»   » ಬಂಪರ್ ಆಫರ್ ಗಿಟ್ಟಿಸಿಕೊಂಡ ನಟಿ ರಾಧಿಕಾ ಪಂಡಿತ್

ಬಂಪರ್ ಆಫರ್ ಗಿಟ್ಟಿಸಿಕೊಂಡ ನಟಿ ರಾಧಿಕಾ ಪಂಡಿತ್

Posted by:
Subscribe to Filmibeat Kannada

ಯಾವುದೇ ಕಾಂಟ್ರವರ್ಸಿ ಇಲ್ಲದೆ. ಯಾರ ತಂಟೆಗೂ ಹೋಗದೆ, ತಾನಾಯ್ತು ತನ್ನ ಸಿನಿಮಾ ಆಯ್ತು ಅಂತ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ಕನ್ನಡ ಚಿತ್ರರಂಗದ ಯಶಸ್ವಿ ನಾಯಕಿ, ನಟಿ ರಾಧಿಕಾ ಪಂಡಿತ್.

ವರ್ಷಕ್ಕೆ ಎರಡರಿಂದ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಅದನ್ನ ಗೆಲ್ಲಿಸಿಕೊಡುವ ರಾಧಿಕಾಗೆ ಒಂದು ಬಂಪರ್ ಆಫರ್ ಹುಡುಕಿಕೊಂಡು ಬಂದಿದೆ. 'ದೊಡ್ಮನೆ ಹುಡುಗ'ನಿಗೆ ಜೋಡಿಯಾಗುವ ಗೋಲ್ಡನ್ ಚಾನ್ಸ್ ರಾಧಿಕಾ ಪಂಡಿತ್ ಪಾಲಾಗಿದೆ.


Dodmane Huduga

ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ದೊಡ್ಮನೆ ಹುಡುಗ' ಸಿನಿಮಾ ಮಾಡುತ್ತಿರುವ ವಿಷಯ ನಿಮ್ಗೆಲ್ಲಾ ಗೊತ್ತೇಯಿದೆ. ಇದೇ ಚಿತ್ರಕ್ಕೆ ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ.


ಇದೀಗ ದೊಡ್ಮನೆ ಖಾನ್ದಾನ್ ನಿಂದ ಬಂದಿರುವ ಬಿಸಿ ಬಿಸಿ ಸುದ್ದಿ ಪ್ರಕಾರ, 'ದೊಡ್ಮನೆ ಹುಡುಗ' ಪುನೀತ್ ಗೆ ನಾಯಕಿಯಾಗಿ ನಟಿ ರಾಧಿಕಾ ಪಂಡಿತ್ ಸೆಲೆಕ್ಟ್ ಆಗಿದ್ದಾರೆ. ಆ ಮೂಲಕ ಅಪ್ಪು ಜೊತೆ ಜೋಡಿಯಾಗುವ ಅವಕಾಶ ರಾಧಿಕಾಗೆ ಎರಡನೇ ಬಾರಿ ದಕ್ಕಿದೆ.


Dodmane Huduga

'ದೊಡ್ಮನೆ ಹುಡುಗ'ನಿಗೆ ನಾಯಕಿಯಾಗಿ ಈ ಮೊದಲು ಗೋಲ್ಡನ್ ಕ್ವೀನ್ ರಮ್ಯಾ ಸೆಲೆಕ್ಟ್ ಆಗಿದ್ದರು. ಅಷ್ಟರೊಳಗೆ ಸಂಭಾವನೆ ವಿಷ್ಯದ ಬಗ್ಗೆ ಕ್ಯಾತೆ ತೆಗೆದ ರಮ್ಯಾ ಮತ್ತೆ 'ದೊಡ್ಮನೆ ಹುಡುಗ'ನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ['ದೊಡ್ಮನೆ ಹುಡ್ಗ' ಪುನೀತ್ ಜೊತೆ ಲಕ್ಕಿ ಸ್ಟಾರ್ ರಮ್ಯಾ!]


