ ದ್ವಾರಕೀಶ್ ಸಂಗಮವಾಗಿದೆ.

'ಚೌಕ' ಚಿತ್ರದ ಕುರಿತು...

'ಚೌಕ' ಚಿತ್ರದ ಕುರಿತು...

ಪ್ರೇಮ್, ದಿಗಂತ್, ಪ್ರಜ್ವಲ್ ದೇವರಾಜ್, ವಿಜಯ್ ರಾಘವೇಂದ್ರ, ಪ್ರಿಯಾಮಣಿ, ದೀಪಾ ಸನ್ನಿಧಿ, ಐಂದ್ರಿತಾ ರೇ, ಭಾವನ ನಟಿಸಿರುವ ಮಲ್ಟಿ ಸ್ಟಾರರ್ ಸಿನಿಮಾ 'ಚೌಕ'. ನಂದಕಿಶೋರ್ ಸಹೋದರ ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿರುವ ಚೊಚ್ಚಲ ಚಿತ್ರ ಇದು. ಅಂದ್ಹಾಗೆ, 'ಚೌಕ' ದ್ವಾರಕೀಶ್ ನಿರ್ಮಾಣದ 50ನೇ ಚಿತ್ರ.

English summary
Power Star Puneeth Rajkumar has crooned for a song in Dwarakish's 'Chowka'.
Please Wait while comments are loading...

Kannada Photos

Go to : More Photos