»   » 'ಅಭಿಮಾನಿ'ಗಳನ್ನು ಬಣ್ಣಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ'

'ಅಭಿಮಾನಿ'ಗಳನ್ನು ಬಣ್ಣಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ'

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ನಂತರ ಸ್ಯಾಂಡಲ್ ವುಡ್ ನ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾವಿರಾರು ಅಭಿಮಾನಿಗಳ ನಡುವೆ ನಿಂತು ಡ್ಯಾನ್ಸ್ ಮಾಡಿ ಸುದ್ದಿ ಮಾಡಿದ್ದಾರೆ.

ದುನಿಯಾ ಸೂರಿ ನಿರ್ದೇಶನದ 'ದೊಡ್ಮನೆ ಹುಡುಗ' ಚಿತ್ರದ 'ಅಭಿಮಾನಿಗಳೇ ನಮ್ಮನೇ ದೇವ್ರು' ಅನ್ನೋ ಹಾಡಿಗಾಗಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಂಡದೊಂದಿಗೆ ಇಡೀ ಕರ್ನಾಟಕದಲ್ಲಿ ಟ್ರಿಪ್ ಹೊಡೆದು ಹಾಡಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದಾರೆ.[ಹುಬ್ಬಳ್ಳಿ ಹೈದರು ಕುಣಿದು ಕುಪ್ಪಳಿಸುವಂತೆ ಮಾಡಿದ ಪುನೀತ್]

Puneeth Rajkumar starrer 'Dodmane Huduga' shooting complete

ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಚಿತ್ರದುರ್ಗ ಮತ್ತು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಎರಡು ದಿನಗಳ ಕಾಲ ಅಭಿಮಾನಿಗಳನ್ನು ಬಣ್ಣಿಸಿರುವ 'ದೊಡ್ಮನೆ ಹುಡುಗ' ಚಿತ್ರತಂಡ ಕೊನೆಯ ಹಾಡಿನ ಚಿತ್ರೀಕರಣವನ್ನು ಮುಗಿಸಿ ಇದೀಗ ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಖುಷಿಯಲ್ಲಿ ಕುಂಬಳಕಾಯಿ ಒಡೆದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳತ್ತ ಗಮನ ಹರಿಸಿದೆ.['ಹೊಸಪೇಟೆ'ಯಲ್ಲಿ ಪುನೀತ್ ಗೆ ಗಾಳಿಯಲ್ಲಿ ಮುತ್ತಿಕ್ಕಿದ ಅಭಿಮಾನಿಗಳು]

ಈ ಅದ್ಧೂರಿ ಬಜೆಟ್ ನ ಕೊನೆಯ ಹಾಡಿನ ಶೂಟಿಂಗ್ ಗೆ ಯಾವುದೇ ರೀತಿಯ ವಿಘ್ನಗಳು ಉಂಟಾಗದೇ ಯಶಸ್ವಿಯಾಗಿ ಮುಗಿದಿದ್ದಕ್ಕೆ ನಿರ್ದೇಶಕ ದುನಿಯಾ ಸೂರಿ ಅವರು ಸಂತಸ ವ್ಯಕ್ತಪಡಿಸಿದ್ದು, ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಇನ್ನು ಈ ವಿಶೇಷ ಹಾಡಿನ ಶೂಟಿಂಗ್ ಬಗ್ಗೆ ಪುನೀತ್ ಹೀಗನ್ನುತ್ತಾರೆ "ಈ ಒಂದು ವಾರ ನನ್ನ ಜೀವನದಲ್ಲೇ ಅವಿಸ್ಮರಣೀಯ, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ ಹಾಗೂ ಚಿತ್ರದುರ್ಗದ ಜನ ತೋರಿಸಿದ ಪ್ರೀತಿ-ಅಕ್ಕರೆ-ಅಭಿಮಾನವನ್ನು ಯಾವತ್ತೂ ಮರೆಯೋಕ್ಕಾಗಲ್ಲ..ಹಿಂದೆ ಅಪ್ಪಾಜಿ ಜೊತೆ ಸಮಾರಂಭಗಳಿಗೆ ಹೋದಾಗ ಈ ತರ ಜನ ಸಾಗರ ನೋಡ್ತಿದ್ದೆ..ಈಗ ಅದೆಲ್ಲ ನೆನಪಾಗುತ್ತಿದೆ..ಈ ಒಂದು ವಾರದಲ್ಲಿ ನನ್ನ ಈ ಕೈ ಲಕ್ಷ ಜನರನ್ನು ಮುಟ್ಟಿದೆ..ನಾನೇ ಧನ್ಯ" ಎಂದು ಮನದಾಳದ ಮಾತನ್ನು ಹೊರಹಾಕಿದ್ದಾರೆ.[ದೊಡ್ಮನೆ 'ಅಪ್ಪು'ವನ್ನು ಅಪ್ಪಿಕೊಂಡ ಅಭಿಮಾನಿ ದೇವರುಗಳು]

ಬಿಗ್ ಬಜೆಟ್ ನ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಘಟಾನುಘಟಿಗಳೇ ನಟಿಸಿದ್ದು, ರಾಧಿಕಾ ಪಂಡಿತ್ ನಾಯಕಿಯಾಗಿ ಮಿಂಚಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 11 ಕ್ಕೆ ಗ್ರ್ಯಾಂಡ್ ಆಗಿ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ಸನ್ಮಾನ

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ'

-ಹಾಡಿನ ಶೂಟಿಂಗ್ ನಲ್ಲಿ ಅಭಿಮಾನಿಗಳ ಜಾತ್ರೆ

-ಡ್ಯಾನ್ಸ್ ಮಾಸ್ಟರ್ ಎ ಹರ್ಷ ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ'

-ಚಿತ್ರದುರ್ಗದಲ್ಲಿ ಅಭಿಮಾನಿಗಳ ಜೊತೆ ಪವರ್ ಸ್ಟಾರ್ ಸೆಲ್ಫಿ

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

-ಹಾಡಿನ ಶೂಟಿಂಗ್ ನಲ್ಲಿ ಅಭಿಮಾನಿಗಳ ಜಾತ್ರೆ

-ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದ 'ದೊಡ್ಮನೆ ಹುಡುಗ'

-ಬೆಂಗಳೂರಿನ ಮಲ್ಲೇಶ್ವರಂ ಗ್ರೌಂಡ್ ನಲ್ಲಿ ಪುನೀತ್ ಡ್ಯಾನ್ಸ್ ಕಮಾಲ್

English summary
Kannada Actor Puneeth Rajkumar and Kannada Actress Radhika Pandith starrer 'Dodmane Huduga' shooting completed. The shooting was wrapped up with the traditional 'kumblakai' ceremony in Bengaluru on Thursday (June 30th). The movie is directed by Duniya Soori.
Please Wait while comments are loading...

Kannada Photos

Go to : More Photos