»   » ತಮಿಳಿನಲ್ಲೂ ಹಾರಲಿದೆ ರಮೇಶ್-ಯುವಿನಾರ 'ಪುಷ್ಪಕ ವಿಮಾನ'

ತಮಿಳಿನಲ್ಲೂ ಹಾರಲಿದೆ ರಮೇಶ್-ಯುವಿನಾರ 'ಪುಷ್ಪಕ ವಿಮಾನ'

Posted by:
Subscribe to Filmibeat Kannada

ಚಂದನವನದ ನಿರ್ದೇಶಕ ಕಮ್ ನಟ ರಮೇಶ್ ಅರವಿಂದ್ ಮತ್ತು ಬೇಬಿ ಯುವಿನಾ ಪರ್ಥವಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಪುಷ್ಪಕ ವಿಮಾನ' ಸಿನಿಮಾ ಟೀಸರ್ ಮೂಲಕ ಗಾಂಧಿನಗರದಲ್ಲಿ ಎಲ್ಲರ ಗಮನ ಸೆಳೆದಿದ್ದು, ಇದೀಗ ಹೊರರಾಜ್ಯಗಳಲ್ಲೂ ಸದ್ದು ಮಾಡುತ್ತಿದೆ.

ಹೌದು ನವ ನಿರ್ದೇಶಕ ರವೀಂದ್ರನಾಥ್ ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ' ಸಿನಿಮಾ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ತಮಿಳು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆ ಮಾಡುವ ಬಗ್ಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಘೋಷಣೆ ಮಾಡಲಾಗುತ್ತದೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]ಅಂದಹಾಗೆ ತಮಿಳಿನಲ್ಲಿ ಚಿತ್ರದ ಶೀರ್ಷಿಕೆ ಇನ್ನೂ ನಿರ್ಧಾರವಾಗಿಲ್ಲ, ಆದರೆ ಸದ್ಯಕ್ಕೆ 'ಪುಷ್ಪಕ ವಿಮಾನಂ' ಎಂದು ಹೇಳಲಾಗಿದೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್ ಅವರು ತಿಳಿಸಿದ್ದಾರೆ.


ಇನ್ನು ತಮಿಳು ಚಿತ್ರರಂಗಕ್ಕೆ ನಟ ರಮೇಶ್ ಅರವಿಂದ್ ಅವರು ಚಿರಪರಿಚಿತರಾಗಿದ್ದು, ಬೇಬಿ ಯುವಿನಾ ಕೂಡ ಪರಿಚಿತ ಕಲಾವಿದೆ. ಈಗಾಗಲೇ ಬೇಬಿ ಯುವಿನಾ ಅವರು 'ವೀರಂ', ನಟ ಸೂರ್ಯ ಅವರ ಜೊತೆ 'ಮಾಸ್' ಮತ್ತು ಅಜಿತ್ ಅವರ ಜೊತೆ 'ವೇದಲಂ' ಸಿನಿಮಾದಲ್ಲಿ ಮಿಂಚಿದ್ದು, ಮುಂದಿನ ಬೇಬಿ ಶ್ಯಾಮಿಲಿ ಆಗೋದು ಪಕ್ಕಾ.[ಫೆಬ್ರವರಿಯಲ್ಲಿ 'ಭಲೇ ಭಲೇ' ಅಂತಾರೆ ರಮೇಶ್-ಗಣೇಶ್ ]ಬರೀ ಸಿನಿಮಾ ಮಾತ್ರವಲ್ಲದೇ, ವಾರದಲ್ಲಿ ಸುಮಾರು ಮೂರು ಜಾಹೀರಾತುಗಳಲ್ಲಿ ಬೇಬಿ ಯುವಿನಾ ಅವರು ಮಿಂಚುತ್ತಿದ್ದಾರೆ. ಜೊತೆಗೆ ಯುವಿನಾ ಅವರು 'ಪುಷ್ಪಕ ವಿಮಾನ' ಸಿನಿಮಾದ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಈಗಾಗಲೇ ನಟ ರಮೇಶ್ ಅರವಿಂದ್ ಸೇರಿದಂತೆ ಚಿತ್ರರಂಗದ ಹಿರಿಯ ನಟರ ಮೆಚ್ಚುಗೆ ಗಳಿಸಿದ್ದಾರೆ.

English summary
Ramesh Aravind and Yuvina Parthavi-starrer Pushpaka Vimana has been drawing much attention since the launch of its teaser. With its popularity spreading to other states, the makers have now decided to make it a bilingual in Kannada and Tamil. The movie is directed by S Ravindranath.
Please Wait while comments are loading...

Kannada Photos

Go to : More Photos