»   » ರಾಘಣ್ಣನ ಮುದ್ದಿನ ನಾಯಿಮರಿ ನೋಡಿದ್ದೀರಾ?

ರಾಘಣ್ಣನ ಮುದ್ದಿನ ನಾಯಿಮರಿ ನೋಡಿದ್ದೀರಾ?

Written by: ಜೀವನರಸಿಕ
Subscribe to Filmibeat Kannada

ರಾಜ್ ಕುಟುಂಬವೇ ಬಡವರಿಗೆ ದೀನದಲಿತರಿಗೆ ಮರುಗುವ ದೊಡ್ಡಗುಣ ಹೊಂದಿರೋ ಕುಟುಂಬ. ಸಿನಿಮಾಗಳ ಮೂಲಕ ಅರ್ಥಪೂರ್ಣ ಪಾತ್ರಮಾಡಿ ಸಮಾಜಕ್ಕೆ ಮಾದರಿಯಾದ ಡಾ. ರಾಜ್ ಕುಟುಂಬಕ್ಕೆ ಸಾಕು ಪ್ರಾಣಿಗಳು ಅಂದ್ರೂ ಅಚ್ಚುಮೆಚ್ಚು.

Raghavendra Rajkumar beloved pet dog2

ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್ ಬಳಿ ಸದಾ ಒಂದು ನಾಯಿಮರಿ ಇರುತ್ತೆ. ರಾಜ್ ಕುಟುಂಬದ ಬ್ಯಾನರ್ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ರಾಜನ ಹಾಗೆ ಓಡಾಡಿಕೊಂಡಿರುತ್ತೆ. ಅದನ್ನ ಮಗುವಿನಂತೆ ನೋಡಿಕೊಂಡಿರೋ ರಾಘಣ್ಣ ಮಗುವಿನ ಬಟ್ಟೆಯನ್ನೂ ಅದಕ್ಕೆ ತೊಡಿಸ್ತಾರೆ.

ಸ್ವಿಡ್ಜರ್ ಲ್ಯಾಂಡ್ ನ ಸ್ವೈಜರ್ ಜಾತಿಯ ನಾಯಿಯಾಗಿರೋ ಈ ಮುದ್ದಿನ ನಾಯಿಮರಿಗೂ ರಾಘವೇಂದ್ರ ರಾಜ್ ಕುಮಾರ್ ಅಂದ್ರೆ ಅಚ್ಚುಮೆಚ್ಚು. ಯಾರಿಗೂ ಕಚ್ಚದೆ ತೊಂದರೆ ಕೊಡದೆ ತನ್ನಪಾಡಿಗೆ ತಾನಿರೋ ಈ ನಾಯಿಮರಿ ರಾಜ್ ಕುಟುಂಬದೊಳಗೇ ಒಬ್ಬ ಸದಸ್ಯನಂತೆ ಅನ್ಯೋನ್ಯವಾಗಿದೆ.

Raghavendra Rajkumar beloved pet dog1

ಸದ್ಯಕ್ಕೆ ರಾಘವೇಂದ್ರ ರಾಜ್ ಕುಮಾರ್ ತಮ್ಮ ಪುತ್ರ ವಿನಯ್ ರಾಜ್ ಕುಮಾರ್ ಅವರ 'ಸಿದ್ದಾರ್ಥ' ಚಿತ್ರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಪೂರ್ಣಿಯಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ವಿನಯ್ ಅವರಿಗೆ ಅಪೂರ್ವ ಅರೋರಾ ಜೋಡಿಯಾಗಿದ್ದಾರೆ.

English summary
Have you ever seen Sandalwood actor, producer Raghavendra Rajkumar's pet dog? The pet becomes part of his family. Moreover, it walks like prince in Dr Rajkumar's family banner Vajreshwary Combies.
Please Wait while comments are loading...

Kannada Photos

Go to : More Photos