»   » ರಕ್ಷಿತ್ ಶೆಟ್ಟಿಯ 'ಕಿರಿಕ್ ಪಾರ್ಟಿ'ಯೊಂದಿಗೆ 2016ಕ್ಕೆ ಗುಡ್ ಬೈ!

ರಕ್ಷಿತ್ ಶೆಟ್ಟಿಯ 'ಕಿರಿಕ್ ಪಾರ್ಟಿ'ಯೊಂದಿಗೆ 2016ಕ್ಕೆ ಗುಡ್ ಬೈ!

Posted by:
Subscribe to Filmibeat Kannada

ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸದ್ಯ ಹಾಡುಗಳಿಂದ ಸಖತ್ ಸೌಂಡ್ ಮಾಡ್ತಿದೆ. ಇಷ್ಟು ದಿನ ಹಾಡುಗಳ ಮೂಲಕವೇ ಕುತೂಹಲ ಕೆರಳಿಸಿದ್ದ 'ಕಿರಿಕ್' ಹುಡುಗರು ಈಗ ತೆರೆಮೇಲೆ ಬರೋದಕ್ಕೆ ರೆಡಿಯಾಗಿದ್ದಾರೆ.

ರಕ್ಷಿತ್ ಶೆಟ್ಟಿ, ರಶ್ಮಿಕಾ, ಸಂಯುಕ್ತ ಹೆಗಡೆ, ಅಚ್ಯುತ್ ಕುಮಾರ್, ಅರವಿಂದ್ ಅಯ್ಯರ್, ಅಶ್ವಿನ್ ರಾವ್ ಪಲಕಿ, ಶಂಕರ್ ಮೂರ್ತಿ, ಧನಂಜಯ್ ರಂಜನ್, ಚಂದನ್ ಮತ್ತು ಗಿರೀಶ್ ಕೃಷ್ಣ ಸೇರಿದಂತೆ ಹಲವರು ಕಾಣಿಸಿಕೊಂಡಿರುವ 'ಕಿರಿಕ್ ಪಾರ್ಟಿ' ಇದೇ ತಿಂಗಳಿಂದ ಚಿತ್ರಮಂದಿರಗಳಲ್ಲಿ ಹವಾ ಎಬ್ಬಿಸಲಿದೆ.['ಕಿರಿಕ್ ಪಾರ್ಟಿ' ಟ್ರೈಲರ್ ನೋಡಿ, ಕಾಲೇಜು ದಿನದತ್ತ ಜಾರಿ ಹೋಗಿ]

ಹೌದು, ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ', ಡಿಸೆಂಬರ್ ಕೊನೆಯ ವಾರದಲ್ಲಿ ಪ್ರೇಕ್ಷಕರೆದುರು ಬರುತ್ತಿದ್ದು, 2016ಕ್ಕೆ ಅದ್ದೂರಿ ತೆರೆ ಬೀಳಲಿದೆ.

'ಕಿರಿಕ್ ಪಾರ್ಟಿ'ಗೆ ಮುಹೂರ್ತ ಫಿಕ್ಸ್

'ಕಿರಿಕ್ ಪಾರ್ಟಿ'ಗೆ ಮುಹೂರ್ತ ಫಿಕ್ಸ್

ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರದ ಬಿಡುಗಡೆ ದಿನಾಂಕ ಬಹಿರಂಗವಾಗಿದ್ದು, ಡಿಸೆಂಬರ್ 30 ರಂದು ರಾಜ್ಯಾದ್ಯಂತ ಕಿರಿಕ್ ಹುಡುಗರ ಹಾವಳಿ ಶುರುವಾಗಲಿದೆ.[ಗಾಂಧಿನಗರದಲ್ಲಿ 'ಕಿರಿಕ್‌ ಪಾರ್ಟಿ' ಮಾಡಿದ ರಕ್ಷಿತ್ ಶೆಟ್ಟಿ ಸಂದರ್ಶನ]

'ಕಿರಿಕ್ ಪಾರ್ಟಿ' ಜೊತೆ ವರ್ಷಾಂತ್ಯದ ಸಂಭ್ರಮ !

'ಕಿರಿಕ್ ಪಾರ್ಟಿ' ಜೊತೆ ವರ್ಷಾಂತ್ಯದ ಸಂಭ್ರಮ !

'ಕಥೆ-ಚಿತ್ರಕಥೆ-ನಿರ್ದೇಶನ ಪುಟ್ಟಣ್ಣ' ಚಿತ್ರದ ಮೂಲಕ ವರ್ಷಾರಂಭ ಮಾಡಿದ್ದ ಸ್ಯಾಂಡಲ್ ವುಡ್, 'ಕಿರಿಕ್ ಪಾರ್ಟಿ' ಚಿತ್ರದ ಜೊತೆ ಅಂತ್ಯವಾಡಲಿದೆ.

ಹಾಡುಗಳಿಂದ ಹವಾ ಎಬ್ಬಿಸಿರುವ 'ಕಿರಿಕ್' ಹುಡುಗರು!

ಹಾಡುಗಳಿಂದ ಹವಾ ಎಬ್ಬಿಸಿರುವ 'ಕಿರಿಕ್' ಹುಡುಗರು!

