»   » ಗಣೇಶ ಹಬ್ಬಕ್ಕೆ ರಜನಿ 'ಕೊಚಾಡಿಯನ್' ಟೀಸರ್

ಗಣೇಶ ಹಬ್ಬಕ್ಕೆ ರಜನಿ 'ಕೊಚಾಡಿಯನ್' ಟೀಸರ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಕೊಚಾಡಿಯನ್ ಚಿತ್ರಕ್ಕೆ ಕುಂಬಳಕಾಯಿ ಒಡೆದ ಟೈಂ ಸರಿಯಿಲ್ಲ ಎಂದು ಕಾಣುತ್ತದೆ. 2012ರಲ್ಲೇ ರಜನಿ ಅವರ ಮಹೋನ್ನತ ಚಿತ್ರ ಎಂದು ಹೇಳಿಕೊಂಡು ಹೊರ ಬಿದ್ದಿದ್ದ ಚಿತ್ರದ ಪೋಸ್ಟರ್ ಗಳು ಈಗ ಧೂಳು ಹಿಡಿದಿದ್ದವು, ಆದರೆ, ಸೂಪರ್ ಸ್ಟಾರ್ ರಜನಿ ಅವರನ್ನು ಹೊಸ ಗೆಟಪ್, ಲುಕ್ ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಕೊನೆಗೂ ಚಿತ್ರದ ಬಿಡುಗಡೆ ಭಾಗ್ಯ ಕಾಣುತ್ತಿದೆ.

ರಜನಿ ಅವರ ಹೊಸ ಅವತಾರಕ್ಕೆ ಮತ್ತೊಮ್ಮೆ ಹೊಸ ಸ್ಪರ್ಶ ನೀಡಲಾಗಿದ್ದು ಹೊಸ ಹೊಸ ಪೋಸ್ಟರ್ ಗಳನ್ನು ಹೊರ ಹಾಕುವ ಮೂಲಕ ನಿರ್ದೇಶಕಿ ಸೌಂದರ್ಯ ಅಶ್ವಿನ್ ತಮ್ಮ ಹೊಸ ಪ್ರಯತ್ನವನ್ನು ಜೀವಂತ ಇರಿಸಿಕೊಂಡಿದ್ದಾರೆ.

"A still from Kochadaiyaan :)," ಎಂದು ಟ್ವೀಟ್ ಮಾಡಿದ್ದ ಸೌಂದರ್ಯ ಇಷ್ಟರಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಳಿದ್ದರು. ಅದರಂತೆ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಗಣೇಶ ಹಬ್ಬದ ದಿನ(ಸೆ.9) ದಂದು ಚಿತ್ರ ಫಸ್ಟ್ ಲುಕ್, ಮತ್ತೊಂದು ಟೀಸರ್ ಬಿಡುಗಡೆಯಾಗಲಿದೆ.

ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಕಳೆದ ವಾರ ಸುದ್ದಿಗೋಷ್ಠಿ ನಡೆಸಿ ಈ ವಾರ ಹೊಸ ಹೊಸ ಪೋಸ್ಟರ್ ಗಳನ್ನು ಹೊರ ಬಿಡುತ್ತೇವೆ ಎಂದಿದ್ದರು. ಅದರಂತೆ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟರ್ ಗಳು ದಾಳಿ ಇಟ್ಟಿವೆ. ಅದ್ಭುತ ಅನಿಮೇಷನ್ ತಂತ್ರಜ್ಞಾನವುಳ್ಳ ಕೊಚಾಡಿಯನ್ ಚಿತ್ರದ ಹೊಸ ಪೋಸ್ಟರ್ ಹೇಗಿದೆ? ಚಿತ್ರದ ಬಗ್ಗೆ ಯಾಕಿಷ್ಟು ನಿರೀಕ್ಷೆ? ಮುಂದಿನ ಚಿತ್ರ ಸರಣಿಯಲ್ಲಿ ನೋಡಿ...

ಟ್ವಿಟ್ಟರ್ ನಿಂದ

ಟ್ವಿಟ್ಟರ್ ನಿಂದ

ಟ್ವಿಟ್ಟರ್ ನಿಂದ ಹೊರಬಿದ್ದ ರಜನಿಕಾಂತ್ ಅಭಿನಯದ ಕೊಚಾಡಿಯನ್ ಪೋಸ್ಟರ್. ಇದೊಂದು ಐತಿಹಾಸಿಕ ಚಿತ್ರವಾಗಿದೆ. ಪಾಂಡ್ಯ ಅರಸು ಕೊಚಾಡಿಯನ್ ರಣಧೀರನ್ ಸಾಹಸದ ಕಥೆ. ಚಿತ್ರದಲ್ಲಿ ರಜನಿ ಜೊತೆಗೆ ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶರತ್ ಕುಮಾರ್, ಶೋಭನಾ, ಆದಿ ಹಾಗೂ ಇನ್ನಿತರ ಕಲಾವಿದರಿದ್ದಾರೆ.

