»   » ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ'

ದಕ್ಷಿಣದಲ್ಲಿ ಹೊಸ ದಾಖಲೆ ಸೃಷ್ಟಿಸಿದ ರಜನಿ 'ಲಿಂಗಾ'

Posted by:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬರ್ತಿದೆ ಅಂದ್ರೆ ಬರೀ ಕಾಲಿವುಡ್ ನಲ್ಲಿ ಮಾತ್ರ ಅಲ್ಲ. ಇಡೀ ಭಾರತವೇ, ಅಷ್ಟೆ ಯಾಕೆ ಜಪಾನ್, ಶ್ರೀಲಂಕಾ, ಮಲೇಶಿಯಾದಲ್ಲೂ ಅಭಿಮಾನಿಗಳು ಬಕಪಕ್ಷಿಗಳಂತೆ ಕಾದುಕುಳಿತಿರ್ತಾರೆ. ಹಾಗಾದ್ರೆ, ವರ್ಲ್ಡ್ ವೈಡ್ ಬಿಗ್ಗೆಸ್ಟ್ ಫ್ಯಾನ್ ಫಾಲೋವಿಂಗ್ ಇರುವ ರಜನಿಕಾಂತ್ ಸಿನಿಮಾ ಎಷ್ಟಕ್ಕೆ ಸೇಲ್ ಆಗಬಹುದು?

ಅಭಿಮಾನಿಗಳ ಈ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ. 'ತಲೈವಾ' ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ಡಿಸೆಂಬರ್ 12, ಅಂದ್ರೆ 'ಪಡೆಯಪ್ಪ'ನ ಹುಟ್ಟುಹಬ್ಬದಂದೇ ಅದ್ದೂರಿಯಾಗಿ ತೆರೆಗೆ ಬರಲಿದೆ. ಸಖತ್ ರಿಚ್ ಆಗಿ, ಹಿಂದೆಂದಿಗಿಂತಲೂ ಸೂಪರ್ ಸ್ಟೈಲಿಶ್ ಅವತಾರದಲ್ಲಿ ರಜನಿ ನಿಮ್ಮೆಲ್ಲರನ್ನು ರಂಜಿಸೋಕೆ ಬರಲಿದ್ದಾರೆ. ['ಬಂಗಾರದ ಮನುಷ್ಯ' ರೀಮೇಕ್ ಗೆ ರಜನಿಕಾಂತ್ ರೆಡಿ]

ರಜನಿ ಸಿನಿಮಾ ಅಂದ್ರೆ, ಕೇಳ್ಬೇಕಾ ಪೈಸಾ ವಸೂಲ್ ಮಾಡುವುದರಲ್ಲಿ ತುಟಿ ಎರಡು ಮಾಡುವ ಹಾಗೆ ಇಲ್ಲ ಬಿಡಿ. ಹೀಗಿರುವಾಗ ಹಲವು ವಿಶೇಷತೆಗಳ ಆಗರವಾಗಿರುವ 'ಲಿಂಗಾ' ಚಿತ್ರ ರಿಲೀಸ್ ಆಗ್ತಿದೆ ಅಂದ್ಮೇಲೆ, ಚಿತ್ರದ ವಿತರಣಾ ಹಕ್ಕುಗಳನ್ನ ಖರೀದಿಸೋಕೆ ಹಲವಾರು ವಿತರಕರು, ದೊಡ್ಡ ದೊಡ್ಡ ಪ್ರೊಡಕ್ಷನ್ ಕಂಪನಿಗಳೇ ಕ್ಯೂ ನಲ್ಲಿತ್ತು.

ದಕ್ಷಿಣ ಭಾರತದ ಮಟ್ಟಿಗೆ ಇದು ದಾಖಲೆ ಮೊತ್ತ

ದಕ್ಷಿಣ ಭಾರತದ ಮಟ್ಟಿಗೆ ಇದು ದಾಖಲೆ ಮೊತ್ತ

ಆದ್ರೆ ಎಲ್ಲರನ್ನ ಸೈಡಲ್ಲಿಟ್ಟು 'ಲಿಂಗಾ' ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ನ ಈರೋಸ್ ಇಂಟರ್ ನ್ಯಾಷಿನಲ್ ಸಂಸ್ಥೆ ಪಡೆದುಕೊಂಡಿದೆ. ಅದು ಬರೋಬ್ಬರಿ ರು.120 ಕೋಟಿಗೆ. ದಕ್ಷಿಣ ಭಾರತದ ಮಟ್ಟಿಗೆ ಇದು ದಾಖಲೆ ಮೊತ್ತ.

ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಲಿಂಗಾ

ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಲಿಂಗಾ

ಈ ಹಿಂದೆ, 'ಕೊಚ್ಚಾಡಿಯಾನ್' ಚಿತ್ರಕ್ಕೆ ಸಹ-ನಿರ್ಮಾಣದ ಹೊಣೆ ಹೊತ್ತಿದ್ದ ಈರೋಸ್ ಇಂಟರ್ ನ್ಯಾಷಿನಲ್ ಸಂಸ್ಥೆ ಇದೀಗ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ರೆಡಿಯಾಗಿರುವ 'ಲಿಂಗಾ' ಚಿತ್ರದ ವಿತರಣಾ ಹಕ್ಕುಗಳನ್ನ ಖರೀದಿಸಿದೆ.

