»   » ರಜನಿ ಚಿತ್ರದಲ್ಲಿ ಅಭಿನಯಿಸಿದ್ದ ವಾನರ ವಿಧಿವಶ

ರಜನಿ ಚಿತ್ರದಲ್ಲಿ ಅಭಿನಯಿಸಿದ್ದ ವಾನರ ವಿಧಿವಶ

Written by: ಶಂಕರ್, ಚೆನ್ನೈ
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಮೋಘ 'ಅರುಣಾಚಲಂ' (1997) ಚಿತ್ರದಲ್ಲಿ ಅಭಿನಯಿಸಿದ್ದ ಕೋತಿ ವಿಧಿವಶವಾಗಿದೆ. ಚಿತ್ರದಲ್ಲಿ ಆ ವಾನರಕ್ಕೆ ರಾಮು ಎಂದು ಹೆಸರಿಡಲಾಗಿತ್ತು. ಶನಿವಾರ (ಏ.12) 'ರಾಮು' ಇಹಲೋಕ ತ್ಯಜಿಸಿದ್ದಾನೆ.

ಸೇಲಂ ಜಿಲ್ಲೆಯ ಅತ್ತೂರಿನ ಪುಲಿಕುಟ್ಟಿ ಗೋವಿಂದನ್ ಎಂಬುವವರು ಕೋತಿಗಳನ್ನು ಸಾಕಿ ಸಲುಹಿ ಸಿನಿಮಾಗಳಲ್ಲಿ ಅಭಿನಯಿಸಲು ಬಾಡಿಗೆಗೆ ಕೊಡುತ್ತಿದ್ದರು. ಅದರಲ್ಲೂ ರಾಮು ಎಂಬ ಕೋತಿ ಮಾತ್ರ ಬಹಳ ಚಾಲಾಕಿ ಇತ್ತು. ರಜನಿಕಾಂತ್ ಚಿತ್ರದಲ್ಲಿ ಚಾನ್ಸ್ ಗಿಟ್ಟಿಸಿದೆ ಎಂದರೆ ನೀವೇ ಊಹಿಸಿ ರಾಮು ಟ್ಯಾಲೆಂಟ್. [ರಜನಿಕಾಂತ್ ಗಿಂತಲೂ ಅಧಿಕ ಸಂಭಾವನೆ ಪಡೆದ ತಲೈವಾ]

Rajinikanth

'ಅರುಣಾಚಲಂ' ಚಿತ್ರದಲ್ಲಿ ರಜನಿ ಬಸ್ಸಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅವರ ಕೊರಳಲ್ಲಿನ ರುದ್ರಾಕ್ಷಿ ಮಾಲೆಯನ್ನು ಕಿತ್ತುಕೊಂಡು ಹೋಗುವ ಸನ್ನಿವೇಶದಲ್ಲಿ ರಾಮು ಕಾಣಿಸಿಕೊಳ್ಳುತ್ತದೆ. ಆ ಒಂದು ಸನ್ನಿವೇಶ ಕಥೆಯಲ್ಲಿ ಬಹಳ ನಿರ್ಣಾಯಕ ಪಾತ್ರವಹಿಸುತ್ತದೆ.

2006ರಲ್ಲಿ ರಾಮುನನ್ನು ಗೋವಿಂದನ್ ಮಗ ನೆಹರು ಎಂಬುವವರು ಸೇಲಂನ ಕುರುಮಪಟ್ಟಿ ಪ್ರಾಣಿಸಂಗ್ರಹಾಲಕಕ್ಕೆ ರಾಮುನನ್ನು ಒಪ್ಪಿಸಿದರು. ಅಲ್ಲಿಂದ ರಾಮು ವಾಸ ಜೂನಲ್ಲೇ ಸಾಗಿತು. ಸರಿಸುಮಾರು 33 ವರ್ಷದ ರಾಮು ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ.

ಕಡೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೂ ಸ್ಪಂದಿಸದೆ ಶನಿವಾರ ಮುಂಜಾನೆ ಕೊನೆಯುಸಿರೆಳೆದಿದ್ದಾನೆ. ಹೇಳಿಕೇಳಿ ರಜನಿಕಾಂತ್ ಚಿತ್ರದಲ್ಲಿ ಅಭಿನಯಿಸಿದ್ದವನು ರಾಮು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಜೂಗೆ ಆಮಮಿಸಿದ ಕಂಬನಿಗರೆದರು. ಅರುಣಾಚಲಂ ಚಿತ್ರದ ಪಾತ್ರವನ್ನು ನೆನೆದು ಕಣ್ಣೀರಾದರು. ರಾಮು ಮೃತದೇಹವನ್ನು ಶವಪರೀಕ್ಷೆ ನಿಮಿತ್ತ ಸೇಲಂನ ವೆಟರ್ನರಿ ಆಸ್ಪತ್ರೆಗೆ ರವಾನಿಸಲಾಯಿತು.

English summary
Rajanikanth's Aruna Chalam Fame Monkey Ramu died Saturday in Zoo. Arunachalam is a 1997 Tamil drama film directed by Sundar C and written by Crazy Mohan. The film features Rajinikanth, Soundarya and Rambha in the lead roles, with Jaishankar and Ravichandran in other pivotal roles.
Please Wait while comments are loading...

Kannada Photos

Go to : More Photos