»   » 'ನಾಗರಹಾವು' ನಲ್ಲಿ ದಿಗಿ ಮತ್ತು ಲಕ್ಕಿ ಸ್ಟಾರ್ ರಮ್ಯಾ ಮೋಡಿ

'ನಾಗರಹಾವು' ನಲ್ಲಿ ದಿಗಿ ಮತ್ತು ಲಕ್ಕಿ ಸ್ಟಾರ್ ರಮ್ಯಾ ಮೋಡಿ

Posted by:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ದೂದ್ ಪೇಡಾ ದಿಗಂತ್ ಅವರ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಚಿತ್ರದಲ್ಲಿ ಇವರಿಬ್ಬರು ಒಂದಾಗಿದ್ದಾರೆ.

ಸುಮಾರು 3-4 ವರ್ಷಗಳ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. ಆದರೆ ಗ್ರಾಫಿಕ್ಸ್ ಕೆಲಸ ಮತ್ತು ನಿರ್ದೇಶಕರ ಅನಾರೋಗ್ಯದ ಸಮಸ್ಯೆಯಿಂದ ಈ ಸಿನಿಮಾ ಅಲ್ಲಿಗೆ ನಿಂತುಹೋಗಿತ್ತು. ಅಂತೂ ಕೊನೆಗೆ ಇದೀಗ ಈ ಸಿನಿಮಾ ಮತ್ತೆ ಸುದ್ದಿಯಲ್ಲಿದೆ.

ಇದೀಗ ಸದ್ಯಕ್ಕೆ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ಚೇತರಿಸಿಕೊಂಡಿದ್ದು, ಚಿತ್ರದ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸುವುದೊಂದೇ ಬಾಕಿ ಇದೆ. ಈ ಮೊದಲು ಈ ಚಿತ್ರಕ್ಕೆ 'ನಾಗಕನ್ಯೆ' ಎಂದು ಹೆಸರಿಡಲಾಗಿತ್ತು. ನಂತರ 'ನಾಗರಹಾವು' ಎಂದು ಬದಲಾಯಿಸಲಾಯಿತು.

ಅದ್ದೂರಿಯಾಗಿ ಕಾರ್ಯಕ್ರಮ ಒಂದನ್ನು ನಡೆಸಿ ಚಿತ್ರದ ಹೆಸರನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಕನ್ನಡ ಚಿತ್ರರಂಗ ಕ್ಷೇತ್ರದಲ್ಲಿ 'ನಾಗರಹಾವು' ಹೆಸರಿನಲ್ಲಿ ಬರುತ್ತಿರುವ 3ನೇ ಸಿನಿಮಾ ಇದಾಗಿದ್ದು, 1970 ರಲ್ಲಿ ಡಾ.ವಿಷ್ಣುವರ್ಧನ್ ಅಭಿನಯಿಸಿದ 'ನಾಗರಹಾವು' ಸಿನಿಮಾ ತೆರೆಕಂಡಿತ್ತು.

ತದನಂತರ 'ಬಾಜಿಗಾರ್' ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಿ 'ನಾಗರಹಾವು' ಎಂದು ಹೆಸರು ಕೊಡಲಾಗಿತ್ತು. ಇದೀಗ ಲಕ್ಕಿ ಸ್ಟಾರ್ ರಮ್ಯಾ ಮತ್ತು ದೂದ್ ಪೇಡಾ ದಿಗಂತ್ ಅಭಿನಯದ ಚಿತ್ರಕ್ಕೂ 'ನಾಗರಹಾವು' ಎಂದು ಹೆಸರಿಡಲಾಗಿದೆ.

English summary
Diganth-Ramya's new film which is directed by veteran Telugu director Kodi Ramakrishna has been titled as 'Nagarahavu'. The title will be officially announced within a few days from now. The Diganth-Ramya starrer film was launched almost four years back and the shooting of the film was held in Bangalore, Hyderabad and other places.
Please Wait while comments are loading...

Kannada Photos

Go to : More Photos