»   » 'ರಾಜಕುಮಾರ' vs 'ರಾಯುಡು': ಇದು ರಾಷ್ಟ್ರಮಟ್ಟದ ಸ್ಟಾರ್ ವಾರ್

'ರಾಜಕುಮಾರ' vs 'ರಾಯುಡು': ಇದು ರಾಷ್ಟ್ರಮಟ್ಟದ ಸ್ಟಾರ್ ವಾರ್

Posted by:
Subscribe to Filmibeat Kannada

ಈ ಶುಕ್ರವಾರ ಕನ್ನಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ.

ಅದೇ ದಿನ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಕಾಟಮರಾಯುಡು' ಚಿತ್ರವೂ ದೇಶಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.['ರಾಜಕುಮಾರ' ಸಿನಿಮಾ ನೋಡೋರಿಗೆ ಶಿವಣ್ಣನಿಂದ ಬೊಂಬಾಟ್ ಸರ್ಪ್ರೈಸ್!]

ಹೀಗಾಗಿ, ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಎರಡರಲ್ಲೂ ಈ ವಾರ ಪವರ್ ಸ್ಟಾರ್ ಗಳು ಅಬ್ಬರ ಅಂತಾನೇ ಹೇಳ್ಬಹುದು. ಆದ್ರೆ, ಇವರಿಬ್ಬರಲ್ಲಿ ಗೆಲುವು ಯಾರಿಗೆ? ಮುಂದೆ ಓದಿ.....

ಮಾರ್ಚ್ 24 ರಂದು 'ಪವರ್' ವಾರ್

ಮಾರ್ಚ್ 24 ರಂದು 'ಪವರ್' ವಾರ್

ಮಾರ್ಚ್ 24 ರಂದು ಬಾಕ್ಸ್ ಆಫೀಸ್ ನಲ್ಲಿ 'ಪವರ್ ಸ್ಟಾರ್ ಗಳ ವಾರ್. ಯಾಕಂದ್ರೆ, ದಕ್ಷಿಣ ಭಾರತದ ಎರಡು ಬಹುನಿರೀಕ್ಷಿತ ಚಿತ್ರಗಳು ಒಟ್ಟಿಗೆ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.[ದಾಖಲೆಗಳನ್ನೆಲ್ಲ ಬೆಚ್ಚಿಬೀಳಿಸಿದ ರಾಜರತ್ನ 'ರಾಜಕುಮಾರ']

ಕರ್ನಾಟದಲ್ಲಿ ಕನ್ನಡದ 'ಪವರ್ ಸ್ಟಾರ್' ಹವಾ!

ಕರ್ನಾಟದಲ್ಲಿ ಕನ್ನಡದ 'ಪವರ್ ಸ್ಟಾರ್' ಹವಾ!

ಅಂದ್ಹಾಗೆ, ಎರಡು ಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗುತ್ತಿವೆ. ಹಾಗೇ, ಕರ್ನಾಟಕದಲ್ಲೂ ಇವರೆಡು ಚಿತ್ರಗಳು ಥಿಯೇಟರ್ ಗೆ ಅಪ್ಪಳಿಸಲಿವೆ. ಆದ್ರೆ, ಕನ್ನಡ ನಾಡಿನಲ್ಲಿ ರಾಜರತ್ನ ಪುನೀತ್ ರಾಜ್ ಕುಮಾರ್ ಅವರದ್ದೇ ದರ್ಬಾರ್ ಎನ್ನುವುದ್ರಲ್ಲಿ ಯಾವುದೇ ಅನುಮಾನವಿಲ್ಲ.[ಸ್ವಲ್ಪ ಲೇಟಾದ್ರು 'ರಾಜಕುಮಾರ' ಟಿಕೆಟ್ ನಿಮಗೆ ಸಿಗಲ್ಲ! ಈಗಲೇ ಬುಕ್ ಮಾಡಿ]

ತೆಲುಗು ದೇಶದಲ್ಲಿ ಪವನ್ ಕಲ್ಯಾಣ್ ಮೇನಿಯಾ

ತೆಲುಗು ದೇಶದಲ್ಲಿ ಪವನ್ ಕಲ್ಯಾಣ್ ಮೇನಿಯಾ

ಇನ್ನೂ ಅಂಧ್ರ-ತೆಲಂಗಾಣ ದೇಶಗಳಲ್ಲಿ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಚಿತ್ರದ್ದೇ ಸೌಂಡ್. ಪವನ್ ಫ್ಯಾನ್ಸ್ ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಿ, ಮೊದಲ ಶೋನೇ ನೋಡುವುದಕ್ಕೆ ತುದಿಗಾಲಲ್ಲಿ ಕಾದು ಕುಂತಿದ್ದಾರೆ.['ಅಪ್ಪು ಡ್ಯಾನ್ಸ್'ಗೆ ಸ್ಯಾಂಡಲ್ ವುಡ್ ದಾಖಲೆಗಳೆಲ್ಲ ಧೂಳಿಪಟ!]

