»   » ಭೈರಪ್ಪ 'ಪರ್ವ' ಕಾದಂಬರಿ ಬಗ್ಗೆ ರಾಜಮೌಳಿ ಸ್ಪಷ್ಟನೆ

ಭೈರಪ್ಪ 'ಪರ್ವ' ಕಾದಂಬರಿ ಬಗ್ಗೆ ರಾಜಮೌಳಿ ಸ್ಪಷ್ಟನೆ

Written by: ಉದಯರವಿ
Subscribe to Filmibeat Kannada

ತೆಲುಗಿನ ಯಶಸ್ವಿ ಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಸದ್ಯಕ್ಕೆ ಅವರ ಮಹತ್ವಾಕಾಂಕ್ಷಿ 'ಬಾಹುಬಲಿ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಬಳಿಕ ಅವರು ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರ 'ಪರ್ವ' ಆಧಾರಿತ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ರಾಜಮೌಳಿ ಅವರು, "ಕನ್ನಡ ಕಾದಂಬರಿ ಆಧಾರಿಸಿ ನಾನು ಚಿತ್ರ ಮಾಡಲಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. ಬಾಹುಬಲಿ ಚಿತ್ರದ ಬಳಿಕ ನಾನು ಯಾವ ಚಿತ್ರ ಮಾಡಬೇಕು ಎಂಬುದನ್ನು ಯೋಚಿಸಿಲ್ಲ" ಎಂದಿದ್ದಾರೆ. ['ಬಾಹುಬಲಿ'ಯಲ್ಲಿ ಸುದೀಪ್ ಹೆಸರು, ಪಾತ್ರ ಬಹಿರಂಗ]

SS Rajamouli

ಈ ಮೂಲಕ ಭೈರಪ್ಪ ಅವರ 'ಪರ್ವ' ಕಾದಂಬರಿ ಆಧಾರಿಸಿ ರಾಜಮೌಳಿ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿಗೆ ಬ್ರೇಕ್ ಬಿದ್ದಿದೆ. ಪರ್ವ ಕಾದಂಬರಿ ಮಹಾಭಾರತಕ್ಕೆ ಸಂಬಂಧಿಸಿದ್ದು ಪೌರಾಣಿಕ ಕಥೆಗಳಿಗೆ ತೆಲುಗಿನಲ್ಲಿ ಭಾರಿ ಡಿಮ್ಯಾಂಡ್ ಇದೆ. ಹಾಗಾಗಿ 'ಪರ್ವ' ಕಾದಂಬರಿ ಆಧಾರಿಸಿ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ರಾಜಮೌಳಿ ಚಿತ್ರಗಳೆಂದರೆ ಅದನ್ನು ಕಾತುರದಿಂದ ನಿರೀಕ್ಷಿಸುವ ಬಹಳ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಇದೀಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಹುಬಲಿ ಚಿತ್ರವೂ ಭಾರಿ ಬಜೆಟ್ ನಿಂದ ಕೂಡಿದ್ದು ಭಾರತೀಯ ಚಿತ್ರರಂಗವೇ ಎದುರು ನೋಡುವಂತೆ ಮಾಡಿದೆ.

ಇನ್ನು ಈ ಚಿತ್ರದ ಶೂಟಿಂಗ್ ಟೈಮಲ್ಲಿ ಯಾರೂ ಮೊಬೈಲ್ ಬಳಸದಂತೆ ನಿಷೇಧ ಹೇರಲಾಗಿದೆ. ಚಿತ್ರದ ಮಾಹಿತಿ ಸೋರಿಕೆಯಾದಂತೆ ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದಾರೆ ರಾಜಮೌಳಿ ಚಿತ್ರವನ್ನು ತರುತ್ತಿರುವುದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

English summary
Tollywood director SS Rajamouli denies the news of making movie based on a Kannada novel 'Parva'. He tweets, "News regarding me making a movie based on a Kannada novel is not true..(I) haven't planned anything after Baahubali, as of yet.“
Please Wait while comments are loading...
Best of 2016

Kannada Photos

Go to : More Photos