»   » ವಿನಯ್ ಏಳಿಗೆಗಾಗಿ ರಾಘಣ್ಣನಿಂದ ಟೆಂಪಲ್ ಟೂರ್

ವಿನಯ್ ಏಳಿಗೆಗಾಗಿ ರಾಘಣ್ಣನಿಂದ ಟೆಂಪಲ್ ಟೂರ್

Posted by:
Subscribe to Filmibeat Kannada

'ಸಿದ್ದಾರ್ಥ' ಚಿತ್ರ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ನಿರೀಕ್ಷೆಗೂ ಮೀರಿ ಕನ್ನಡ ಪ್ರೇಕ್ಷಕರು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಗೆ ಜಯ ಘೋಷ ಕೂಗಿದ್ದಾರೆ. ಬಿಡುಗಡೆಯಾದ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಸಿದ್ದಾರ್ಥ' ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಕನ್ನಡ ಪ್ರೇಕ್ಷಕರು ನೀಡುತ್ತಿರುವ ಈ ಪ್ರತಿಕ್ರಿಯೆಗೆ ರಾಘವೇಂದ್ರ ರಾಜ್ ಕುಮಾರ್ ಖುಷಿಯಾಗಿದ್ದಾರೆ. ಈ ಕ್ಷಣಕ್ಕೋಸ್ಕರ ಕಳೆದ ಕೆಲ ದಿನಗಳಿಂದ ತಲೆ ಬಿಸಿ ಮಾಡಿಕೊಂಡಿದ್ದ ರಾಘಣ್ಣ ಎಲ್ಲಾ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ.


Raghavendra Rajkumar

ರಾಜ್ ಕುಟುಂಬಕ್ಕೆ ಮೊದಲಿನಿಂದಲೂ ದೇವರ ಮೇಲೆ ಅಪಾರ ನಂಬಿಕೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್', ರಾಘಣ್ಣನ 'ಚಿರಂಜೀವಿ ಸುಧಾಕರ' ಮತ್ತು ಪುನೀತ್ ಅವರ 'ಅಪ್ಪು'...ಹೀಗೆ ಮೂವರ ಚೊಚ್ಚಲ ಚಿತ್ರದ ರಿಲೀಸ್ ವೇಳೆಯಲ್ಲಿ ಇಡೀ ರಾಜ್ ಕುಮಾರ್ ಕುಟುಂಬ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿತ್ತು. ['ಸಿದ್ದಾರ್ಥ' ವಿಮರ್ಶೆ: ಅಣ್ಣಾವ್ರ ಹೆಸರುಳಿಸಿದ ಮೊಮ್ಮಗ]


ಇದೀಗ ತಮ್ಮ ಮಗನ ಚಿತ್ರ 'ಸಿದ್ದಾರ್ಥ' ರಿಲೀಸ್ ಟೈಮ್ ನಲ್ಲೂ ರಾಘಣ್ಣ ಮಾಡುತ್ತಿರುವುದು ಅದನ್ನೇ. ತಿರುಪತಿ, ಮಂತ್ರಾಲಯ, ಬನಶಂಕರಿ ದೇವಸ್ಥಾನ, ಇನ್ಫೆಂಟ್ ಜೀಸಸ್ ಚರ್ಚ್, ಸೇರಿದಂತೆ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ರಾಘಣ್ಣ ಮತ್ತು ಕುಟುಂಬ ಪೂಜೆ ಪುನಸ್ಕಾರ ನೆರವೇರಿಸುತ್ತಿದೆ.


Raghavendra Rajkumar

ಇದರ ಜೊತೆಗೆ ಮಗನಿಗೆ ದೇವರ ಕೃಪೆ ಇರಲಿ ಅಂತ ನಿನ್ನೆಯಷ್ಟೇ ರಾಘಣ್ಣ ಮಾಲೆಯನ್ನ ಧರಿಸಿದ್ದಾರೆ. ರಾಜ್ ಕುಟುಂಬ ಪ್ರತಿ ವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳುವುದು ಸಾಮಾನ್ಯ. ಆದ್ರೆ, ಈ ವರ್ಷ ನಿಗಧಿ ಪಡಿಸಿದ ಸಮಯಕ್ಕಿಂತ ಕೊಂಚ ಬೇಗ ಯಾತ್ರೆ ಕೈಗೊಂಡಿದ್ದಾರೆ.


