»   » ಇಪ್ಪತ್ನಾಲ್ಕು ಗಂಟೆಗಳಲ್ಲೇ ರಜನಿ 'ಲಿಂಗಾ' ನಕಲಿ ಸಿಡಿಗಳು!

ಇಪ್ಪತ್ನಾಲ್ಕು ಗಂಟೆಗಳಲ್ಲೇ ರಜನಿ 'ಲಿಂಗಾ' ನಕಲಿ ಸಿಡಿಗಳು!

Posted by:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಲಿಂಗಾ ಬಿಡುಗಡೆಯಾಗಿ ಇನ್ನೂ ಇಪ್ಪತ್ನಾಲ್ಕು ಗಂಟೆಗಳು ಕಳೆದಿಲ್ಲ ಆಗಲೇ ನಕಲಿ ಸಿಡಿಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಪೈರಸಿಯನ್ನು ತಡೆಯಲು ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ನಕಲಿ ಸಿಡಿಗಳು ಬಿಡುಗಡೆಯಾಗಿ ಶಾಕ್ ಗೆ ಗುರಿ ಮಾಡಿವೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಪೊಲೀಸರು ದಾಳಿ ಮಾಡಿ ಲಿಂಗಾ ಚಿತ್ರಕ್ಕೆ ಸಂಬಂಧಿಸಿದ ಮೂರು ಸಾವಿರ ನಕಲಿ ಸಿಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಜೊತೆಗೆ ನಕಲಿ ಸಿಡಿಗಳೂ ಹೊರಬಂದ ಹಿನ್ನೆಲೆಯಲ್ಲಿ ಚಿತ್ರೋದ್ಯಮ ಕಂಗಾಲಾಗಿದೆ. [ಲಿಂಗಾ ಚಿತ್ರ ವಿಮರ್ಶೆ]

Ligaa piracy cds seized

ಪೊಲೀಸಲು ಮಾಡಿದ ಆಕಸ್ಮಿಕವಾಗಿ ದಾಳಿಯಲ್ಲಿ ಲಿಂಗಾ ಚಿತ್ರದ ಸಿಡಿಗಳ ಜೊತೆಗೆ ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ನಲವತ್ತೆಂಟು ಸಾವಿರ ಸಿಡಿಗಳು ಲಭ್ಯವಾಗಿವೆ. ಇವೆಲ್ಲವನ್ನೂ ಪೊಲೀಸಲು ಜಪ್ತಿ ಮಾಡಿದ್ದಾರೆ. ಗುಂಟೂರು ಜಿಲ್ಲೆಯ ವಿನುಕೊಂಡ ಕೇಂದ್ರಸ್ಥಾನವಾಗಿಸಿಕೊಂಡು ಈ ಸಿಡಿಗಳನ್ನು ತಯಾರಿಸಲಾಗುತ್ತಿತ್ತು.

ಎರಡು ಮನೆಗಳಲ್ಲಿ ಅತ್ಯಾಧುನಿಕ ತಾಂತ್ರಿಕ ಪರಿಕರಗಳ ಮೂಲಕ ಸಿನಿಮಾ ಬಿಡುಗಡೆಯಾದ ದಿನವೇ ಸಿಡಿಗಳನ್ನು ತಯಾರಿಸಿ ಇತರೆ ಜಿಲ್ಲೆಗಳಿಗೆ ಸರಬರಾಜು ಮಾಡುತ್ತಾ ಕೋಟ್ಯಾಂತರ ರುಪಾಯಿ ವ್ಯವಹಾರ ನಡೆಸುತ್ತಿದ್ದ ದಂಧೆಯನ್ನು ಪೊಲೀಸಲು ಬಯಲಿಗೆಳೆದಿದ್ದಾರೆ.

Ligaa piracy cds seized

ಪೊಲೀಸರ ದಾಳಿಯಲ್ಲಿ 40 ಸಾವಿರಕ್ಕೂ ಅಧಿಕ ನಕಲಿ ಸಿಡಿಗಳು, 22 ಮಾನಿಟರಿಂಗ್ ಸಿಪಿಯುಗಳು ಸಿಕ್ಕಿವೆ. ಅದರಲ್ಲೂ ರಜನಿಕಾಂತ್ ಅಭಿನಯದ ಲಿಂಗಾ ಚಿತ್ರಕ್ಕೆ ಸಂಬಂಧಿದ ನಕಲಿ ಸಿಡಿಗಳೇ 3 ಸಾವಿರಕ್ಕೂ ಅಧಿಕವಾಗಿರುವುದು ನಿರ್ಮಾಪಕರನ್ನು ಆತಂಕಕ್ಕೀಡು ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲಿಶೆಟ್ಟಿ ವೆಂಕಟರಾಮಾಂಜನೇಯಲು ಎಂಬುವವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. (ಏಜೆನ್ಸೀಸ್)

English summary
Rajinikanth and Sonakshi Sinha, Anushka Shetty's Lingga pirated CDs are sezied on it's release in Vinukonda town on Friday by CCS police.
Please Wait while comments are loading...

Kannada Photos

Go to : More Photos