»   » ದುನಿಯಾ ವಿಜಯ್ 'ಉಸ್ತಾದ್' ಚಿತ್ರದ ನಾಯಕಿ ರಾಗಿಣಿಯಂತೆ. ಹೌದಾ.?

ದುನಿಯಾ ವಿಜಯ್ 'ಉಸ್ತಾದ್' ಚಿತ್ರದ ನಾಯಕಿ ರಾಗಿಣಿಯಂತೆ. ಹೌದಾ.?

Posted by:
Subscribe to Filmibeat Kannada

ದುಂಡು ದುಂಡಾಗಿದ್ದ ರಾಗಿಣಿ ದ್ವಿವೇದಿ ಬಳುಕುವ ಬಳ್ಳಿಯಂತೆ ಆದ್ಮೇಲೆ ಸಿಕ್ಕಾಪಟ್ಟೆ ಆಫರ್ಸ್ ಸಿಕ್ತಿದ್ಯಂತೆ. ಅದರಲ್ಲೂ 'ತುಪ್ಪದ ಬೆಡಗಿ'ಯ ಹೊಸ ಫೋಟೋ ಶೂಟ್ ನೋಡಿದ್ಮೇಲೆ, ಎರಡು ಕಮರ್ಶಿಯಲ್ ಚಿತ್ರಕ್ಕೆ ಸೆಲೆಕ್ಟ್ ಆಗಿದ್ದಾರೆ ಎಂಬ ಪುಕಾರು ಗಾಂಧಿನಗರದಲ್ಲಿ ಹಬ್ಬಿದೆ.

ಆ ಕಮರ್ಶಿಯಲ್ ಚಿತ್ರಗಳ ಪೈಕಿ ಒಂದು ದುನಿಯಾ ವಿಜಯ್ ಅಭಿನಯಿಸಲು ಒಪ್ಪಿಕೊಂಡಿರುವ 'ಉಸ್ತಾದ್' ಸಿನಿಮಾ ಎನ್ನುತ್ತಿದ್ದಾರೆ ಗಾಂಧಿನಗರದ ಗಾಸಿಪ್ ಕಿಂಗ್ಸ್.! [ವಾವ್...ರಾಗಿಣಿ ಬದಲಾಗಿದ್ದಾರೆ.! ಹೊಸ ಫೋಟೋ ನೋಡಿ...]

ragini-dwivedi-to-play-lead-in-duniya-vijay-starrer-ustad

ಇದು ಎಷ್ಟರಮಟ್ಟಿಗೆ ನಿಜ.? ಯಾವುದಕ್ಕೂ ಒಮ್ಮೆ ಕನ್ಫರ್ಮ್ ಮಾಡಿಕೊಳ್ಳೋಣ ಅಂತ 'ಉಸ್ತಾದ್' ಚಿತ್ರದ ನಿರ್ದೇಶಕ ಎಂ.ಎಸ್.ರಮೇಶ್ ರವರಿಗೆ ಫೋನ್ ಮಾಡಿದ್ವಿ. ['ಫಿಲ್ಮಿಬೀಟ್ ಕನ್ನಡ' ಜೊತೆ 'ಉಸ್ತಾದ್' ದುನಿಯಾ ವಿಜಯ್ ಮನ್ ಕಿ ಬಾತ್.!]

''ನಿಮ್ಮ 'ಉಸ್ತಾದ್' ಚಿತ್ರಕ್ಕೆ ರಾಗಿಣಿ ಹೀರೋಯಿನ್ ಅಂತೆ. ಹೌದಾ.?'' ಅಂತ ಕೇಳಿದಕ್ಕೆ ''ಇನ್ನೂ ಪಕ್ಕಾ ಆಗಿಲ್ಲ. ಹುಡುಕಾಟ ನಡೆಯುತ್ತಿದೆ. ಫೈನಲ್ ಆದ ಕೂಡಲೆ ಹೇಳ್ತೀನಿ'' ಅಂತ ನಿಮ್ಮ ಫಿಲ್ಮಿಬೀಟ್ ಕನ್ನಡಗೆ ಎಂ.ಎಸ್.ರಮೇಶ್ ಪ್ರತಿಕ್ರಿಯೆ ನೀಡಿದರು.

ಅಂದ್ಹಾಗೆ, ಇದೇ ಎಂ.ಎಸ್.ರಮೇಶ್ ನಿರ್ದೇಶನದ 'ಶಂಕರ್ ಐ.ಪಿ.ಎಸ್' ಸಿನಿಮಾದಲ್ಲಿ ದುನಿಯಾ ವಿಜಯ್ ಜೊತೆ ರಾಗಿಣಿ ಡ್ಯುಯೆಟ್ ಹಾಡಿದ್ದರು. ಈಗ ಮೂವರು ಮತ್ತೊಮ್ಮೆ 'ಉಸ್ತಾದ್' ಗಾಗಿ ಒಂದಾಗ್ತಾರಾ ಅಂತ ನೋಡ್ಬೇಕು.

English summary
According to the Grapevine, Kannada Actress Ragini Dwivedi is roped into play lead opposite Kannada Actor Duniya Vijay in Kannada Movie 'Ustad'. But, Director M.S.Ramesh has clarified that heroine selection process is still on.
Please Wait while comments are loading...

Kannada Photos

Go to : More Photos