ಸದ್ಯ, 'ಕಿರಿಕ್ ಪಾರ್ಟಿ' ಚಿತ್ರ ಹಾಡುಗಳಿಂದಲೆ ಹವಾ ಸೃಷ್ಠಿಸಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾದಲ್ಲಿ ಒಟ್ಟು 10 ಹಾಡುಗಳಿವೆ. ಸದ್ಯ 6 ಆರು ಹಾಡುಗಳನ್ನ ಮಾತ್ರ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲೀಡಿಂಗ್ ನಲ್ಲಿವೆ.[ರಕ್ಷಿತ್ ಶೆಟ್ಟಿಯ 'ತಿರಬೋಕಿ ಜೀವನ' ಸಖತ್ ವೈರಲ್ ]

ಕಾಲೇಜ್ ದಿನಗಳ ಚಿತ್ರಣ

ಕಾಲೇಜ್ ದಿನಗಳ ಚಿತ್ರಣ

'ಕಿರಿಕ್ ಪಾರ್ಟಿ' ಕಾಲೇಜು ದಿನಗಳ ಕಥೆಯನ್ನೊಳಗೊಂಡಿರುವ ಸಿನಿಮಾ. ರಕ್ಷಿತ್ ಶೆಟ್ಟಿ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಆದ ಕೆಲ ಘಟನೆಗಳನ್ನಿಟ್ಟು ಮನೋರಂಜನಾತ್ಮಕವಾಗಿ ಚಿತ್ರಕಥೆ ಮಾಡಲಾಗಿದೆಯಂತೆ. ಔಟ್ ಅಂಡ್ ಔಟ್ ಕಾಮಿಡಿ ಪ್ಯಾಕೇಜ್ ಮೂಲಕ ಕಾಲೇಜು ದಿನಗಳನ್ನ ನೆನಪಿಸಲಿದ್ದಾರಂತೆ 'ಕಿರಿಕ್ ಪಾರ್ಟಿ' ಹುಡುಗರು.

ಇಬ್ಬರು ನಾಯಕಿಯರು!

ಇಬ್ಬರು ನಾಯಕಿಯರು!

'ಕಿರಿಕ್ ಪಾರ್ಟಿ'ಯಲ್ಲಿ ಇಬ್ಬರು ನಾಯಕಿಯರಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ನಟಿ ಸಂಯುಕ್ತ ಹೆಗಡೆ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ. ಇನ್ನೂ ಈ ಇಬ್ಬರು ನಾಯಕಿಯರಿಗೂ ಇದು ಚೊಚ್ಚಲ ಸಿನಿಮಾ ಆಗಿದೆ.

ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ ಜೋಡಿ!

ರಿಷಬ್ ಶೆಟ್ಟಿ-ರಕ್ಷಿತ್ ಶೆಟ್ಟಿ ಜೋಡಿ!

'ಉಳಿದವರು ಕಂಡಂತೆ' ಚಿತ್ರದಿಂದ ಜೊತೆಯಾಗಿ ಕೆಲಸ ಮಾಡುತ್ತಿರುವ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಜೋಡಿ, ಕಿರಿಕ್ ಪಾರ್ಟಿಯಲ್ಲೂ ಮುಂದುವರೆದಿದೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆ ರಕ್ಷಿತ್ ಶೆಟ್ಟಿ ಬರೆದಿದ್ದರೇ, ನಿರ್ದೇಶನದ ಜವಾಬ್ದಾರಿ ರಿಷಬ್ ಶೆಟ್ಟಿ ಹೊತ್ತಿದ್ದಾರೆ.

ನಿರ್ಮಾಪಕರು ಕೂಡ ರಕ್ಷಿತ್ ಶೆಟ್ಟಿ!

ನಿರ್ಮಾಪಕರು ಕೂಡ ರಕ್ಷಿತ್ ಶೆಟ್ಟಿ!

ರಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ನಟನೆ ಜೊತೆಗೆ ಸ್ಕ್ರಿಪ್ಟ್ ಮಾತ್ರ ಮಾಡಿಲ್ಲ. ಈ ಚಿತ್ರವನ್ನ ನಿರ್ಮಾಣ ಕೂಡ ಮಾಡಿದ್ದಾರೆ.

2016ಕ್ಕೆ ಅದ್ದೂರಿ ತೆರೆ!

2016ಕ್ಕೆ ಅದ್ದೂರಿ ತೆರೆ!

ಈ ವರ್ಷ ಕನ್ನಡದಲ್ಲಿ ಸುಮಾರು 160 ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಇದರಲ್ಲಿ ಸ್ವಮೇಕ್, ರಿಮೇಕ್, ಸ್ಟಾರ್ ಗಳು ಸಿನಿಮಾ, ಹೊಸಬರ ಸಿನಿಮಾ ಹೀಗೆ ಯಶಸ್ವಿ ಚಿತ್ರಗಳು ತುಂಬಿವೆ. ಈ ವರ್ಷದ ಅದ್ದೂರಿ ಸ್ಯಾಂಡಲ್ ವುಡ್ ಗೆ 'ಕಿರಿಕ್ ಪಾರ್ಟಿ' ತೆರೆ ಎಳೆಯುತ್ತಿದೆ.

English summary
Kannada Actor Rakshit Shetty starrer 'Kirik Party' has Releasing on December 30th. Actress Rashmika Mandanna and Samyuktha Hegde in the female lead role. The movie is directed by Rishab Shetty
Please Wait while comments are loading...

Kannada Photos

Go to : More Photos