»   » ಮಂಗಳೂರಿಗರಿಗೆ ಪಿವಿಆರ್ ನಲ್ಲಿ ಸಿನಿಮಾ ನೋಡೋ ಭಾಗ್ಯ

ಮಂಗಳೂರಿಗರಿಗೆ ಪಿವಿಆರ್ ನಲ್ಲಿ ಸಿನಿಮಾ ನೋಡೋ ಭಾಗ್ಯ

Written by: ಐಸಾಕ್ ರಿಚರ್ಡ್, ಮಂಗಳೂರು
Subscribe to Filmibeat Kannada

ಪಿವಿಆರ್ ಮಂಗಳೂರಿನಲ್ಲಿ ಅತಿದೊಡ್ಡ ಮಲ್ಪಿಪ್ಲೆಕ್ಸ್ ಗೆ ಚಾಲನೆ ನೀಡಿದೆ. ಕರಾವಳಿ ನಗರಕ್ಕೆ ಮೊದಲ ಬಾರಿಗೆ ಪಿವಿಆರ್ ಸಿಸಿಮಾಸ್ ಕಾಲಿಟ್ಟಿದ್ದು, ಪಾಂಡೇಶ್ವರ ರಸ್ತೆಯಲ್ಲಿರುವ ಪೋರಂ ಮಾಲ್‍ನಲ್ಲಿ ಆರು ಸ್ಕ್ರೀನ್‍ಗಳ ಮಲ್ಟಿಪ್ಲೆಕ್ಸ್ ಉದ್ಘಾಟನೆಗೊಂಡಿದೆ.

ಮಂಗಳೂರು ನಗರದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿರುವುದು ನಮಗೆ ಹೆಮ್ಮೆ ತಂದಿದೆ. ಫೋರಂ ಮಾಲ್ ನಗರದ ಅತ್ಯಂತ ಭರವಸೆಯ ಮನೋರಂಜನಾ ತಾಣವಾಗಿ ಬೆಳೆಯುತ್ತಿದ್ದು, ಜನರು ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಪಿವಿಆರ್ ಲಿಮಿಟೆಡ್‍ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ.

ಕೇವಲ ಮಂಗಳೂರು ನಗರ ಮಾತ್ರವಲ್ಲದೆ ಉಡುಪಿ, ಮಣಿಪಾಲ ಮತ್ತು ಕಾರವಾರದ ಪ್ರೇಕ್ಷಕರನ್ನೂ ಸೆಳೆಯುವ ಯೋಜನೆಯನ್ನು ಪಿವಿಆರ್ ಹೊಂದಿದೆ. ಒಟ್ಟು 38 ಸಾವಿರ ಚದರ ಅಡಿ ವಿಸ್ತಾರವಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ 1,169 ಸೀಟುಗಳಿವೆ. ಈ ಮಲ್ಟಿಪ್ಲೆಕ್ಸ್ ಉದ್ಘಾಟನೆಯಿಂದಾಗಿ ಪಿವಿಆರ್ ತನ್ನ ಸ್ಕ್ರೀನ್‍ಗಳ ಸಂಖ್ಯೆಯನ್ನು ದೇಶದ 42 ಪಟ್ಟಣಗಳಿಗೆ ವಿಸ್ತರಿಸಿದಂತಾಗಿದೆ. ಪಿವಿಆರ್ ಉದ್ಘಾಟನೆಯ ಚಿತ್ರಗಳು

ಮಂಗಳೂರಿನಲ್ಲಿ ಇನ್ನು ಪಿವಿಆರ್ ನಲ್ಲಿ ಸಿನಿಮಾ ನೋಡಿ
  

ಮಂಗಳೂರಿನಲ್ಲಿ ಇನ್ನು ಪಿವಿಆರ್ ನಲ್ಲಿ ಸಿನಿಮಾ ನೋಡಿ

ಪಿವಿಆರ್ ಮಂಗಳೂರಿನಲ್ಲಿ ಅತಿದೊಡ್ಡ ಮಲ್ಪಿಪ್ಲೆಕ್ಸ್ ಗೆ ಚಾಲನೆ ನೀಡಿದೆ. ಕರಾವಳಿ ನಗರಕ್ಕೆ ಮೊದಲ ಬಾರಿಗೆ ಪಿವಿಆರ್ ಸಿಸಿಮಾಸ್ ಕಾಲಿಟ್ಟಿದ್ದು, ಪಾಂಡೇಶ್ವರ ರಸ್ತೆಯಲ್ಲಿರುವ ಪೋರಮ್ ಮಾಲ್‍ನಲ್ಲಿ ಆರು ಸ್ಕ್ರೀನ್‍ಗಳ ಮಲ್ಟಿಪ್ಲೆಕ್ಸ್ಅನ್ನು ಉದ್ಘಾಟಿಸಲಾಗಿದೆ.

