»   » ಕಟೌಟ್ ನಲ್ಲಿ ರಾರಾಜಿಸಿದ ರಮ್ಯಾ: ಕಟೌಟ್ ಗೂ ಉಕ್ಕು ಸೇತುವೆಗೂ ಏನ್ ಸಂಬಂಧ

ಕಟೌಟ್ ನಲ್ಲಿ ರಾರಾಜಿಸಿದ ರಮ್ಯಾ: ಕಟೌಟ್ ಗೂ ಉಕ್ಕು ಸೇತುವೆಗೂ ಏನ್ ಸಂಬಂಧ

ಚಿತ್ರ ಬಿಡುಗಡೆ ಆಗುವ ಸಂದರ್ಭಗಳಲ್ಲಿ ನಾಯಕನ ಕಟೌಟ್ ನಿಲ್ಲಿಸೋದು ಸಾಮಾನ್ಯ. ಆದ್ರೆ ಇದೇ ಮೊದಲ ಬಾರಿಗೆ 'ನಾಗರಹಾವು' ಚಿತ್ರದ ನಾಯಕಿ ರಮ್ಯಾ ಅವರ ಕಟೌಟ್ ಅನ್ನು ಚಿತ್ರಮಂದಿರದ ಎದುರು ನಿಲ್ಲಿಸಿರೋದು ವಿಶೇಷ.

Posted by:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಒಂದು ಬಿಗ್ ಬಜೆಟ್ ಅಥವಾ ಸ್ಟಾರ್ ನಟನ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ, ಆಯಾಯ ಚಿತ್ರಮಂದಿರಗಳ ಎದುರು ದೊಡ್ಡ-ದೊಡ್ಡ ಕಟೌಟ್ ಗಳು ರಾರಾಜಿಸೋದು ಸರ್ವೇ ಸಾಮಾನ್ಯ.

ಎತ್ತರವಾದ ಕಟೌಟ್ ಗಳಲ್ಲಿ ಬರೀ ಚಿತ್ರದ ನಾಯಕರು ಮಾತ್ರ ರಾರಾಜಿಸುತ್ತಾರೆಯೇ ಹೊರತು, ನಾಯಕಿಯರಲ್ಲ. ಆದ್ರೆ ಇದೇ ಮೊದಲ ಬಾರಿಗೆ ನಾಯಕಿಯ ಕಟೌಟ್ ಮ್ಯಾಜಿಕ್ 'ನಾಗರಹಾವು' ಚಿತ್ರದಲ್ಲಿ ಸಂಭವಿಸಿದೆ.['ನಾಗರಹಾವು' ವಿಮರ್ಶೆ: ಡಾ.ವಿಷ್ಣುವರ್ಧನ್ 201 ನಾಟೌಟ್]


'ಅರುಂಧತಿ' ಚಿತ್ರದ ಖ್ಯಾತಿಯ ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡಿದ್ದ 'ನಾಗರಹಾವು' ಚಿತ್ರದಲ್ಲಿ ನಟಿ ರಮ್ಯಾ ಅವರೇ ಆಕರ್ಷಕ ಕೇಂದ್ರ ಬಿಂದು. ಲಕ್ಕಿ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ರಮ್ಯಾ ಅವರು ಈ ಬಾರಿ ಕಟೌಟ್ ಆಗಿ ಚಿತ್ರಮಂದಿರದ ಎದುರು ನಿಂತಿದ್ದರು ಅನ್ನೋದು ವಿಶೇಷ. ಮುಂದೆ ಓದಿ...


ಮಂಡ್ಯ ಚಿತ್ರಮಂದಿರದ ಎದುರು ನಾಯಕಿ ಕಟೌಟ್

ಮಂಡ್ಯ ಚಿತ್ರಮಂದಿರದ ಎದುರು ನಾಯಕಿ ಕಟೌಟ್

ಹೌದು 'ನಾಗರಹಾವು' ಚಿತ್ರದ ಪ್ರಮುಖ ಕೇಂದ್ರ ಬಿಂದು, ನಾಯಕಿ ರಮ್ಯಾ ಅವರು, ಅತ್ಯಂತ ಎತ್ತರದ ಕಟೌಟ್ ಆಗಿ ಮಂಡ್ಯದ 'ಸಿದ್ಧಾರ್ಥ' ಚಿತ್ರಮಂದಿರದ ಎದುರು ರಾರಾಜಿಸಿದ್ದರು. ನಾಯಕಿಯ ಕಟೌಟ್ ನಿಲ್ಲಿಸೋ ಈ ವಿರಳವಾದ ದಿನಗಳಲ್ಲಿ ರಮ್ಯಾ ಅವರ ಕಟೌಟ್ ನಿಲ್ಲಿಸಿದ್ದು, ಎಲ್ಲರಿಗೂ ಸೋಜಿಗದ ಸಂಗತಿ.['ನಾಗರಹಾವು' ರಿಲೀಸ್: ಅಭಿಮಾನಿಗಳಿಂದ ಭರ್ಜರಿ ಸ್ವಾಗತ]


