»   » ವಜ್ರಕಾಯ ಬಿಡುಗಡೆ ಮುನ್ನ ರನ್ನ ರಿಲೀಸ್ ಯಾಕೆ ಚಿನ್ನ?

ವಜ್ರಕಾಯ ಬಿಡುಗಡೆ ಮುನ್ನ ರನ್ನ ರಿಲೀಸ್ ಯಾಕೆ ಚಿನ್ನ?

Written by: ಜೀವನರಸಿಕ
Subscribe to Filmibeat Kannada

ಇದೆಲ್ಲಾ ಬೇಕಾ? ಅಂತ ನೀವು ಮತ್ತೆ ಕೇಳೋ ದಿನ ಸದ್ಯದಲ್ಲೇ ಬರ್ಬಹುದು. ಅದು ಒಂಥರಾ ಪ್ರತಿಷ್ಠೆಯ ಪ್ರಶ್ನೆಯೂ ಹೌದು, ಮತ್ತೊಂದು ಕಡೆ ನಾವ್ಯಾಕೆ ಹೆಜ್ಜೆ ಹಿಂದಿಡಬೇಕು ಅನ್ನೋ ಅಹಂಕಾರವೂ. ಇದು 'ವಜ್ರಕಾಯ' ಮತ್ತು 'ರನ್ನ' ಚಿತ್ರಗಳ ಕಥೆ.

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ 4ನೇ ತಾರೀಕು ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಸದ್ಯದಲ್ಲೇ ಸೆನ್ಸಾರ್ ಕಮಿಟಿಯ ಮುಂದೆ ಇರಲಿದೆ. ಈ ಹಿಂದೆ ನಿರ್ಧರಿಸಿದಂತೆ ಕಿಚ್ಚ ಸುದೀಪ್ ಅಭಿನಯದ 'ರನ್ನ' ಮೇ 29ನೇ ತಾರೀಕಿಗೆ ತೆರೆಗೆ ಬರಬೇಕಿತ್ತು. [ಹೊಸ ಸಂದೇಶ ರವಾನಿಸಿದ ಸುದೀಪ್]


ರನ್ನ 22ಕ್ಕೆ ಅಥವಾ ತೆರೆಗೆ ಬರೋದು ಪಕ್ಕಾ ಅಂತ ವಜ್ರಕಾಯ ಜೂನ್ 5ಕ್ಕೆ ತೆರೆಗೆ ಬರೋಕೆ ವಿತರಕ ಜಯಣ್ಣರಿಗೆ ಥಿಯೇಟರ್ ಸೆಟಪ್ ಮಾಡಿಕೊಳ್ಳೋಕೆ ಪ್ಲಾನಿಂಗೂ ತಯಾರಾಗಿತ್ತು. ಆದ್ರೀಗ ರನ್ನ 4ಕ್ಕೆ ತೆರೆಗೆ ಬರ್ತಿದೆ. ವಜ್ರಕಾಯ ಬಿಡುಗಡೆ ಮುಂದೆ ಹೋದರೂ ಹೋಗಬಹುದು. ಆದರೆ, ಕೆಲವೇ ದಿನಗಳ ಗ್ಯಾಪ್ನಲ್ಲಿ ಎರಡು ಸ್ಟಾರ್ ಸಿನಿಮಾಗಳು ತೆರೆಗೆ ಬಂದ್ರೆ ನಷ್ಟವಾಗೋದು ಯಾರಿಗೆ? ಸ್ಟಾರ್ಗಳಿಗೆ ಯಾವ ತೊಂದರೇನೂ ಆಗೋದಿಲ್ಲ.

ಹಾಗೆ ನೋಡಿದ್ರೆ ರನ್ನ ಸೆನ್ಸಾರ್ ಮುಗಿಸಿದ್ದು ಮೇ 19ಕ್ಕೇ. ಚಿತ್ರವನ್ನ 29ಕ್ಕೆ ರಿಲೀಸ್ ಮಾಡೋಕೂ 10 ದಿನ ಸಮಯ ಇತ್ತು. ಆದ್ರೂ ರಿಲೀಸ್ ಮಾಡದೇ ಇದ್ದಿದ್ದು 'ವಜ್ರಕಾಯ'ನನ್ನ ಮಳೆಗಾಲಕ್ಕೆ ದೂಡೋಕೆ ಅಂತ ಸ್ಯಾಂಡಲ್ವುಡ್ ಮಾತಾಡಿಕೊಳ್ತಿದೆ. ಇವೆರಡು ಚಿತ್ರಗಳಲ್ಲಿ ಯಾವುದು ತೇಲುತ್ತೋ, ಯಾವುದು ಮುಳುಗುತ್ತೋ, ಐ ಮೀನ್ ನಿರ್ಮಾಪಕನನ್ನು ಮುಳುಗಿಸುತ್ತೋ? [ಅಂತೂ 'ರನ್ನ' ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!]

English summary
Ranna movie, with Sudeep in lead role, is all set to release on June 4th, just one day before the release of Vajrakaya, in which Shiva Rajkumar is in the lead. Is it planned or coincidence or conspiracy? Both the movies are getting release just before monsoon. Which movie will sail, which will drown? Hope both the movies win.
Please Wait while comments are loading...

Kannada Photos

Go to : More Photos