»   » ರಕ್ಷಿತ್ ಶೆಟ್ಟಿ ಮಾಡಿದ ಈ ಒಳ್ಳೆ ಕೆಲಸಕ್ಕೆ ಚಪ್ಪಾಳೆ ಹೊಡೆಯಲೇಬೇಕು!

ರಕ್ಷಿತ್ ಶೆಟ್ಟಿ ಮಾಡಿದ ಈ ಒಳ್ಳೆ ಕೆಲಸಕ್ಕೆ ಚಪ್ಪಾಳೆ ಹೊಡೆಯಲೇಬೇಕು!

Posted by:
Subscribe to Filmibeat Kannada

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಈ ವೀಕೆಂಡ್ ಗೆ ಭರ್ಜರಿ 100 ದಿನಗಳನ್ನು ಪೂರೈಸಲಿದೆ. ಗೆಲುವಿನ ನಾಗಲೋಟದಲ್ಲಿರುವ ಈ ಚಿತ್ರ 25 ದಿನಗಳಲ್ಲಿ 25 ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ರಕ್ಷಿತ್ ಶೆಟ್ಟಿ ನಟಿಸಿ ಮೊದಲ ಬಾರಿಗೆ ನಿರ್ಮಿಸಿದ್ದ 'ಕಿರಿಕ್ ಪಾರ್ಟಿ' ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಪುಷ್ಕರ್ ಫೀಲ್ಮ್ಸ್ ಸಹಯೋಗದಲ್ಲಿ ಪರಂವಾಹ್ ಸ್ಟುಡಿಯೋ ಅಡಿಯಲ್ಲಿ ನಿರ್ಮಾಣವಾಗಿದ್ದ ಈ ಚಿತ್ರದ ರಿಮೇಕ್ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. [ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!]


ಅಂದಹಾಗೆ ಲೇಟೆಸ್ಟ್ ಸುದ್ದಿ ಏನಂದ್ರೆ, ಚಿತ್ರಕ್ಕೆ ಬಂದ ಲಾಭವನ್ನೆಲ್ಲ ನಿರ್ಮಾಪಕರೇ ಇಟ್ಟುಕೊಳ್ಳುವ ಈ ಕಾಲದಲ್ಲಿ 'ರಕ್ಷಿತ್ ಶೆಟ್ಟಿ ತಾವು ನಟಿಸಿ ನಿರ್ಮಿಸಿದ್ದ 'ಕಿರಿಕ್ ಪಾರ್ಟಿ' ಚಿತ್ರದ ಲಾಭವನ್ನು ಚಿತ್ರತಂಡದೊಂದಿಗೆ ಹಂಚಿಕೊಂಡಿದ್ದಾರೆ'. ಚಿತ್ರದ ಯಶಸ್ಸಿನ ಸಂತೋಷವನ್ನು ಮಾತ್ರವಲ್ಲದೇ ಲಾಭವನ್ನು ಹಂಚಿಕೊಂಡ ರಕ್ಷಿತ್ ಶೆಟ್ಟಿ ಉದಾರ ಗುಣಕ್ಕೆ ಎಲ್ಲರೂ ಚಪ್ಪಾಳೆ ತಟ್ಟಲೇ ಬೇಕು. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.


'ಕಿರಿಕ್ ಪಾರ್ಟಿ'ಗೆ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ

'ಕಿರಿಕ್ ಪಾರ್ಟಿ'ಗೆ ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭ

50 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 'ಕಿರಿಕ್ ಪಾರ್ಟಿ' ಸಿನಿಮಾ ಬಜೆಟ್ ಕೇವಲ 4 ಕೋಟಿ ರೂ. ಬಂಡವಾಳಕ್ಕಿಂತ ಹತ್ತು ಪಟ್ಟು ಲಾಭವನ್ನು ಪಡೆದಿರುವ ನಿರ್ಮಾಪಕರಾದ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ಚಿತ್ರದ ಯಶಸ್ಸಿನ ಖುಷಿ ಜೊತೆಗೆ ಲಾಭವನ್ನು ಚಿತ್ರತಂಡದೊಂದಿಗೆ ಹಂಚಿಕೊಂಡಿದ್ದಾರೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]


