»   » ಪುನೀತ್ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚೋ ಸುದ್ದಿ

ಪುನೀತ್ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚೋ ಸುದ್ದಿ

Posted by:
Subscribe to Filmibeat Kannada

ಎಲ್ಲರ ಮೆಚ್ಚಿನ ಅಪ್ಪು ಅಲಿಯಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಿಗ್ ಬಜೆಟ್ ನ 'ಚಕ್ರವ್ಯೂಹ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 22 ರಂದು ಇಡೀ ರಾಜ್ಯ ಸೇರಿದಂತೆ ವಿದೇಶದಲ್ಲೂ ಸಿನಿಮಾ ಅದ್ಧೂರಿಯಾಗಿ ತೆರೆ ಕಾಣುತ್ತಿದೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಬಿಡುಗಡೆ ದಿನಾಂಕ ಘೋಷಣೆಯಾದ ಖುಷಿ ಒಂದೆಡೆಯಾದರೆ, ಇನ್ನೊಂದು ಖುಷಿನೂ ಇದೆ. ಅದೇನಪ್ಪಾ ಅಂದ್ರೆ 'ಚಕ್ರವ್ಯೂಹ' ಸಿನಿಮಾ ಜಾಗತಿಕವಾಗಿ ಎಲ್ಲಾ ಕಡೆ ಬಿಡುಗಡೆಯಾಗುವುದಕ್ಕೂ ಮುನ್ನ ಹೊರ ದೇಶದಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.[ವಾವ್.! 'ಚಕ್ರವ್ಯೂಹ' ಬಿಡುಗಡೆ ದಿನಾಂಕ ಪಕ್ಕಾ ಆಯ್ತು]


ನಟಿ ರಚಿತಾ ರಾಮ್ ಅವರು ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ಅವರ ಜೊತೆ ತೆರೆ ಹಂಚಿಕೊಂಡಿರುವ 'ಚಕ್ರವ್ಯೂಹ' ಸಿನಿಮಾ ಈ ಮೊದಲು ಕೂಡ ಹಲವಾರು ದಾಖಲೆಗಳನ್ನು ಸೃಷ್ಟಿ ಮಾಡಿತ್ತು.[ಡಿಂಪಲ್ ಕ್ವೀನ್ ರಚಿತಾ ಅವರಿಗೆ ನಿಂತಲ್ಲಿ ನಿಲ್ಲಲಾಗುತ್ತಿಲ್ಲವಂತೆ]


ಇದೀಗ ಅಭಿಮಾನಿಗಳ, ಅಭಿಮಾನಕ್ಕೆ ಕಿಚ್ಚು ಹಚ್ಚುವಂತಹ ಮತ್ತೊಂದು ನೂತನ ದಾಖಲೆ ಸೃಷ್ಟಿ ಮಾಡಿದೆ. ಅಷ್ಟಕ್ಕೂ ಅದೇನೆಂಬುದನ್ನು ತಿಳಿಯಬೇಕೆ? ಹಾಗಿದ್ದರೆ ಕೆಳಗಿನ ಸ್ಲೈಡ್ಸ್ ಗಳತ್ತ ಒಮ್ಮೆ ಕಣ್ಣಾಡಿಸಿ...


ವಿದೇಶದಲ್ಲಿ ಪ್ರೀಮಿಯರ್ ಶೋ

ವಿದೇಶದಲ್ಲಿ ಪ್ರೀಮಿಯರ್ ಶೋ

ನಮ್ಮ ದೇಶದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗುವುದಕ್ಕೂ ಮುನ್ನ ವಿದೇಶದಲ್ಲಿ ನಿರ್ದೇಶಕ ಎಮ್ ಸರವಣನ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಜುಗಲ್ ಬಂದಿಯ 'ಚಕ್ರವ್ಯೂಹ' ಸಿನಿಮಾ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಇದು ಅಭಿಮಾನಿಗಳಿಗೆ ಮಾತ್ರವಲ್ಲದೇ, ಕನ್ನಡ ಸಿನಿಪ್ರಿಯರಿಗೆ ಖುಷಿ ತರೋ ವಿಚಾರವಾಗಿದೆ.[ಐಪಿಎಲ್ ಜೊತೆ ಬಿಗ್ ಬಜೆಟ್ ಸಿನಿಮಾಗಳ ಜಟಾಪಟಿ]


ಆಸ್ಟ್ರೇಲಿಯದಲ್ಲಿ ಪ್ರೀಮಿಯರ್ ಶೋ

ಆಸ್ಟ್ರೇಲಿಯದಲ್ಲಿ ಪ್ರೀಮಿಯರ್ ಶೋ

ಏಪ್ರಿಲ್ 22 ರಂದು ಇಡೀ ಕರ್ನಾಟಕ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ಹಾಗೂ ವರ್ಲ್ಡ್ ವೈಡ್ ಸಿನಿಮಾ ತೆರೆ ಕಾಣುತ್ತಿದೆ. ಅದಕ್ಕೂ ಮುನ್ನ ಅಂದರೆ ಏಪ್ರಿಲ್ 21 ರಂದು ಕಾಂಗರೂಗಳ ನಾಡು ಆಸ್ಟ್ರೇಲಿಯದಲ್ಲಿ ಪವರ್ ಸ್ಟಾರ್‌ ಪುನೀತ್ ಅವರ ಪವರ್ ಫುಲ್ 'ಚಕ್ರವ್ಯೂಹ' ಸಿನಿಮಾ ಪ್ರೀಮಿಯರ್ ಪ್ರದರ್ಶನಗೊಳ್ಳಲಿದೆ.['ಚಕ್ರವ್ಯೂಹ' ಟ್ರೈಲರ್ ನಲ್ಲಿರುವ 10 ಕುತೂಹಲಕಾರಿ ಅಂಶಗಳು]