ಮೋಷನ್ ಕಾಪ್ಚರ್ ತಂತ್ರಜ್ಞಾನ

ಮೋಷನ್ ಕಾಪ್ಚರ್ ತಂತ್ರಜ್ಞಾನ

ಟಿನ್ ಟಿನ್ ಹಾಗೂ ಅವತಾರ್ ಮಾದರಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಹಾಲಿವುಡ್ ನ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಮೋಷನ್ ಕಾಪ್ಚರ್ ತಂತ್ರಜ್ಞಾನ ಇಲ್ಲಿ ಬಳಸಲಾಗಿದೆ. ಕನ್ನಡಿಗ ಯುವಕ ಶ್ರವಣ್ ಇದೇ ತಂತ್ರಜ್ಞಾನ ಬಳಸಿ ಆಸ್ಕರ್ ಸಮಾನವಾದ ಪ್ರಶಸ್ತಿ ಗೆದ್ದಿದ್ದನ್ನು ಇಲ್ಲಿ ಓದಿ

ಸೌಂದರ್ಯ ಟ್ವೀಟ್ಸ್

ಚಿತ್ರದ ಬಗ್ಗೆ ರಜನಿ ಮಗಳು ಸೌಂದರ್ಯ ಅಶ್ವಿನ್ ಇತ್ತೀಚಿನ ಮಾಹಿತಿ ನೀಡಿದ್ದಾರೆ

ಸೌಂದರ್ಯ ಟ್ವೀಟ್ಸ್

ಚಿತ್ರದ ಬಗ್ಗೆ ರಜನಿ ಮಗಳು ಸೌಂದರ್ಯ ಅಶ್ವಿನ್ ಇತ್ತೀಚಿನ ಮಾಹಿತಿ ನೀಡಿದ್ದಾರೆ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಟೀಸರ್ ನಲ್ಲಿ ಹಾಡಿದ್ದಾರೆ.

ಬಿಡುಗಡೆ ಯಾವಾಗ ?

ಬಿಡುಗಡೆ ಯಾವಾಗ ?

ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಜನಿಕಾಂತ್ ಕೂಡಾ ತಮ್ಮ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ. ಬಿಡುಗಡೆ ಯಾವಾಗ ಎಂಬುದು ಮಾತ್ರ ಇನ್ನೂ ನಿಗದಿಯಾಗಿಲ್ಲ. ಮುಂದಿನ ದೀಪಾವಳಿ ವೇಳೆಗೆ ಖಚಿತ ಮಾಹಿತಿ ಸಿಗಬಹುದು.

ಪೂಕುಟ್ಟಿ ಜೊತೆ ರಜನಿಕಾಂತ್

ಪೂಕುಟ್ಟಿ ಜೊತೆ ರಜನಿಕಾಂತ್

ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಜೊತೆ ರಜನಿಕಾಂತ್.

ಕೊಚಾಡಿಯನ್ ಚಿತ್ರಕ್ಕೆ ಎರೋಸ್ ಇಂಟರ್ ನ್ಯಾಷನಲ್ ಹಾಗೂ ಮೀಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ಜಂಟಿಯಾಗಿ ನಿರ್ಮಾಪಕರಾಗಿದ್ದಾರೆ. ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಸಂಗೀತ, ರಾಜೀವ್ ಮೆನನ್ ಛಾಯಾಗ್ರಹಣ ಇದೆ. ತಮಿಳು, ತೆಲುಗು(ವಿಕ್ರಮ ಸಿಂಹ), ಹಿಂದಿ, ಮಲೆಯಾಳಂ, ಜಪಾನಿ, ಇಟಾಲಿಯನ್, ಸ್ಪಾನೀಷ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಚಿತ್ರತಂಡ ಜೊತೆ ರಜನಿಕಾಂತ್

ಚಿತ್ರತಂಡ ಜೊತೆ ರಜನಿಕಾಂತ್

ಕೊಚಾಡಿಯನ್ ಚಿತ್ರತಂಡ ಜೊತೆ ರಜನಿಕಾಂತ್.

ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಮೇ 15 ರಿಂದ 26 ರೊಳಗೆ ಈ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಅನ್ನು ಲೋಕಾರ್ಪಣೆ ಮಾಡಲಾಗಿತ್ತು. ಈಗ ಹೊಸ ಟೀಸರ್, ಟ್ರೇಲರ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

English summary
The first teaser of superstar Rajinikanth starrer Tamil period drama Kochadaiyaan will be released on the festive occasion of Ganesh Chaturthi Sep 9, announced the director of the film Soundarya Ashwin.
Please Wait while comments are loading...

Kannada Photos

Go to : More Photos