»   » ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್: ನಾಯಕಿ ಶಾನ್ವಿ

ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಫಸ್ಟ್ ಲುಕ್ ರಿಲೀಸ್: ನಾಯಕಿ ಶಾನ್ವಿ

Posted by:
Subscribe to Filmibeat Kannada

'ಕಿರಿಕ್ ಪಾರ್ಟಿ' ಯಶಸ್ಸಿನ ನಂತರ ರಕ್ಷಿತ್ ಶೆಟ್ಟಿ ತಮ್ಮ ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಈಗಾಗಲೇ ಗೊತ್ತಿರುವಂತೆ ರಕ್ಷಿತ್ ಶೆಟ್ಟಿಯ ಮುಂದಿನ ಚಿತ್ರವನ್ನ ಯುವ ನಿರ್ದೇಶಕ ಸಚಿನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ'ಯ ಹೊಸ ದಾಖಲೆ ಇದು..!]

ಇದೀಗ, ಈ ಚಿತ್ರದ ಟೈಟಲ್ ಫಿಕ್ಸ್ ಆಗಿದ್ದು, ಜೊತೆಗೆ ನಾಯಕಿ ಕೂಡ ಅಂತಿಮವಾಗಿದ್ದಾರೆ. ಸದಾ ವಿಭಿನ್ನವಾಗಿ ಸಿನಿಮಾ ಮಾಡುವ ರಕ್ಷಿತ್ ಶೆಟ್ಟಿ, ತಮ್ಮ ಮುಂದಿನ ಚಿತ್ರವನ್ನ ಅದೇ ತರಹ ಮಾಡುವ ಸೂಚನೆ ಕೊಟ್ಟಿದ್ದಾರೆ. ಹಾಗಾದ್ರೆ, ಈ ಚಿತ್ರದ ಟೈಟಲ್ ಏನು? ನಾಯಕಿ ಯಾರು? ಯಾವಾಗ ಸಿನಿಮಾ ಶುರು ಎಂಬ ಮಾಹಿತಿ ಇಲ್ಲಿದೆ ನೋಡಿ.

ರಕ್ಷಿತ್ ಶೆಟ್ಟಿ ಹೊಸ ಚಿತ್ರದ 'ಟೈಟಲ್ ಫಿಕ್ಸ್'

ರಕ್ಷಿತ್ ಶೆಟ್ಟಿ ಹೊಸ ಚಿತ್ರದ 'ಟೈಟಲ್ ಫಿಕ್ಸ್'

'ರಕ್ಷಿತ್ ಶೆಟ್ಟಿ' ಮತ್ತು ಯುವ ನಿರ್ದೇಶಕ ಸಚಿನ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಹೊಸ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದ ಟೈಟಲ್ ಕೂಡ ತುಂಬಾ ಸ್ಪೆಷಲ್ ಆಗಿದೆ. ಮುಂದೆ ಓದಿ...['ಕಿರಿಕ್ ಪಾರ್ಟಿ' ಗಳಿಕೆಯಲ್ಲಿ ದಾಖಲೆ: ಕಲೆಕ್ಷನ್ ಗುಟ್ಟು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

'ಅವನೇ ಶ್ರೀಮನ್ನಾರಾಯಣ'

'ಅವನೇ ಶ್ರೀಮನ್ನಾರಾಯಣ'

ಕಿರಿಕ್ ಹುಡುಗನ ಹೊಸ ಚಿತ್ರದ ಹೆಸರು 'ಅವನೇ ಶ್ರೀಮನ್ನಾರಾಯಣ'. ಈಗಾಗಲೇ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ.[ರಕ್ಷಿತ್ ಶೆಟ್ಟಿಗೆ ಆಕ್ಷನ್ ಕಟ್ ಹೇಳಿದ್ರೆ 'ಕಂಕಣ ಭಾಗ್ಯ' ಗ್ಯಾರೆಂಟಿ!]

'ಶಾನ್ವಿ ಶ್ರೀವಾಸ್ತವ್' ನಾಯಕಿ

'ಶಾನ್ವಿ ಶ್ರೀವಾಸ್ತವ್' ನಾಯಕಿ

'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ್ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಬೆಳ್ಳಿತೆರೆಯಲ್ಲಿ ಜೊತೆಯಾಗುತ್ತಿದ್ದಾರೆ.

ಇವರೇ ಈ ಚಿತ್ರದ ನಿರ್ದೇಶಕ ಸಚಿನ್

ಇವರೇ ಈ ಚಿತ್ರದ ನಿರ್ದೇಶಕ ಸಚಿನ್

ತಮ್ಮ ತಂಡದಲ್ಲಿ ಕೆಲಸ ಮಾಡುತ್ತಿದ್ದ ಸಚಿನ್ ಅವರ ಪ್ರತಿಭೆಯನ್ನ ಗುರುತಿಸಿ, ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಅವಕಾಶವನ್ನ ನೀಡಿದ್ದಾರೆ. ಹೀಗಾಗಿ, ಸಚಿನ್ ಈ ಚಿತ್ರವನ್ನ ಉತ್ತಮವಾಗಿ ನೀಡುವ ನಿರೀಕ್ಷೆಯಲ್ಲಿದ್ದಾರೆ.['ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕಥೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ]

ಮೂರು ಜನ ನಿರ್ಮಾಪಕರು

ಮೂರು ಜನ ನಿರ್ಮಾಪಕರು

ಅಂದ್ಹಾಗೆ, ಈ ಚಿತ್ರಕ್ಕೆ ಮೂರು ಜನ ನಿರ್ಮಾಪಕರು. 'ರಂಗಿತರಂಗ' ಖ್ಯಾತಿಯ ಎಚ್.ಕೆ. ಪ್ರಕಾಶ್, 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ಪುಷ್ಕರ್ ಮಲ್ಲಿಕಾರ್ಜುನ್ ಮತ್ತು 'ಕಿರಿಕ್ ಪಾರ್ಟಿ' ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

English summary
Kannada Actor Rakshit Shetty Starrer New Movie Titled As A 'Avane Srimannarayana'. The Movie Directed By Sachin, And Produced by Pushkar Mallikarjuna, HK Prakash, Rakshit shetty.
Please Wait while comments are loading...

Kannada Photos

Go to : More Photos