»   » ತೆಲುಗಿನಲ್ಲಿ 'ಚಾರ್ಮಿನಾರ್' ಕಟ್ಟಿದರು ಆರ್ ಚಂದ್ರು

ತೆಲುಗಿನಲ್ಲಿ 'ಚಾರ್ಮಿನಾರ್' ಕಟ್ಟಿದರು ಆರ್ ಚಂದ್ರು

Written by: ಉದಯರವಿ
Subscribe to Filmibeat Kannada

'ಬ್ರಹ್ಮ' ಚಿತ್ರದ ಬಳಿಕ ನಿರ್ದೇಶಕ ಆರ್ ಚಂದ್ರು ಸಖತ್ ಬಿಜಿಯಾಗಿದ್ದಾರೆ. ಅವರು ಇತ್ತ ಸ್ಯಾಂಡಲ್ ವುಡ್ ಅತ್ತ ಟಾಲಿವುಡ್ ಎರಡೂ ಕಡೆ ಬಿಜಿಯಾಗಿರುವುದು ವಿಶೇಷ. ಕನ್ನಡದಲ್ಲಿ ಸೆಂಚುರಿ ಬಾರಿಸಿದ್ದ 'ಚಾರ್ಮಿನಾರ್' ಚಿತ್ರ ಇದೀಗ ತೆಲುಗಿಗೆ ರೀಮೇಕ್ ಆಗಿದ್ದು ಇನ್ನೇನು ಶೀಘ್ರದಲ್ಲೇ ಬಿಡುಗಡೆಯಾಗಲು ರೆಡಿಯಾಗಿದೆ.

ಆರ್ ಚಂದ್ರು ಅವರ ತೆಲುಗು ಚಿತ್ರಕ್ಕೆ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂದು ಹೆಸರಿಡಲಾಗಿದ್ದು, ಇತ್ತೀಚೆಗಷ್ಟೇ ಡಬ್ಬಿಂಗ್ ಕೆಲಸ ಮುಗಿದಿದೆ. ಸುಧೀರ್ ಬಾಬು ಹಾಗೂ ನಂದಿತಾ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಲಗಡಪತಿ ಶ್ರೀಧರ್ ಚಿತ್ರವನ್ನು ನಿರ್ಮಿಸಿದ್ದಾರೆ. [ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್]

R Chandru

ಈ ಸುಧೀರ್ ಬಾಬು ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಭಾವ. ಮೂಲತಃ ಕ್ರೀಡಾಕಾರನಾದ ಅವರು ತೆಲುಗಿನಲ್ಲಿ ಈಗ ಹೀರೋ ಆಗಿ ಚಲಾವಣೆಯಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಚಂದ್ರು ಉತ್ಸಾಹವನ್ನು ಇಮ್ಮಡಿಸಿದೆ.

ಇತ್ತೀಚೆಗೆ ಅವರು ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ, " ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ ಡಬ್ಬಿಂಗ್ ಕೆಲಸ ಜೋರಾಗಿದೆ... ಈ ಗ್ಯಾಪ್‌ನಲ್ಲಿ ಮತ್ತೊಂದು ತೆಲುಗು ಸಿನಿಮಾಗೆ ಕಮಿಟ್.. ಸದ್ಯದಲ್ಲೇ ಅನೌನ್ಸ್...ಹೈದ್ರಾಬಾದ್ ಅಪ್ಪಿಕೊಳ್ತಿದೆ..." ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಅವರ ನಿರ್ಮಾಣದ 'ಮಳೆ' ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಫೆಬ್ರವರಿ, 2015ರ ವೇಳೆ ತೆರೆಕಾಣುವ ಸಾಧ್ಯತೆಗಳಿವೆ. ಈ ಬಗ್ಗೆ ಚಂದ್ರು ಅವರು, "ಸುಮಾರು ಒಂದು ವರ್ಷದ ನಂತರ ಮತ್ತೆ ನಮ್ ಮನೆ (ಸ್ಯಾಂಡಲ್‌ವುಡ್‌) ಕೆಲಸದಲ್ಲಿ ಸಕ್ರಿಯನಾಗಿದ್ದೇನೆ... ನಮ್ ಬ್ಯಾನರ್‌ನ ಎರಡನೇ ಸಿನಿಮಾ 'ಮಳೆ'ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Sandalwood director R Chandru has completed shooting for his first Telugu film, Krishnamma Kalipindi Iddarini. The film is the remake of his hit Kannada film Charminar.
Please Wait while comments are loading...

Kannada Photos

Go to : More Photos