ಇತ್ತ ಸೂರಿ ಕೂಡ 'ದೊಡ್ಮನೆ ಹುಡುಗ' ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ನಲ್ಲಿ ಬಿಜಿಯಿದ್ದ ಕಾರಣ, ಇಷ್ಟು ದಿನ ಸೈಲೆಂಟ್ ಆಗಿದ್ದರು. ಇದೀಗ 'ದೊಡ್ಮನೆ ಹುಡುಗ'ನಿಗೆ ಮುಂದಿನ ತಿಂಗಳು ಮುಹೂರ್ತ ಫಿಕ್ಸ್ ಮಾಡುವುದರ ಜೊತೆಗೆ ನಾಯಕಿಯನ್ನ ಆಯ್ಕೆ ಮಾಡಿದ್ದಾರೆ.


Dodmane Huduga

'ಹುಡುಗರು' ಚಿತ್ರದಲ್ಲಿ ಅಪ್ಪು ಜೊತೆ ನಟಿಸಿದ್ದ ರಾಧಿಕಾ, ನಿರ್ದೇಶಕ ಸೂರಿ ಆಕ್ಷನ್ ಕಟ್ ನಲ್ಲಿ 'ಕಡ್ಡಿಪುಡಿ' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಮತ್ತೊಮ್ಮೆ ಇಬ್ಬರ ಹ್ಯಾಟ್ರಿಕ್ ಕಾಂಬಿನೇಷನ್ ಚಿತ್ರದ ಬಂಪರ್ ಆಫರ್ ಹೊಡೆದಿದ್ದಾರೆ ರಾಧಿಕಾ ಪಂಡಿತ್. [ಇದೇ ಮೊದಲ ಬಾರಿಗೆ ಪುನೀತ್ ಜೊತೆ ಅಂಬರೀಶ್]


ಹಾಗೆ ನೋಡಿದರೆ, ಅಪ್ಪು ಜೊತೆ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಕನ್ನಡ ನಾಯಕಿಯರ ಪೈಕಿ ರಮ್ಯಾ ಮೇಡಂ ಮತ್ತು ಪ್ರಿಯಾಮಣಿ ಮಾತ್ರ. ಆ ಜಾಗಕ್ಕೆ ಇವಾಗ ಯುವಕರ ಕಣ್ಮಣಿ ರಾಧಿಕಾ ಪಂಡಿತ್ ಅಡಿಯಿಡುತ್ತಿದ್ದಾರೆ. [ದೊಡ್ಮನೆ ಹುಡುಗನಿಗೆ ಕೈ ಕೊಟ್ಟ ಲಕ್ಕಿ ಸ್ಟಾರ್]


Dodmane Huduga

ಅಂದ್ಹಾಗೆ, 'ದೊಡ್ಮನೆ ಹುಡುಗ' ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಸುಮಲತಾ ಜೋಡಿ ಕೂಡ ನಟಿಸುತ್ತಾರಂತೆ, ಪ್ರಮುಖ ಪಾತ್ರವೊಂದರಲ್ಲಿ ಭಾರತಿ ವಿಷ್ಣುವರ್ಧನ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಅಂತ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಸುದ್ದಿ ಹರಿದಾಡಿತ್ತು. ಆ ಲಿಸ್ಟ್ ಗೆ ರಾಧಿಕಾ ಪಂಡಿತ್ ಈಗ ಹೊಸ ಸೇರ್ಪಡೆಯಾಗಿದ್ದಾರೆ. [ಪುನೀತ್ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಭಾರತಿ ವಿಷ್ಣು]


ಅದೆಲ್ಲವೂ ಪಕ್ಕಾ ಆಗಿ ರೀಲ್ ದೊಡ್ಮನೆ ಕುಟುಂಬದಲ್ಲಿ ಯಾರ್ಯಾರು ಇರುತ್ತಾರೆ ಅಂತ ಖಚಿತವಾಗಬೇಕಂದ್ರೆ, ಮುಂದಿನ ತಿಂಗಳು ಚಿತ್ರ ಸೆಟ್ಟೇರುವವರೆಗೂ ಕಾಯಲೇಬೇಕು. (ಏಜೆನ್ಸೀಸ್)

English summary
Radhika Pandit is roped in as a Lead Actress in Puneeth Rajkumar starrer Dodmane Huduga. This will be the second time Radhika Pandit sharing screen space with Puneeth Rajkumar after Hudugaru.
Please Wait while comments are loading...

Kannada Photos

Go to : More Photos