ಇದಕ್ಕೆ ಕಾರಣ, 'ಸಿದ್ದಾರ್ಥ' ರಿಲೀಸ್. ಕಳೆದ ವರ್ಷ ಅನಾರೋಗ್ಯದ ಕಾರಣ ರಾಘಣ್ಣ ಮಾಲೆಯನ್ನ ಧರಿಸಿರಲಿಲ್ಲ. ಈ ವರ್ಷ ಚೇತರಿಸಿಕೊಂಡಿರುವ ರಾಘಣ್ಣ, ಮಗನ ಒಳಿತಿಗಾಗಿ ಶಬರಿಮಲೆಗೆ ತೆರಳುತ್ತಿದ್ದಾರೆ.


kapali

ಮಾಲೆ ಧರಿಸಿಯೇ ಇಂದು 'ಕಪಾಲಿ' ಚಿತ್ರಮಂದಿರಕ್ಕೆ ರಾಘಣ್ಣ ಮತ್ತು ಶಿವಣ್ಣ ಬಂದರು. 'ಸಿದ್ದಾರ್ಥ' ಮೊದಲ ಶೋ ನ ಇಡೀ ರಾಜ್ ಕುಮಾರ್ ಕುಟುಂಬ ಕಪಾಲಿ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಕುಳಿತು ವೀಕ್ಷಿಸಿದರು. ['ಸಿದ್ದಾರ್ಥ'ನಿಗಾಗಿ ಫಿನ್ ಲ್ಯಾಂಡ್ ನಿಂದ ಬಂದ ಮಿ.ಹೆರ್ರಿ!]


ಕಪಾಲಿ ಚಿತ್ರಮಂದಿರದ ಎದುರು 'ಸಿದ್ದಾರ್ಥ' ಚಿತ್ರ ಎಲ್ಲರನ್ನ ಸೆಳೆಯುತ್ತಿದ್ದ ರೀತಿಯೇ ವಿಭಿನ್ನವಾಗಿತ್ತು. ಪ್ರಚಾರಕ್ಕಾಗಿ ರೆಡಿಯಾಗಿದ್ದ ಸ್ಪೆಷಲ್ ವ್ಯಾನ್, ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ ಬೆಳೆದು ಬಂದ ಕಥೆಯನ್ನ ಹೇಳುವುದರ ಜೊತೆಗೆ 'ಸಿದ್ದಾರ್ಥ' ಹಾಡುಗಳನ್ನ ಪ್ಲೇ ಮಾಡುವುದರ ಮೂಲಕ ಎಲ್ಲರನ್ನ ಚಿತ್ರಮಂದಿರಕ್ಕೆ ಆಕರ್ಷಿಸುತ್ತಿತ್ತು.


Raghavendra Rajkumar

ಇಂತಹ ವಿಭಿನ್ನ ಪ್ರಚಾರ ತಂತ್ರದ ಜೊತೆಗೆ ದೇವರ ಕೃಪೆಯಿಂದ ಮೊದಲ ದಿನ 'ಸಿದ್ದಾರ್ಥ'ನಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಹೀಗೆ ಸಿನಿಮಾ ಶತಕ ಭಾರಿಸಿದರೆ, ರಾಘಣ್ಣನ ಹರಕೆ ಫಲಿಸಿದ ಹಾಗೆ. (ಫಿಲ್ಮಿಬೀಟ್ ಕನ್ನಡ)

English summary
Raghavendra Rajkumar is busy visiting famous temples across Karnataka for the success of his son Vinay. Raghavendra Rajkumar has also worn Mala and is all set for Sabarimala yatra.
Please Wait while comments are loading...

Kannada Photos

Go to : More Photos