ರು.120 ಕೋಟಿಗೆ 'ಲಿಂಗಾ' ಡಿಸ್ಟ್ರಿಬ್ಯೂಷನ್ ರೈಟ್ಸ್

ರು.120 ಕೋಟಿಗೆ 'ಲಿಂಗಾ' ಡಿಸ್ಟ್ರಿಬ್ಯೂಷನ್ ರೈಟ್ಸ್

ಮೂಲಗಳ ಪ್ರಕಾರ, ಬರೋಬ್ಬರಿ ರು.120 ಕೋಟಿಗೆ 'ಲಿಂಗಾ' ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಸೇಲ್ ಆಗಿದ್ದು, 'ಲಿಂಗಾ ಚಿತ್ರ ರಜಿನಿಯ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ದಾಖಲೆ ಸೃಷ್ಟಿಸಲಿದೆ' ಅಂತಾರೆ ಈರೋಸ್ ಇಂಟರ್ ನ್ಯಾಷಿನಲ್ ಸಂಸ್ಥೆಯ ಸಿ.ಎಫ್.ಓ ಕಮಲ್ ಜೈನ್.

ಜಪಾನ್ ಮತ್ತು ಮಲೇಶಿಯಾದಲ್ಲೂ 'ಲಿಂಗಾ'

ಜಪಾನ್ ಮತ್ತು ಮಲೇಶಿಯಾದಲ್ಲೂ 'ಲಿಂಗಾ'

ಭಾನುವಾರ (ನ.16) 'ಲಿಂಗಾ' ಚಿತ್ರದ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಆಗಲಿದೆ. ಜಪಾನ್ ಮತ್ತು ಮಲೇಶಿಯಾದಲ್ಲೂ 'ಲಿಂಗಾ' ಚಿತ್ರವನ್ನ ರಿಲೀಸ್ ಮಾಡೋಕೆ ಈರೋಸ್ ಇಂಟರ್ ನ್ಯಾಷಿನಲ್ ಸಂಸ್ಥೆ ಚಿತ್ರಕ್ಕೆ ಸಬ್ ಟೈಟಲ್ ಅಳವಡಿಸೋಕೆ ನಿರ್ಧರಿಸಿದೆ.

ಬಹುತೇಕ ಕರ್ನಾಟಕದಲ್ಲೇ ಶೂಟ್

ಬಹುತೇಕ ಕರ್ನಾಟಕದಲ್ಲೇ ಶೂಟ್

ಬಹುತೇಕ ಕರ್ನಾಟಕದಲ್ಲೇ ಶೂಟ್ ಆಗಿರೋ 'ಲಿಂಗಾ' ಚಿತ್ರದಲ್ಲಿ ರಜನಿ ಅಂತೂ ಅಲ್ಟ್ರಾ ಮಾಡ್ರನ್. ರಜನಿ ಜೊತೆ ಜೋಡಿಯಾಗುವುದಕ್ಕೆ ಮತ್ತಷ್ಟು ತೆಳ್ಳಗಾಗಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ ಸೋನಾಕ್ಷಿ ಸಿನ್ಹಾ. ಅನುಷ್ಕಾ ಶೆಟ್ಟಿ, ಜಗಪತಿ ಬಾಬೂರಂತಹ ದೊಡ್ಡ ತಾರಾಗಣವಿರುವ ಲಿಂಗಾ ಚಿತ್ರಕ್ಕೆ ಎ.ಆರ್. ರೆಹಮಾನ್ ಮ್ಯೂಸಿಕ್ ಇದೆ.

ಎಲ್ಲಾ ರೆಕಾರ್ಡ್ ಗಳನ್ನು ಉಡೀಸ್ ಮಾಡಲಿದೆ ಲಿಂಗಾ

ಎಲ್ಲಾ ರೆಕಾರ್ಡ್ ಗಳನ್ನು ಉಡೀಸ್ ಮಾಡಲಿದೆ ಲಿಂಗಾ

ಕನ್ನಡಿಗ ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರೋ 'ಲಿಂಗಾ' ಚಿತ್ರಕ್ಕೆ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ರಿಲೀಸ್ ಗೂ ಮುನ್ನವೇ ರು.120 ಕೋಟಿ ಬಾಚಿ ದಾಖಲೆ ಸೃಷ್ಟಿಸಿರೋ 'ಲಿಂಗಾ' ತೆರೆಗೆ ಬಂದಮೇಲೆ ಎಲ್ಲಾ ರೆಕಾರ್ಡ್ ಗಳನ್ನ ಉಡೀಸ್ ಮಾಡುವುದರಲ್ಲಿ ಡೌಟೇ ಇಲ್ಲ.

English summary
Super Star Rajinikanth most-awaited movie 'Lingaa' has created a record prior release. According to the reliable sources, the distribution rights of the movie has acquired by the Eros International for Rs. 120 crores, which is the record price for any of the South-Indian film.
Please Wait while comments are loading...

Kannada Photos

Go to : More Photos