ತಲೆದೂಗಿದ ಪ್ರೇಕ್ಷಕರು

ತಲೆದೂಗಿದ ಪ್ರೇಕ್ಷಕರು

ಒಂದ್ಕಾಲದಲ್ಲಿ ಚಂದನವನದಲ್ಲಿ ರಾಣಿಯಾಗಿ ಮೆರೆದಿದ್ದ ನಟಿ ರಮ್ಯಾ ಅವರು 'ನಾಗರಹಾವು' ಚಿತ್ರದಲ್ಲಿ ಮಾಡಿದ ಮೋಡಿಗೆ, ಇಡೀ ಕನ್ನಡ ಸಿನಿ ಪ್ರಿಯರು ತಲೆ ದೂಗಿದ್ದರು. ಚಿತ್ರದಲ್ಲಿ ನಾಗಿಣಿಯಾಗಿ 'ಬುಸ್' ಎಂದಿದ್ದ ರಮ್ಯಾ ನಟನಾ ಚಾತುರ್ಯಕ್ಕೆ ಅವರ ಅಭಿಮಾನಿಗಳಂತೂ ಹುಚ್ಚೆದ್ದು, ಕೇಕೆ ಹಾಕಿ ಕುಣಿದಿದ್ದರು.


ದರ್ಶನ್-ವಿಷ್ಣು ಜೊತೆ ರಮ್ಯಾ

ದರ್ಶನ್-ವಿಷ್ಣು ಜೊತೆ ರಮ್ಯಾ

ಹೆಡ್ ರಿಪ್ಲೇಸ್ ಮೂಲಕ 'ಅಭಿನವ ಭಾರ್ಗವ' ಡಾ.ವಿಷ್ಣುವರ್ಧನ್ ಅವರು 'ನಾಗರಹಾವು' ಚಿತ್ರದಲ್ಲಿ ಜೀವಂತವಾದರೆ, ದರ್ಶನ್ ಅವರು ವಿಶೇಷ ಹಾಡಿನ ಮೂಲಕ ಡಾ.ವಿಷ್ಣು ಅವರಿಗೆ ಗೌರವ ಸಲ್ಲಿಸಿದ್ದರು. ವಿಷ್ಣು ಮತ್ತು ದರ್ಶನ್ ಅವರ ಬೃಹತ್ ಕಟೌಟ್ ಜೊತೆಗೆ ನಟಿ ರಮ್ಯಾ ಅವರ ಬೃಹತ್ ಕಟೌಟ್ ಕೂಡ ನಿಲ್ಲಿಸಿದ್ದು, ಎಲ್ಲಾ ಸಿನಿ ಪ್ರಿಯರಿಗೆ ಮತ್ತು ಅಭಿಮಾನಿಗಳಿಗೆ ಸರ್ ಪ್ರೈಸ್ ಆಗಿತ್ತು.


ಟ್ರೋಲ್ ಆದ ರಮ್ಯಾ

ಟ್ರೋಲ್ ಆದ ರಮ್ಯಾ

ಇನ್ನು ರಮ್ಯಾ ಅವರು ಕಟೌಟ್ ಮತ್ತು ಉಕ್ಕು ಸೇತುವೆ ನಡುವೆ ಟ್ವಿಟ್ಟರ್ ನಲ್ಲಿ ಟ್ರೋಲ್ ಆಗುತ್ತಿರೋದು ಇನ್ನೊಂದು ತಮಾಷೆ ಸಂಗತಿ. "ಸ್ಟೀಲ್ ಫ್ಲೈಓವರ್'ನ ಸಾಧಕ-ಬಾಧಕಗಳ ಬಗ್ಗೆ ಎತ್ತರದಿಂದ ಪರಾಮರ್ಶಿಸುತ್ತಿರುವ ರಮ್ಯಾ!" ಅಂತ ಟ್ವಿಟ್ಟರ್ ನಲ್ಲಿ ಕಟೌಟ್ ಚಿತ್ರ ಹಾಕಿ ಟ್ರೋಲ್ ಮಾಡಲಾಗುತ್ತಿದೆ.


ಎಲ್ಲರಿಗೂ ಧನ್ಯವಾದ: ರಮ್ಯಾ

ಎಲ್ಲರಿಗೂ ಧನ್ಯವಾದ: ರಮ್ಯಾ

"ಎಲ್ಲರಿಗೂ ನಮಸ್ಕಾರ ನನ್ನ ನಾಗರಹಾವು ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. ಬಹಳಷ್ಟು ಜನ ನನಗೆ ಫೋನ್ ಮಾಡಿ ಮತ್ತು ಟ್ವಿಟ್ಟರ್-ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ, ಪಾಸಿಟಿವ್ ರೆಸ್ಪಾನ್ಸ್/ಪ್ರತಿಕ್ರಿಯೆ ಕೊಟ್ಟಿದ್ದೀರಾ. ಎಲ್ಲರಿಗೂ ಧನ್ಯವಾದ, ಇನ್ನು ಯಾರೆಲ್ಲಾ ಸಿನಿಮಾ ನೋಡಿಲ್ಲ, ಹೋಗಿ ನೋಡಿ" ಅಂತ ರಮ್ಯಾ ಅವರು ವಿಡಿಯೋ ಸಂದೇಶ ಕಳುಹಿಸಿದ್ದಾರೆ.


English summary
Kannada Actress Ramya's Cutout for 'Nagarahavu' is create hysteria in Siddhartha Theater Mandya.
Please Wait while comments are loading...

Kannada Photos

Go to : More Photos