ಶೇಕಡ 25 ಲಾಭದ ಹಣ ಚಿತ್ರತಂಡದವರಿಗೆ

ಶೇಕಡ 25 ಲಾಭದ ಹಣ ಚಿತ್ರತಂಡದವರಿಗೆ

'ಕಿರಿಕ್ ಪಾರ್ಟಿ' ಯಶಸ್ಸಿನ ಕ್ರೆಡಿಟ್ ಅನ್ನು ಚಿತ್ರತಂಡದಲ್ಲಿದ್ದ ಎಲ್ಲಿರಿಗೂ ನೀಡಿರುವ ರಕ್ಷಿತ್ ಶೆಟ್ಟಿ, ಚಿತ್ರದ ಲಾಭದಲ್ಲಿ ಶೇಕಡ 25 ರಷ್ಟು ಹಣವನ್ನು ಎಲ್ಲರಿಗೂ ನೀಡಿದ್ದಾರೆ.['ಟಾಲಿವುಡ್'ಗೆ ಸೇಲ್ ಆಗೋಯ್ತು 'ಕಿರಿಕ್ ಪಾರ್ಟಿ']


70 ಜನರಿಗೆ ಲಾಭ ಹಂಚಿಕೆ

70 ಜನರಿಗೆ ಲಾಭ ಹಂಚಿಕೆ

ಚಿತ್ರತಂಡದಲ್ಲಿ ದುಡಿದ 22 ಲೈಟ್ ಮೆನ್ ಗಳು, ಮೇಕಪ್ ಮ್ಯಾನ್ ಗಳು, 3 ಜನ ವಸ್ತ್ರ ವಿನ್ಯಾಸಕಾರರು, 8 ಜನ ನಿರ್ಮಾಣ ಕಾರ್ಯನಿರ್ವಾಹಕರು ಸೇರಿದಂತೆ ಒಟ್ಟಾರೆ 70 ಜನರಿಗೆ, ಪ್ರತಿಯೊಬ್ಬರಿಗೂ 50,000 ರೂ ನೀಡಿದ್ದಾರೆ.


ಹೊಸ ಕಲಾವಿದರಿಗೆ ಲಕ್ಷಗಳಲ್ಲಿ..

ಹೊಸ ಕಲಾವಿದರಿಗೆ ಲಕ್ಷಗಳಲ್ಲಿ..

ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಹೊಸ ಕಲಾವಿದರಿಗೂ ಲಕ್ಷಗಳಲ್ಲಿ ಲಾಭದ ಹಣವನ್ನು ನೀಡಲಾಗಿದೆ.


'ಕಿರಿಕ್ ಪಾರ್ಟಿ' ಸೀಕ್ವೆಲ್ ಬರಬಹುದು?

'ಕಿರಿಕ್ ಪಾರ್ಟಿ' ಸೀಕ್ವೆಲ್ ಬರಬಹುದು?

ಲಾಭವನ್ನು ಹಂಚಿಕೊಂಡ ರಕ್ಷಿತ್ ಶೆಟ್ಟಿ, 'ಕಿರಿಕ್ ಪಾರ್ಟಿ' ಸಿನಿಮಾದ ಎರಡನೇ ಭಾಗ ಬರಬಹುದು. ಆದರೆ ಇದು ಕಾಲೇಜ್ ಸ್ಟೋರಿ ಅಲ್ಲದೇ ಸ್ನೇಹಿತರೊಂದಿಗಿನ ಜರ್ನಿ ಆಗಿರಬಹುದು ಎಂದು ಹೇಳಿದ್ದಾರೆ.


English summary
Kannada Actor Rakshit Shetty Shares 'Kirik Party' Film Profit with all movie team
Please Wait while comments are loading...

Kannada Photos

Go to : More Photos