»   » ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ

ಆರ್.ಚಂದ್ರು ನಿರ್ದೇಶನದಲ್ಲಿ ಎಚ್.ಎಂ.ರೇವಣ್ಣ ಪುತ್ರ ಅನೂಪ್ ಎಂಟ್ರಿ

Posted by:
Subscribe to Filmibeat Kannada

ಕಡೆಗೂ ನಿರ್ದೇಶಕ ಆರ್.ಚಂದ್ರು ಆಡಿದ ಮಾತನ್ನ ಉಳಿಸಿಕೊಂಡಿದ್ದಾರೆ. ನಾಲ್ಕು ದಿನಗಳ ಹಿಂದೆ 'ಒಂದು ಬ್ರೇಕಿಂಗ್ ನ್ಯೂಸ್ ಕೊಡ್ತೀನಿ' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ತಿಳಿಸಿದ್ದ ನಿರ್ದೇಶಕ ಆರ್.ಚಂದ್ರು ಇಂದು ಸೆನ್ಸೇಷನಲ್ ಸುದ್ದಿಯನ್ನ ಹೊರ ಹಾಕಿದ್ದಾರೆ.

ಕರ್ನಾಟಕದ ಪ್ರಸಿದ್ಧ ರಾಜಕಾರಣಿ ಒಬ್ಬರ ಪುತ್ರನನ್ನ ಲಾಂಚ್ ಮಾಡುವ ಅವಕಾಶ ಆರ್.ಚಂದ್ರುಗೆ ಸಿಕ್ಕಿದೆ. ಆ ಪ್ರಸಿದ್ಧ ರಾಜಕಾರಣಿ ಮತ್ತವರ ಪುತ್ರ ಬೇರಾರೂ ಅಲ್ಲ. ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್. ['ಬ್ರೇಕಿಂಗ್ ನ್ಯೂಸ್' ಕೊಡ್ತಾರಂತೆ ನಿರ್ದೇಶಕ ಆರ್.ಚಂದ್ರು]

h.m.revanna son anoop

ಚಿಕ್ಕಂದಿನಿಂದಲೂ ಅನೂಪ್ ಗೆ ಬಣ್ಣದ ಬದುಕಿನ ಬಗ್ಗೆ ಸೆಳೆತ. ದೊಡ್ಡ ಹೀರೋ ಆಗ್ಬೇಕು ಅಂತ ಸದಾ ಕನಸು ಕಾಣುತ್ತಿದ್ದ ಅನೂಪ್, ತಮ್ಮ ಗ್ರ್ಯಾಂಡ್ ಎಂಟ್ರಿಗೆ ನಿರ್ದೇಶಕ ಆರ್.ಚಂದ್ರು ಬೆಸ್ಟ್ ಅಂತ ಫೈನಲ್ ಮಾಡಿದ್ದಾರೆ.

ಈಗಾಗಲೇ ಸಿನಿಮಾದ ಕಥೆ ಬಗ್ಗೆ ಮಾತುಕತೆ ನಡೆದಿದ್ದು, ಬಂಡವಾಳ ಹಾಕುವುದಕ್ಕೆ ಎಚ್.ಎಂ.ರೇವಣ್ಣ ನಿರ್ಧರಿಸಿದ್ದಾರೆ. ನಾಯಕನಾಗುವುದಕ್ಕೆ ರೇವಣ್ಣ ಪುತ್ರ ಅನೂಪ್ ಸಕಲ ತಯಾರಿಯಲ್ಲಿ ತೊಡಗಿದ್ದಾರೆ. ಫೈಟು ಮತ್ತು ಡ್ಯಾನ್ಸ್ ನಲ್ಲಿ ಪಕ್ಕಾ ಆಗುವುದಕ್ಕೆ ಮುಂಬೈನಲ್ಲಿ ಟ್ರೇನಿಂಗ್ ಕೂಡ ಪಡೆದುಕೊಳ್ಳುತ್ತಿದ್ದಾರೆ. [ಅಣ್ಣಾವ್ರ ಹುಟ್ಟುಹಬ್ಬಕ್ಕಿಲ್ಲ ಶಿವಣ್ಣನ 'ಬಾದ್ ಷ'..!?]

h.m.revanna son anoop

ಸದ್ಯಕ್ಕೆ ಆರ್.ಚಂದ್ರು 'ಮಳೆ' ಮತ್ತು 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ರಿಲೀಸ್ ಟೆನ್ಷನ್ ನಲ್ಲಿದ್ದಾರೆ. ಅವೆರಡು ತೆರೆಗೆ ಬಂದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಬಾದ್ ಷ' ಶುರು ಮಾಡಲಿದ್ದಾರೆ. ಚಿತ್ರಮಂದಿರಗಳಲ್ಲಿ 'ಬಾದ್ ಷ' ದರ್ಬಾರ್ ಶುರುವಾದ ಮೇಲೆ ಅನೂಪ್ ಗಾಂಧಿನಗರಕ್ಕೆ ಕಾಲಿಡಲಿದ್ದಾರೆ. (ಏಜೆನ್ಸೀಸ್)

English summary
Congress Leader H.M.Revanna's son Anoop is all set to enter Sandalwood. R.Chandru is roped in to direct the flick which will be produced by H.M.Revanna himself.
Please Wait while comments are loading...

Kannada Photos

Go to : More Photos