»   » 'ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್

'ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್

Posted by:
Subscribe to Filmibeat Kannada

ಈ ಮಾನ್ಸೂನ್ ಗೆ 'ಚಾರ್ ಮಿನಾರ್' ಖ್ಯಾತಿಯ ನಿರ್ದೇಶಕ ಚಂದ್ರು ಅವರು ಪ್ರೇಕ್ಷಕರಿಗೆ ಭರ್ಜರಿ 'ಮಳೆ' ಸುರಿಸಲಿದ್ದಾರೆ. ಚಂದ್ರು ನಿರ್ಮಾಣದಲ್ಲಿ ಮೂಡಿಬರುತ್ತಿರುವ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರ ಜುಲೈ 24 ರಂದು ತೆರೆ ಮೇಲೆ ಅಪ್ಪಳಿಸಲಿದೆ.

ಬಹುನಿರೀಕ್ಷಿತ 'ಮಳೆ' ಪೂರ್ತಿ ಮಳೆಗೆ ಸಂಬಂಧಪಟ್ಟ ಚಿತ್ರ. ಇದೇ ಮೊದಲ ಬಾರಿಗೆ ಲವ್ಲಿ ಸ್ಟಾರ್ ಪ್ರೇಮ್ ಹಾಗೂ 'ಚೆಲುವಿನ ಚಿತ್ತಾರ' ಐಶು ಅಲಿಯಾಸ್ ಅಮೂಲ್ಯ ಒಂದಾಗಿ ಕಾಣಿಸಿಕೊಂಡಿರುವ 'ಮಳೆ' ಚಿತ್ರದಲ್ಲಿ 'ಚಾರ್ ಮಿನಾರ್'ನಂತೆ ನವಿರಾದ ಪ್ರೇಮಕಥೆಯನ್ನು ಪ್ರೇಕ್ಷಕರಿಗಾಗಿ ಹೊತ್ತು ತಂದಿದ್ದಾರೆ ನಿರ್ದೇಶಕ ತೇಜಸ್.[ಮಳೆ ಲೇಟು ಜುಲೈಗೂ ಡೌಟು ಅಂತಾರೆ ಆರ್ ಚಂದ್ರು]


ಈ ಮೊದಲೇ ಬಂದಿರುವ 'ಮಳೆ' ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿವೆ. ಅಲ್ಲದೇ ಮಲೆನಾಡಿನ ಸುಂದರ ತಾಣಗಳಲ್ಲಿ ರಿಯಲ್ ಮಳೆಯಲ್ಲಿ ಚಿತ್ರೀಕರಣಗೊಂಡಿರುವ 'ಮಳೆ', 'ಮುಂಗಾರು ಮಳೆ'ಯಂತೆ ಸಹಜವಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ. 'ಮಳೆ' ಚಿತ್ರದ ಇನ್ನಷ್ಟು ಡೀಟೈಲ್ಸ್ ಕೆಳಗಿರುವ ಸ್ಲೈಡ್ ಗಳಲ್ಲಿ.....


 ಇದೇ ಜುಲೈ 24 ರಂದು ತೆರೆ ಮೇಲೆ 'ಮಳೆ'

ಇದೇ ಜುಲೈ 24 ರಂದು ತೆರೆ ಮೇಲೆ 'ಮಳೆ'

ಆರ್.ಚಂದ್ರು ನಿರ್ಮಾಣದ 'ಮಳೆ' ಸಿನಿಮಾ ಜುಲೈ 24 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇದೇ ಮೊದಲ ಬಾರಿಗೆ ಅಮೂಲ್ಯ, ಲವ್ಲಿ ಸ್ಟಾರ್ ಪ್ರೇಮ್ 'ಮಳೆ'ಯಲ್ಲಿ ಜೊತೆಯಾಗಿ ಡ್ಯುಯೆಟ್ ಹಾಡಲಿದ್ದಾರೆ.


