»   » 'ಬುಲ್ ಬುಲ್' ಬೆಡಗಿ ರಚಿತಾಗೆ ಇರುವ ಏಕೈಕ ಆಸೆ

'ಬುಲ್ ಬುಲ್' ಬೆಡಗಿ ರಚಿತಾಗೆ ಇರುವ ಏಕೈಕ ಆಸೆ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ನ ಸದ್ಯದ ಟಾಪ್ ಹೀರೋಯಿನ್ ಗಳ ಪೈಕಿ ರಚಿತಾ ರಾಮ್ ಕೂಡ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಗಾಂಧಿನಗರದ ಗೆಲ್ಲುವ ಕುದುರೆಗಳ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಈ ಬೆಡಗಿಗೆ ಒಂದು ಬಯಕೆ ಆಗಿಬಿಟ್ಟಿದೆ.

ಅದೇನಪ್ಪಾ ಅಂದ್ರೆ, ಟಾಲಿವುಡ್ ನ ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಮತ್ತು ಕಾಲಿವುಡ್ ನ ಸ್ಟಾರ್ ಡೈರೆಕ್ಟರ್ ಮಣಿರತ್ನಂ ಜೊತೆ ನಟಿ ರಚಿತಾ ರಾಮ್ ಒಂದು ಸಿನಿಮಾ ಮಾಡ್ಬೇಕಂತೆ. ರಚಿತಾ ರಾಮ್‌ ಜೀವನದ ಏಕೈಕ ಆಸೆ ಅಂದ್ರೆ ಇದೇ ಅಂತೆ.! ಹಾಗಂತ ಖುದ್ದು ಬಾಯ್ಬಿಟ್ಟಿದ್ದಾರೆ ಬುಲ್ ಬುಲ್ ಬೆಡಗಿ.

ಮುಂಚಿನಿಂದಲೂ ರಚಿತಾಗೆ ರಾಜಮೌಳಿ ಮತ್ತು ಮಣಿರತ್ನಂ ಚಿತ್ರಗಳಂದ್ರೆ ಇಷ್ಟ. ಇವರಿಬ್ಬರ ಸಿನಿಮಾಗಳು ತೆರೆಕಂಡ್ರೆ ಫಸ್ಟ್ ಡೇ ಫಸ್ಟ್ ಶೋ ಮಿಸ್ ಮಾಡದೆ ನೋಡ್ತಾರಂತೆ. ಇತ್ತೀಚಿಗಷ್ಟೆ ರಿಲೀಸ್ ಆದ 'ಬಾಹುಬಲಿ' ಚಿತ್ರವನ್ನು ಕಣ್ಣಾರೆ ಕಂಡ ರಚಿತಾ, ರಾಜಮೌಳಿಗೆ ಫಿದಾ ಆಗಿದ್ದಾರೆ.

ಒಂದು ಸಣ್ಣ ಚಾನ್ಸ್ ಸಿಕ್ಕಿದರೂ, ಅವರುಗಳ ಚಿತ್ರಗಳಲ್ಲಿ ನಟಿಸುವುದಕ್ಕೆ ನಾನು ರೆಡಿ ಅಂತ ರಚಿತಾ ಹೇಳಿದ್ದಾರೆ. ರಚಿತಾರ ಈ ಆಸೆ ಯಾವಾಗ ಈಡೇರುತ್ತೋ ಕಾದು ನೋಡ್ಬೇಕು.

English summary
Kannada Actress Rachita Ram has expressed her desire to work with Tollywood Director SS Rajamouli and Kollywood Director Mani Ratnam, as she is a great fan of both.
Please Wait while comments are loading...

Kannada Photos

Go to : More Photos