»   » ತುರುವೆಕೆರೆಯಲ್ಲಿ 'ಮುಸ್ಸಂಜೆ ಗೆಳತಿ' ನಾಯಕ ಅರೆಸ್ಟ್

ತುರುವೆಕೆರೆಯಲ್ಲಿ 'ಮುಸ್ಸಂಜೆ ಗೆಳತಿ' ನಾಯಕ ಅರೆಸ್ಟ್

Posted by:
Subscribe to Filmibeat Kannada

BP Srinivas
ನಟ, ನಿರ್ದೇಶಕ, ನಿರ್ಮಾಪಕ ಬಿ.ಪಿ. ಶ್ರೀನಿವಾಸ್ ಅವರನ್ನು ಕೋಟ್ಯಾಂತರ ರು. ವಂಚನೆ ಆರೋಪದ ಮೇಲೆ ರಾಜಾಸ್ತಾನ ಪೊಲೀಸರು ಗುರುವಾರ (ಅ.18) ಬಂಧಿಸಿದ್ದಾರೆ. ತುರುವೆಕೆರೆಯ ಅವರ ಫಾಮ್ ಹೌಸ್ ನಲ್ಲಿ ಅವರನ್ನು ಬೆಳಗಿನ ಜಾವ 5.30ರ ಸಮಯದಲ್ಲಿ ಬಂಧಿಸಲಾಗಿದೆ.

ತುರುವೆಕೆರೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಶ್ರೀನಿವಾಸ್ ಅವರನ್ನು ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ದೇಶದಲ್ಲಿ ವಿವಿಧ ಬ್ಯಾಂಕ್ ಸ್ಥಾಪನೆ, ಚೀಟಿ ವ್ಯವಹಾರ ಸೇರಿದಂತೆ ವಿವಿಧ ನೆಪವೊಡ್ಡಿ ಕೋಟಿಗಟ್ಟಲೆ ವಂಚನೆ ಮಾಡಿರುವ ಆರೋಪ ಶ್ರೀನಿವಾಸ್ ಮೇಲಿದೆ.

ರಾಜಸ್ತಾನದ ಕಿಶೋರ್ ಸೇಠ್ ಎಂಬುವವರಿಂದ ರು.15 ಕೋಟಿ ಪಡೆದು ಅವರಿಗೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬ್ಯಾಂಕ್ ಒಂದನ್ನು ಪ್ರಾರಂಭಿಸುವುದಾಗಿ ಹೇಳಿ ಸೇಠ್ ಅವರಿಂದ 2008ರಲ್ಲಿ ರು.15 ಕೋಟಿಗಳನ್ನು ಶ್ರೀನಿವಾಸ್ ಪಡೆದಿದ್ದರು ಎನ್ನಲಾಗಿದೆ. ಆದರೆ ಹಣ ಪಡೆದು ಬ್ಯಾಂಕನ್ನು ಆರಂಭಿಸದೆ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದರಂತೆ.

ತಮ್ಮ ಹಣ ವಾಪಸ್ ನೀಡುವಂತೆ ಅವರು ಶ್ರೀನಿವಾಸ್ ಗೆ ಕೇಳಲಾಗಿ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ರಾಜಸ್ತಾನ ಪೊಲೀಸರಿಗೆ ಸೇಠ್ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ತುಮಕೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅವರನ್ನು ಬಂಧಿಸಿದ್ದಾರೆ.

'ಮುಸ್ಸಂಜೆ ಗೆಳತಿ' ಎಂಬ ಚಿತ್ರದಲ್ಲಿ ನಟಿಸಿ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದರು. ಈ ಚಿತ್ರಕ್ಕೆ ನಾಯಕಿ ಶ್ರೀನಿವಾಸ್ ಅವರ ಪುತ್ರಿ ಶಾಲಿನಿ. ಇದಾದ ಬಳಿಕ ಇನ್ನೂ ತೆರೆಗೆ ಬಾರದ 'ಹರಿಶ್ಚಂದ್ರಘಾಟ್' ಎಂಬ ಚಿತ್ರವನ್ನೂ ಕೈಗೆತ್ತಿಕೊಂಡಿದ್ದರು. (ಏಜೆನ್ಸೀಸ್)

English summary
Rajasthan police arrests Kannada film producer BP Srinivas (55) on 18th October Thursday at his farm house in Turuvekere for allegedly duping number of people to the tune of several lakhs of rupees. Srinivas acted as a hero in a movie - ‘Mussanjeya Gelathi’ in which his daughter Shalini was the heroine.
Please Wait while comments are loading...

Kannada Photos

Go to : More Photos