»   » 'ರಾಜಕುಮಾರ' ಚಿತ್ರತಂಡದ ಕಡೆಯಿಂದ ಬಂದ ಹಾಟ್ ನ್ಯೂಸ್

'ರಾಜಕುಮಾರ' ಚಿತ್ರತಂಡದ ಕಡೆಯಿಂದ ಬಂದ ಹಾಟ್ ನ್ಯೂಸ್

Posted by:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಟೀಸರ್ ಹಲವು ಸರ್ಪ್ರೈಸ್ ನೀಡಿ, ಸಿನಿಮಾ ಬಗ್ಗೆ ಇರುವ ನಿರೀಕ್ಷೆಗೆ ಹೈವೋಲ್ಟೇಜ್ ನೀಡಿದೆ. ಇತ್ತೀಚೆಗೆ ತಾನೆ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗೊಂದು ತಾಜಾ ಸುದ್ದಿ ನೀಡಿದೆ.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಾಜಕುಮಾರ' ಚಿತ್ರದ ಹಾಡು ಇದೇ ಫೆಬ್ರವರಿ 17 ರಂದು ಬಿಡುಗಡೆ ಆಗುತ್ತಿದೆ. ಚಿತ್ರತಂಡ 'ಯಾರಿವನು ಕನ್ನಡದವನು' ಎಂಬ ಪುನೀತ್ ಅವರ ಇಂಟ್ರಡಕ್ಷನ್ ಸಾಂಗ್ ಬಿಡುಗಡೆ ಮಾಡಲಿದ್ದು, ಇದು ಲಿರಿಕಲ್ ವಿಡಿಯೋ ಹಾಡಾಗಿದೆ.

Puneeth Rajkumar Starrer 'Raajakumara' Title Song Releasing On February 17th

ಈ ಹಿಂದೆ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ಅವರು 'ರಾಜಕುಮಾರ' ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದ್ರೆ 'ರಾಜಕುಮಾರ' ಚಿತ್ರದಲ್ಲಿರುವ ಪುನೀತ್ ಪರಿಚಯದ 'ಯಾರಿವನು ಕನ್ನಡದವನು' ಹಾಡನ್ನು ಸಂತೋಷ್ ಆನಂದ್ ರಾಮ್ ಅವರೇ ಬರೆದಿದ್ದಾರೆ. ಈ ಹಾಡನ್ನು ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅವರು ಹಾಡಿದ್ದಾರೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

'ರಾಜಕುಮಾರ' ಚಿತ್ರಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜನೆ ಮಾಡಿದ್ದು, ಒಟ್ಟು 5 ಹಾಡುಗಳಿವೆ. ಬಹುದೊಡ್ಡ ತಾರಾಗಣ ಇರುವ 'ರಾಜಕುಮಾರ' ಸಿನಿಮಾ ವನ್ನು ಚಿತ್ರತಂಡ ಮಾರ್ಚ್ ಕೊನೆವಾರದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

English summary
Kannada Actor Puneeth Rajkumar Starrer 'Raajakumara' Title Song Releasing On February 17th.
Please Wait while comments are loading...

Kannada Photos

Go to : More Photos