»   » ರಜನಿಯನ್ನು ಭೇಟಿಯಾಗಿ ನಲಿದಾಡಿದ ದೃಷ್ಟಿಹೀನರು

ರಜನಿಯನ್ನು ಭೇಟಿಯಾಗಿ ನಲಿದಾಡಿದ ದೃಷ್ಟಿಹೀನರು

Posted by:
Subscribe to Filmibeat Kannada

ಗುರುವಾರವಿಡೀ ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಮಳೆಯೋ ಮಳೆ. ಆದರೆ, ಈ ಮಕ್ಕಳಿಗೆ ಮಳೆ ಲೆಕ್ಕಕ್ಕೇ ಇರಲಿಲ್ಲ. ದಾರಿ ಕಾಣದಿದ್ದರೇನಂತೆ ಅವರಿಗಿದ್ದಿದ್ದು ಒಂದೇ ಗುರಿ. ಅದು ತಮ್ಮ ನೆಚ್ಚಿನ ನಟನನ್ನು ನೋಡಬೇಕೆಂಬುದು. ಕಡೆಗೂ ಆ ಕನಸು ನನಸಾಗೇಬಿಟ್ಟಿತು. ಆ ಮಕ್ಕಳು ಮತ್ತು ನಟ ಸಂಗಮವಾದಾಗ ವರ್ಷಧಾರೆಯ ನಡುವೆ ಹರ್ಷದ ಹೊಳೆ ಹರಿದಿತ್ತು, ಕಣ್ಣಂಚಿನಲ್ಲಿ ನೀರು ಕೂಡ ಜಿನುಗಿತ್ತು!

ಮೇಲಿನ ಪ್ಯಾರಾದಲ್ಲಿ ದಾರಿ ಕಾಣದಿದ್ದರೇನಂತೆ ಅಂತ ಯಾಕೆ ಬರೆಯಲಾಗಿದೆ ಎಂದರೆ ಅವರಲ್ಲೆಲ್ಲ ತೆರೆದಿರುವುದು ಆಂತರ್ಯದ ಕಣ್ಣು ಮಾತ್ರ. ಭೌತಿಕವಾಗಿ ಮಾತ್ರ ಅವರೆಲ್ಲ ದಷ್ಟಿಹೀನರು. ಅವರು ಭೇಟಿಯಾಗಿದ್ದು ಮತ್ತಾರೂ ಅಲ್ಲ, ಕನ್ನಡನಾಡಿನಲ್ಲಿ ಉದಯಿಸಿ, ತಮಿಳುನಾಡಿನಲ್ಲಿ ಬೆಳಗುತ್ತಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ 'ಸ್ಟೈಲ್ ಕಿಂಗ್' ರಜನಿಕಾಂತ್.

ಮಂಡ್ಯ ಸುತ್ತಮುತ್ತ ರಜನಿ ಅವರ 'ಲಿಂಗ' ಶೂಟಿಂಗ್ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆ ರಜನಿಕಾಂತ್ ಅವರನ್ನು ಭೇಟಿ ಮಾಡಬೇಕೆಂಬ ಹುಮ್ಮಸ್ಸಿನೊಂದಿಗೆ ಐಡಿಎಲ್ ಬ್ಲೈಂಡ್ ಬ್ಯಾಂಡ್ ಸಂಸ್ಥೆಯ ಮಕ್ಕಳೆಲ್ಲ ಒಬ್ಬರಿಗೊಬ್ಬರು ಕೈಹಿಡಿದುಕೊಂಡು ಸಂಸ್ಥೆಯ ನಿರ್ದೇಶಕ ಪಿ.ಕೆ. ಪೌಲ್ ಅವರೊಂದಿಗೆ ಮಂಡ್ಯ ತಲುಪಿದ್ದಾರೆ. ನಂತರ ತಿಳಿದುಬಂದಿದ್ದೇನೆಂದರೆ ಶೂಟಿಂಗ್ ನಡೆಯುತ್ತಿದ್ದುದು ಮೇಲುಕೋಟೆಯಲ್ಲಿ. ಮುಂದೇನಾಯಿತೆಂದು ಮುಂದೆ ಓದಿರಿ. [ಮಂಡ್ಯ ಸುತ್ತಮುತ್ತ ಲಿಂಗ ಶೂಟಿಂಗ್]

ಅಂಥ ಮಕ್ಕಳ ಬಳಿ ಇಳಿದುಬಂದ ರಜನಿ
  

ಅಂಥ ಮಕ್ಕಳ ಬಳಿ ಇಳಿದುಬಂದ ರಜನಿ

ಮೇಲುಕೋಟೆಯಲ್ಲಿ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರನ್ನು ಭೇಟಿಯಾಗಿ ಅವರ ಸಹಾಯದಿಂದ ರಜನಿ ಅವರನ್ನು ಮಕ್ಕಳು ಭೇಟಿ ಮಾಡಿದ್ದಾರೆ. ಸಂಚಾರಿ ವಾಹನದಲ್ಲಿ ಕುಳಿತಿದ್ದ ರಜನಿ ಇಂಥ ಸುದ್ದಿ ತಿಳಿಯುತ್ತಿದ್ದಂತೆ, ಮಳೆ ಸುರಿಯುತ್ತಿದ್ದರೂ ಛತ್ರಿ ಹಿಡಿದುಕೊಂಡು ಮಕ್ಕಳಿದ್ದಲ್ಲಿಗೆ ಇಳಿದು ಬಂದಿದ್ದಾರೆ.

