»   » 'ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ

'ಕನ್ನಡದ ರಾಜರತ್ನ' ಜೊತೆಯಲ್ಲಿ 'ಭಂಡಾರಿ' ಸಹೋದರರ ಹೊಸ ಚಿತ್ರ

Posted by:
Subscribe to Filmibeat Kannada

'ರಂಗಿತರಂಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ವಿಶ್ವಮಟ್ಟದಲ್ಲಿ ಹಾರಿಸಿದ ಸಹೋದರರು ಅನೂಪ್ ಭಂಡಾರಿ ಮತ್ತು ನಿರೂಪ್ ಭಂಡಾರಿ.

ಈ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ ಎಂಬ ವದಂತಿ ಕಾಡ್ಗಿಚ್ಚಿನಂತೆ ಹಬ್ಬಿಕೊಂಡಿತ್ತು. ಅಂದು ವದಂತಿ ಆಗಿದ್ದ ಅದೇ ಸುದ್ದಿ ಈಗ ನಿಜವಾಗಿದೆ.

ಹೌದು, ಕನ್ನಡದ ಪವರ್ ಸ್ಟಾರ್ ಜೊತೆಯಲ್ಲಿ 'ರಂಗತರಂಗ' ಸಹೋದರರು ಸಿನಿಮಾ ಮಾಡಲಿದ್ದಾರೆ. ಈ ವಿಷ್ಯವನ್ನ ಸ್ವತಃ ಅನೂಪ್ ಭಂಡಾರಿ ಘೋಷಣೆ ಮಾಡಿದ್ದಾರೆ.

ಪುನೀತ್ ಗೆ ಅನೂಪ್ ಆಕ್ಷನ್ ಕಟ್

ಪುನೀತ್ ಗೆ ಅನೂಪ್ ಆಕ್ಷನ್ ಕಟ್

'ರಂಗಿತರಂಗ' ಖ್ಯಾತಿಯ ನಿರ್ದೇಶನ ಅನೂಪ್ ಭಂಡಾರಿ ತಮ್ಮ ಮುಂದಿನ ಚಿತ್ರವನ್ನ, ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಮಾಡಲಿದ್ದಾರೆ. ಇಷ್ಟು ದಿನದ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದ್ದು, ಈ ಸುದ್ದಿ ನಿಜವಾಗಿದೆ.[ಭಂಡಾರಿ ಸಹೋದರರ 'ರಾಜರಥ' ಸ್ಪೆಷಲ್ ಟೀಸರ್ ನೋಡಿ]

ಹುಟ್ಟುಹಬ್ಬದ ವಿಶೇಷ ಉಡುಗೊರೆ

ಹುಟ್ಟುಹಬ್ಬದ ವಿಶೇಷ ಉಡುಗೊರೆ

ಮಾರ್ಚ್ 2 ರಂದು ನಿರ್ದೇಶಕ ಅನೂಪ್ ಭಂಡಾರಿ ಅವರ ಹುಟ್ಟುಹಬ್ಬ. ಹೀಗಾಗಿ, ಈ ಸಂತಸದಲ್ಲಿದ್ದ ನಿರ್ದೇಶಕರು, ಪುನೀತ್ ಗೆ ಸಿನಿಮಾ ಮಾಡುತ್ತಿರುವುದನ್ನ ಖಚಿತಪಡಿಸಿದ್ದಾರೆ.

ಪುನೀತ್ ಜೊತೆ ನಿರೂಪ್ ಅಭಿನಯ

ಪುನೀತ್ ಜೊತೆ ನಿರೂಪ್ ಅಭಿನಯ

ಅನೂಪ್ ಭಂಡಾರಿ ಆಕ್ಷನ್ ಹೇಳಲಿರುವ ಪುನೀತ್ ರಾಜ್ ಕುಮಾರ್ ಚಿತ್ರದಲ್ಲಿ, ಭಂಡಾರಿ ಸಹೋದರ ನಿರೂಪ್ ಭಂಡಾರಿ ಕೂಡ ತೆರೆ ಹಂಚಿಕೊಳ್ಳಲಿದ್ದಾರಂತೆ.

ಆಕ್ಷನ್ ಥ್ರಿಲ್ಲರ್ ಸಿನಿಮಾ

ಆಕ್ಷನ್ ಥ್ರಿಲ್ಲರ್ ಸಿನಿಮಾ

ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಗಳನ್ನ ಹೊಂದಿದೆಯಂತೆ. ಪುನೀತ್ ಅಭಿಮಾನಿಗಳು ನಿರೀಕ್ಷೆ ಮಾಡುವುದನ್ನ ಈ ಚಿತ್ರದಲ್ಲಿ ನೀಡಲಿದ್ದಾರಂತೆ.

'ರಾಜರಥ'ದಲ್ಲಿ ರಂಗಿತರಂಗ ಸಹೋದರರು

'ರಾಜರಥ'ದಲ್ಲಿ ರಂಗಿತರಂಗ ಸಹೋದರರು

ಸದ್ಯ, ನಿರೂಪ್ ಭಂಡಾರಿ ಮತ್ತು ಅನೂಪ್ ಭಂಡಾರಿ 'ರಾಜರಥ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನ ಅನೂಪ್ ಆಕ್ಷನ್ ಕಟ್ ಹೇಳುತ್ತಿದ್ದು, ನಿರೂಪ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಸ್ಕ್ರಿಪ್ಟ್ ಮುಗಿದ ನಂತರ ಶೂಟಿಂಗ್'!

ಸ್ಕ್ರಿಪ್ಟ್ ಮುಗಿದ ನಂತರ ಶೂಟಿಂಗ್'!

ಸದ್ಯ, ಅನೂಪ್ ಭಂಡಾರಿ ಪುನೀತ್ ಗಾಗಿ ಸ್ಕ್ರಿಪ್ಟ್ ತಯಾರು ಮಾಡುತ್ತಿದ್ದಾರಂತೆ. ಇಷ್ಟು ದಿನ 'ರಾಜರಥ' ಚಿತ್ರದಲ್ಲಿ ಬ್ಯುಸಿಯಿದ್ದ ಕಾರಣ, ಪುನೀತ್ ಸಿನಿಮಾಗೆ ಕೆಲಸ ಮಾಡಲು ಕಷ್ಟವಾಗಿತ್ತಂತೆ. ಈಗ 'ರಾಜರಥ' ಮುಗಿದ್ದಿದ್ದು, ಪುನೀತ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರಂತೆ.

English summary
Rangitaranga director Anup Bhandari will direct Power Star Puneeth Rajkumar in a new film, The film will also star Nirup Bhandari. Except that it is an action adventure film
Please Wait while comments are loading...

Kannada Photos

Go to : More Photos