ಅತ್ಯಂತ ಮನೋರಂಜನೆ ಭರವಸೆ ನೀಡುತ್ತೇವೆ
  

ಅತ್ಯಂತ ಮನೋರಂಜನೆ ಭರವಸೆ ನೀಡುತ್ತೇವೆ

ಮಂಗಳೂರು ನಗರದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿರುವುದು ನಮಗೆ ಹೆಮ್ಮೆ ತಂದಿದೆ. ಇಲ್ಲಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಪಿವಿಆರ್ ಲಿಮಿಟೆಡ್‍ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ.

ನೆರೆಯು ನಗರದವರನ್ನು ಸೆಳೆಯಲು ಯತ್ನ
  

ನೆರೆಯು ನಗರದವರನ್ನು ಸೆಳೆಯಲು ಯತ್ನ

ಮಂಗಳೂರಿನ ಪಿವಿಆರ್ ಗೆ ಉಡುಪಿ, ಮಣಿಪಾಲ ಮತ್ತು ಕಾರವಾರದ ಪ್ರೇಕ್ಷಕರನ್ನೂ ಸೆಳೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಒಟ್ಟು 38 ಸಾವಿರ ಚದರ ಅಡಿ ವಿಸ್ತಾರವಾಗಿರುವ ಮಲ್ಟಿಪ್ಲೆಕ್ಸ್ ನಲ್ಲಿ 1,169 ಸೀಟುಗಳಿವೆ.

ಮಂಗಳೂರಿನ ಪಿವಿಆರ್ ಕುರಿತು
  

ಮಂಗಳೂರಿನ ಪಿವಿಆರ್ ಕುರಿತು

ಪಾಂಡೇಶ್ವರ ರಸ್ತೆಯಲ್ಲಿರುವ ಪೋರಮ್ ಮಾಲ್‍ನಲ್ಲಿರುವ ಆರು ಸ್ಕ್ರೀನ್‍ಗಳ ಮಲ್ಟಿಪ್ಲೆಕ್ಸ್ ನಲ್ಲಿ 2ಕೆ ಡಿಜಿಟಲ್ ಪ್ರೊಜೆಕ್ಷನ್ ಮತ್ತು 3 ಡಿ ಸಾಮರ್ಥ್ಯದ ಸ್ಕ್ರೀನ್‍ಗಳಿವೆ. ಆದ್ದಿರಿಂದ ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾದರೂ ಅದನ್ನು ಅಳವಡಿಸಿಕೊಳ್ಳಲು ಈ ಸ್ಕ್ರೀನ್‍ಗಳು ಸಮರ್ಥವಾಗಿವೆ.

ಪಿವಿಆರ್ ಮಾರುಕಟ್ಟೆ ವಿಸ್ತರಣೆ
  

ಪಿವಿಆರ್ ಮಾರುಕಟ್ಟೆ ವಿಸ್ತರಣೆ

ಮಂಗಳೂರಿನಲ್ಲಿ ಪಿವಿಆರ್ ಉದ್ಘಾಟನೆಗೊಳ್ಳುವ ಮೂಲಕ ದಕ್ಷಿಣ ಭಾರತದಲ್ಲಿ ಸಂಸ್ಥೆ ತನ್ನ ಮಾರುಕಟ್ಟೆಯ ಪ್ರಾಬಲ್ಯವನ್ನು ವಿಸ್ತರಿಸಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಕೊಚ್ಚಿ, ವಿಜಯವಾಡದ ಬಳಿಕ ಈಗ ಮಂಗಳೂರು ಸೇರಿದಂತೆ 13 ಕಡೆಗಳಲ್ಲಿ ಒಟ್ಟು 83 ಸ್ಕ್ರೀನ್‍ಗಳನ್ನು ಪಿವಿಆರ್ ಹೊಂದಿದಂತಾಗಿದೆ.

English summary
Mangalore city gets its largest multiplex with the launch of PVR’s first multiplex in the city. PVR Cinemas marks its debut in the coastal city with the launch of its six- screen multiplex in Forum Mall developed by the Prestige Mangalore Retail Ventures Pvt. Ltd. at Pandeshwar Road.
Please Wait while comments are loading...

Kannada Photos

Go to : More Photos