ಲವ್ಲಿ ಸ್ಟಾರ್ ಪ್ರೇಮ್

ಲವ್ಲಿ ಸ್ಟಾರ್ ಪ್ರೇಮ್

ಈಗಾಗಲೇ ಬಿಡುಗಡೆಯಾಗಿರುವ 'ಮಳೆ' ಚಿತ್ರದ ಟ್ರೈಲರ್ ನಲ್ಲಿ ಪ್ರೇಮ್ ಲವರ್ ಬಾಯ್ ಆಕ್ಟಿಂಗ್ ನೋಡಿ ಅಭಿಮಾನಿಗಳು ಸಖತ್ ಫಿದಾ ಆಗಿದ್ದು, ಲವ್ಲಿ ಸ್ಟಾರ್ ನ ತೆರೆಯ ಮೇಲೆ ನೋಡಲು ಕಾತರರಾಗಿದ್ದಾರೆ.


'ಸಂಪತ್ತಿಗೆ ಸವಾಲ್' ಮಂಜುಳಾ ನೆನಪಿಸುವ ಅಮೂಲ್ಯ

'ಸಂಪತ್ತಿಗೆ ಸವಾಲ್' ಮಂಜುಳಾ ನೆನಪಿಸುವ ಅಮೂಲ್ಯ

'ಮಳೆ'ಯಲ್ಲಿ ಬೇಬಿ ಡಾಲ್ ಅಮೂಲ್ಯ ನಟನೆ ಕಂಡರೆ 'ಸಂಪತ್ತಿಗೆ ಸವಾಲ್' ಚಿತ್ರದ ನಟಿ ಮಂಜುಳಾ ಅವರ ಗಂಡುಬೀರಿ ನಟನೆ ನೆನಪಾಗುತ್ತದೆ.


ನವಿರಾದ ಭಾವನೆಗಳ 'ಮಳೆ'

ನವಿರಾದ ಭಾವನೆಗಳ 'ಮಳೆ'

ಪ್ರೀತಿ, ರೊಮ್ಯಾನ್ಸ್, ಆಕ್ಷನ್, ಕಾಮಿಡಿ ಎಲ್ಲಾ ಹದವಾಗಿ ಮಿಕ್ಸ್ ಆಗಿರುವ 'ಮಳೆ' ಕಂಪ್ಲೀಟ್ ಕಮರ್ಶಿಯಲ್ ಎಂಟರ್ಟೇನರ್.


ಇದು ಹೃದಯಗಳ ವಿಷಯ

ಇದು ಹೃದಯಗಳ ವಿಷಯ

ರೊಮ್ಯಾಂಟಿಕ್-ಥ್ರಿಲ್ಲರ್ 'ಮಳೆ'ಯಲ್ಲಿ ಲವ್, ಬ್ರೇಕಪ್ ಮತ್ತು ಪ್ಯಾಚಪ್ ಸೇರಿದಂತೆ ಹಲವು ಟ್ವಿಸ್ಟ್ ಗಳಿವೆ.


 ಉತ್ತರ ಹೇಳಿ, ಉಚಿತ ಟಿಕೆಟ್ ಟೀ-ಶರ್ಟ್ ಗೆಲ್ಲಿ

ಉತ್ತರ ಹೇಳಿ, ಉಚಿತ ಟಿಕೆಟ್ ಟೀ-ಶರ್ಟ್ ಗೆಲ್ಲಿ

ಇದೇ 24 ರಂದು 'ಮಳೆ' ಚಿತ್ರ ರಿಲೀಸ್ ಆಗುತ್ತಿದ್ದು, 'ಮಳೆ' ಚಿತ್ರದ ಬಗ್ಗೆ ಒಂದು ಸಣ್ಣ ಕಾಂಟೆಸ್ಟ್ ಅರೇಂಜ್ ಮಾಡಿದ್ದಾರೆ ನಿರ್ಮಾಪಕ ಆರ್.ಚಂದ್ರು. 'ಮಳೆ' ಚಿತ್ರದ ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಿಗೆ 'ಮಳೆ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ಸ್ ಮತ್ತು ಟಿ-ಶರ್ಟ್ ನ ಬಹುಮಾನವಾಗಿ ನೀಡಲಿದ್ದಾರೆ.


English summary
R Chandru's Productional venture 'Male' from July 24, Kannada Movie 'Male' features Kannada Actor Prem, Kannada Actress Amoolya in the lead role. The movie is directed by Tejas.
Please Wait while comments are loading...

Kannada Photos

Go to : More Photos