ಪ್ರದರ್ಶನ ಸ್ಥಳ ನಿಗದಿಯಾಗಿಲ್ಲ್ಲ

ಪ್ರದರ್ಶನ ಸ್ಥಳ ನಿಗದಿಯಾಗಿಲ್ಲ್ಲ

ಆಸ್ಟ್ರೇಲಿಯದಲ್ಲಿ ಏಪ್ರಿಲ್ 21 ರಂದು 'ಚಕ್ರವ್ಯೂಹ' ಸಿನಿಮಾ ಪ್ರದರ್ಶನಗೊಳ್ಳೋದು ಪಕ್ಕಾ. ಆದರೆ ಎಲ್ಲಿ? ಎಷ್ಟು ಘಂಟೆಗೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯದಲ್ಲೇ ತಿಳಿಸಲಾಗುತ್ತದೆ.


ಪುನೀತ್ ರಾಜ್ ಕುಮಾರ್ ಭಾಗಿ

ಪುನೀತ್ ರಾಜ್ ಕುಮಾರ್ ಭಾಗಿ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್-ಕಟ್ ಹೇಳುತ್ತಿರುವ 'ರಾಜಕುಮಾರ' ಚಿತ್ರದ ಶೂಟಿಂಗ್ ಗಾಗಿ ಏಪ್ರಿಲ್ 14 ಕ್ಕೆ ಆಸ್ಟ್ರೇಲಿಯಾಕ್ಕೆ ತೆರಳುತ್ತಿರುವ ಪುನೀತ್ ರಾಜ್ ಕುಮಾರ್ ಅವರು ಏಪ್ರಿಲ್ 21 ಕ್ಕೆ ಪ್ರದರ್ಶನವಾಗಲಿರುವ 'ಚಕ್ರವ್ಯೂಹ' ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.


ಮತ್ತೊಂದು ವಿಶೇಷ

ಮತ್ತೊಂದು ವಿಶೇಷ

ಅಂದಹಾಗೆ ಈ ಚಿತ್ರ ಬಿಡುಗಡೆಯ ಹಿನ್ನಲೆಯಲ್ಲಿ ಮತ್ತೊಂದು ವಿಶೇಷ ಇದೆ. ಹೌದು ಪುನೀತ್ ರಾಜ್ ಕುಮಾರ್ ಅವರ ಅಪ್ಪಾಜಿ 'ವರನಟ' ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ ಏಪ್ರಿಲ್ 24ಕ್ಕೆ ಇದ್ದು, ಅದಕ್ಕಿಂತ ಎರಡು ದಿನ ಮುಂಚಿತವಾಗಿ 'ಚಕ್ರವ್ಯೂಹ' ಸಿನಿಮಾ ತೆರೆ ಕಾಣುತ್ತಿದೆ.


ಸುಮಾರು 50 ದೇಶಗಳಲ್ಲಿ ಬಿಡುಗಡೆ

ಸುಮಾರು 50 ದೇಶಗಳಲ್ಲಿ ಬಿಡುಗಡೆ

ಸಿನಿಮಾ ಜಾಗತಿಕವಾಗಿ ಬಿಡುಗಡೆ ಆಗಲಿದ್ದು, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಹಾಂಕಾಂಗ್, ಸಿಂಗಾಪೂರ್, ಮಲೇಶಿಯಾ, ಸೌದಿ ಆರೇಬಿಯಾ, ಅಮೆರಿಕ, ಕೆನಡಾ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಅಲ್ಲದೇ ಭಾರತದಲ್ಲಿ ಚೆನ್ನೈ, ಪುಣೆ ಮುಂಬೈ, ದೆಹಲಿ ಮತ್ತು ಹೈದಾರಾಬಾದ್ ಮುಂತಾದ ಮಹಾ ನಗರಗಳಲ್ಲಿ 'ಚಕ್ರವ್ಯೂಹ' ಭರ್ಜರಿ ಪ್ರದರ್ಶನ ಕಾಣಲಿದೆ.


ಆಡಿಯೋ ಸೂಪರ್ ಹಿಟ್

ಆಡಿಯೋ ಸೂಪರ್ ಹಿಟ್

ಇನ್ನು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಆಡಿಯೋ ವಿತರಣೆ ಕೂಡ ನಿರ್ಮಾಪಕರಿಗೆ ಒಳ್ಳೆಯ ಲಾಭ ತಂದುಕೊಟ್ಟಿದೆಯಂತೆ. ತೆಲುಗು ನಟ ಜ್ಯೂನಿಯರ್ ಎನ್.ಟಿ.ಆರ್ ಮತ್ತು ನಟಿ ಕಾಜಲ್ ಅಗರ್ ವಾಲ್ ಅವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದರು.


English summary
Puneeth Rajkumar and Rachita Ram starrer 'Chakravyuha' finally gets a release date. The makers will be releasing the film on April 22. The film that is getting a worldwide release will have a premiere show in Australia on April 21st. The movie is directed by M Saravanan.
Please Wait while comments are loading...

Kannada Photos

Go to : More Photos