ರಜನಿಗೆ ಡಾ. ರಾಜ್ ಚಿತ್ರಪಟದ ಉಡುಗೊರೆ
  

ರಜನಿಗೆ ಡಾ. ರಾಜ್ ಚಿತ್ರಪಟದ ಉಡುಗೊರೆ

ರಜನಿಯನ್ನು ಕಂಡು, ಮುಟ್ಟಿ ನಲಿದಾಡಿದ ಮಕ್ಕಳು ತಾವು ತಂದಿದ್ದ, ಡಾ. ರಾಜ್ ಕುಮಾರ್ ಅವರ ಚಿತ್ರ ಎಂಬೋಜ್ ಮಾಡಿದ್ದ ಚಿತ್ರಪಟವನ್ನು ಲುಂಗಿ ಸುತ್ತಿಕೊಂಡಿದ್ದ ರಜನಿ ಅವರಿಗೆ ನೀಡಿದರು. ತಮ್ಮನ್ನು ಭೇಟಿಯಾಗಲು ಬೆಂಗಳೂರಿನಿಂದ ಬಂದ ಅಂಧ ಮಕ್ಕಳಿಗೆ ರಜನಿ ಧನ್ಯವಾದ ತಿಳಿಸಿದರು.

ಜೀವನದ ಅತ್ಯಂತ ಸಂತಸದ ಕ್ಷಣ
  

ಜೀವನದ ಅತ್ಯಂತ ಸಂತಸದ ಕ್ಷಣ

ಐಡಿಎಲ್ ಬ್ಲೈಂಡ್ ಬ್ಯಾಂಡ್ ನಲ್ಲಿ ಏಕೈಕ ಗಿಟಾರಿಸ್ಟ್ ಆಗಿರುವ ಅಂಧ ವಿದ್ಯಾರ್ಥಿ ಮನೋಹರ್, ರಜನಿಯನ್ನು ಭೇಟಿಯಾದ ಘಳಿಗೆ ತನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದ್ದಾನೆ. ಸಂಗೀತಗಾರ್ತಿಯಾಗಿರುವ ನಗೀನಾ ರಜನಿಯನ್ನು ಭೇಟಿಯಾಗುವ ಕನಸು ನನಸಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ನೆನಪು ಬಹುಕಾಲ ಮನದಲ್ಲಿ ಉಳಿಯುತ್ತದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈಸೂರು ಮಂಡ್ಯ ಸುತ್ತಮುತ್ತ ಲಿಂಗ ಶೂಟಿಂಗ್
  

ಮೈಸೂರು ಮಂಡ್ಯ ಸುತ್ತಮುತ್ತ ಲಿಂಗ ಶೂಟಿಂಗ್

ತಮಿಳು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ 'ಲಿಂಗ' ಚಿತ್ರದ ಆರಂಭ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಆರಂಭವಾಯಿತು. ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರಾಗಿದ್ದರೆ, ಹಾರ ಹಾಕಿಸಿಕೊಳ್ಳುತ್ತಿರುವ ರವಿಕುಮಾರ್ ನಿರ್ದೇಶಕ.

ಲಿಂಗ ನಾಯಕಿಯರಾಗಿ ಸೋನಾಕ್ಷಿ, ಅನುಷ್ಕಾ
  

ಲಿಂಗ ನಾಯಕಿಯರಾಗಿ ಸೋನಾಕ್ಷಿ, ಅನುಷ್ಕಾ

ಲಿಂಗ ಚಿತ್ರದ ನಾಯಕಿಯರಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಅನುಷ್ಕಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕನ್ನಡ ನಟ ಕಿಚ್ಚ ಸುದೀಪ್ ಮತ್ತು ತೆಲುಗು ನಟ ಜಗಪತಿ ಬಾಬು ಕೂಡ ನಟಿಸುವ ಸಾಧ್ಯತೆಯಿದೆ.

English summary
South Indian super star Rajnikath met blind & visually challenged students of IDL Blink Band and hostel students in Melukote, where Rajini is shooting for his latest movie Lingaa. Students presented Rajini a photo with Rajkumar image.
Please Wait while comments are loading...

Kannada Photos

Go to : More Photos