ಕ್ಲಾಸ್ ಅಂಡ್ ಮಾಸ್ 'ರಾಜಕುಮಾರ'

ಕ್ಲಾಸ್ ಅಂಡ್ ಮಾಸ್ 'ರಾಜಕುಮಾರ'

ಅಂದ್ಹಾಗೆ, 'ರಾಜಕುಮಾರ' ಚಿತ್ರ ಕ್ಲಾಸ್ ಅಂಡ್ ಮಾಸ್. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಕನ್ನಡ ಕಲಾಭಿಮಾನಿಗಳು ಹುಚ್ಚೆಬ್ಬಿಸಿರುವ ಚಿತ್ರ. ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದಾರೆ.

ರೀಮೇಕ್ 'ಕಾಟಮರಾಯುಡು'

ರೀಮೇಕ್ 'ಕಾಟಮರಾಯುಡು'

ಪವನ್ ಕಲ್ಯಾಣ್ ಅಭಿನಯದ 'ಕಾಟಮರಾಯುಡು', ತಮಿಳಿನಲ್ಲಿ ಅಜಿತ್ ಅಭಿನಯಿಸಿದ್ದ 'ವೀರಂ' ಚಿತ್ರದ ರೀಮೇಕ್. ಹೀಗಾಗಿ, ಈ ಚಿತ್ರದ ಮೇಲೂ ಸಾಕಷ್ಟು ಎಕ್ಸ್ ಪೆಕ್ಟೇಶನ್ ಹೆಚ್ಚಾಗಿದೆ. ಕಿಶೋರ್ ಕುಮಾರ್ ಪರದಸನಿ ನಿರ್ದೇಶನ ಮಾಡಿದ್ದು, ಶ್ರುತಿ ಹಾಸನ್ ಜೋಡಿಯಾಗಿ ಅಭಿನಯಿಸಿದ್ದಾರೆ.

2 ಚಿತ್ರಗಳು ಫ್ಯಾಮಿಲಿ ಫ್ಯಾಕೇಜ್

2 ಚಿತ್ರಗಳು ಫ್ಯಾಮಿಲಿ ಫ್ಯಾಕೇಜ್

ಅಂದ್ಹಾಗೆ, ಕನ್ನಡದ 'ರಾಜಕುಮಾರ' ಮತ್ತು ತೆಲುಗಿನ 'ಕಾಟಮರಾಯುಡು' ಎರಡು ಚಿತ್ರಗಳು ಫ್ಯಾಮಿಲಿ ಪೂರ್ತಿ ನೋಡುವಂತಹ ಸಿನಿಮಾಗಳು. ಎರಡು ಚಿತ್ರಗಳಲ್ಲಿ ದೊಡ್ಡ ತಾರಬಳಗ ಇದೆ.

ಗೆಲ್ಲೋದು ಯಾರು?

ಗೆಲ್ಲೋದು ಯಾರು?

ಇಬ್ಬರು ಪವರ್ ಸ್ಟಾರ್ ಗಳು ತಮ್ಮದೇ ಆದ ಸ್ಟೈಲ್, ಮ್ಯಾನರಿಸಂನಿಂದ ಅಭಿಮಾನಿ ಬಳಗವನ್ನ ಹೊಂದಿರುವ ನಟರು. ಹೀಗಾಗಿ, ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಬಾಕ್ಸ್ ಆಫೀಸ್ ಉಡೀಸ್ ಮಾಡುತ್ತೆ ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಕರ್ನಾಟದಲ್ಲೂ ಈ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕಾದಾಡಲಿವೆ.

English summary
Kannada Actor Puneeth Rajkumar Starrer 'Raajakumara' and Telugu Actor Pawan Kalyan Starrer 'Katamarayudu' Movies Releasnig Together on March 24th.
Please Wait while comments are loading...

Kannada Photos

Go to : More Photos