ರಮ್ಯಾ ಬಣ್ಣ ಹಚ್ಚೋಕೆ ಹೇಳಿದ ರಾಹುಲ್ ಗಾಂಧಿ

Written by: ಜೀವನರಸಿಕ

ಗೋಲ್ಡನ್ ಗರ್ಲ್ ರಮ್ಯಾ ಹಾಗೂ ರಾಹುಲ್ ಗಾಂಧಿ ಫೋಟೋಶೂಟ್ ಮಾಡಿದ್ದಾರೆ. ಫೋಟೋಶೂಟ್ ಅಂದರೆ ಈ ಎಲೆಕ್ಷನ್ ಟೈಮಲ್ಲಿ ಯಾವ ಸಿನಿಮಾ. ಕನ್ನಡಾನಾ, ಬಾಲಿವುಡ್ ಸಿನಿಮಾನಾ? ರಮ್ಯಾ ಇನ್ಫುಯೆನ್ಸ್ ನಿಂದ ರಾಹುಲ್ ಗಾಂಧಿ ಕನ್ನಡಕ್ಕೇನಾದ್ರೂ ಬರ್ತಿದ್ದಾರಾ?

ಇಲ್ಲಾ ರಾಜಕೀಯದ ಜೊತೆ ರಮ್ಯಾ ಬಾಲಿವುಡ್ ಎಂಟ್ರೀನಾ? ನಿಮ್ಮಲ್ಲಿ ಈ ಎಲ್ಲಾ ಪ್ರಶ್ನೆಗಳೇಳೋಕೂ ಮೊದಲೆ ನಿಮ್ಮ ಅನುಮಾನವನ್ನ ಪರಿಹರಿಸೋಣ.
ಇದು ಬರೀ ಫೋಟೋಶೂಟ್ ಅಲ್ಲ. ಇದೊಂದು ಜಾಹೀರಾತಿನ ಚಿತ್ರೀಕರಣ. [ರಮ್ಯಾ 'ನೀರ್ ದೋಸೆ'ಗೆ ರಾಗಿಣಿ ಬಿಸಿಬಿಸಿ ತುಪ್ಪ]


ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಪ್ರಚಾರ ನೀಡೋಕೆ ಪ್ಲಾನ್ ಮಾಡಿರೋ ರಾಹುಲ್ ಗಾಂಧಿ ರಮ್ಯಾರಿಗೆ ಕರೆ ಮಾಡಿ ದೆಹಲಿ ಕರೆಸಿಕೊಂಡಿರೋದು. ಕಾಂಗ್ರೆಸ್ ನ ಯುವಶಕ್ತಿಯನ್ನ ಬಡಿದೆಬ್ಬಿಸೋಕೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಯುವಕರ ಕೈಗೆ ಅಧಿಕಾರ ಕೊಡಲಿದೆ ಅನ್ನೋದನ್ನ ಎತ್ತಿ ತೋರಿಸೋಕೆ ಹೊರಟಿರೋ ಕಾಂಗ್ರೆಸ್ ಯುವರಾಜ. ಯುವ ರಾಜಕಾರಿಣಿಗಳ ಒಂದು ಫೋಟೋಶೂಟ್ ಮಾಡಿಸ್ತಿದ್ದಾರಂತೆ. [ರಮ್ಯಾ ಚುನಾವಣಾ ಪ್ರಚಾರ]

ಶತಾಯಗತಾಯ ಮೋದಿಗೆ ಸೆಡ್ಡು ಹೊಡೆಯೋಕೆ ಪ್ಲಾನ್ ಮಾಡಿರೋ ರಾಹುಲ್ ಗಾಂಧಿ ಕರ್ನಾಟಟಕದಿಂದ ಸಕ್ಕರೆ ನಾಡಿನ ಸುಂದರ ಚೆಲುವೆ ರಮ್ಯಾರಿಗೆ ಮತ್ತೆ ಬಣ್ಣ ಹಚ್ಚೋಕೆ ಹೇಳಿದ್ದಾರೆ. ಆದರೆ ಅದು ಸಿನಿಮಾಗಲ್ಲ ರಾಜಕೀಯಕ್ಕೆ. ಸಿನಿಮಾಗಿಂತ ರಾಜಕೀಯದಲ್ಲಿ ಆಕ್ಟಿಂಗ್ ಹೆಚ್ಚು ವರ್ಕ್ ಔಟ್ ಆಗೋದು. ಕಣ್ಣಿರಿಟ್ಟು ಓಟು ಕೇಳಿದ್ರೆ ಕನ್ನಡಿಗರು ಕರಗೋದು ಹೆಚ್ಚು. ಹೇಳಿ ಕೇಳಿ ಇಂಡಿಯನ್ಸ್ ಸೆಂಟಿಮೆಂಟಲ್ ಫೂಲ್ಸ್ ಅಲ್ವಾ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Read more about: ramya, rahul gandhi, elections 2014, mandya, jeevanarasika, ರಮ್ಯಾ, ರಾಹುಲ್ ಗಾಂಧಿ, ಲೋಕಸಭೆ ಚುನಾವಣೆ 2014, ಮಂಡ್ಯ, ಜೀವನರಸಿಕ

English summary
Congress vice-president Rahul Gandhi gives a green sinal to Actor-turned-politician Ramya to act, but not in films. He says to act in Election campaign! So Ramya, who is contesting the Lok Sabha elections, kick-started her campaign from the Mandya.
Please Wait while comments are loading...

Kannada Photos

Go to : More Photos