»   » 'ಹೆಬ್ಬುಲಿ' ಕಟೌಟ್ ವಿವಾದ: ಅಭಿಮಾನಿಗಳ ಪರವಾಗಿ ಮಾತು ಕೊಟ್ಟ ಕ್ರೇಜಿಸ್ಟಾರ್

'ಹೆಬ್ಬುಲಿ' ಕಟೌಟ್ ವಿವಾದ: ಅಭಿಮಾನಿಗಳ ಪರವಾಗಿ ಮಾತು ಕೊಟ್ಟ ಕ್ರೇಜಿಸ್ಟಾರ್

Posted by:
Subscribe to Filmibeat Kannada

'ಹೆಬ್ಬುಲಿ' ಚಿತ್ರದ ಬಿಡುಗಡೆ ವೇಳೆ ಮುಖ್ಯ ಚಿತ್ರಮಂದಿರದ ಬಳಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಟೌಟ್ ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ರವಿಮಾಮನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ರೀತಿ ಕಟೌಟ್ ವಿಚಾರಕ್ಕೆ ಆಕ್ರೋಶಗೊಂಡಿದ್ದ ಅಭಿಮಾನಿಗಳಿಗೆ ರವಿಚಂದ್ರನ್ ಬುದ್ದಿವಾದ ಹೇಳಿದ್ದು, ''ಗೌರವವನ್ನ ಕೇಳಿ ಪಡೆಯುವುದಲ್ಲ, ತಾನಾಗಿಯೇ ಬರಬೇಕು. ಇನ್ಮುಂದೆ ನಮ್ಮ ಅಭಿಮಾನಿಗಳು ಈ ರೀತಿ ಕೆಲಸ ಮಾಡಲ್ಲ'' ಎಂದು ಫ್ಯಾನ್ಸ್ ಪರವಾಗಿ ರವಿಚಂದ್ರನ್ ಮಾತು ಕೊಟ್ಟಿದ್ದಾರೆ.['ಹೆಬ್ಬುಲಿ' ಮೇಲೆ ಗರಂ ಆದ ಕ್ರೇಜಿಸ್ಟಾರ್ ಅಭಿಮಾನಿಗಳು]


ಅಷ್ಟಕ್ಕೂ, 'ಹೆಬ್ಬುಲಿ' ಚಿತ್ರದ ಕಟೌಟ್ ವಿವಾದದ ಬಗ್ಗೆ ರವಿಚಂದ್ರನ್ ಏನ್ ಹೇಳಿದ್ರು ಅಂತ ಮುಂದೆ ಓದಿ.....


ಗೌರವ ಕೇಳಿ ಪಡೆಯುವುದಲ್ಲ

ಗೌರವ ಕೇಳಿ ಪಡೆಯುವುದಲ್ಲ

''ನನಗೆ ಗೌರವ ಎನ್ನುವುದು ಯಾವುದೇ ಕಾರಣಕ್ಕೂ ಕೇಳಿ ಪಡೆಯುವುದಲ್ಲ. ಅದು ತಾನಾಗಿಯೇ ಬರಬೇಕು. ಅವರು ಹಾಕಿಲ್ಲ ಅಂದ್ರೆ, ತಲೆಕೆಡಿಸಿಕೊಳ್ಳಬಾರದು, ಸುಮ್ಮನೆ ಇದ್ದು ಬಿಡಬೇಕು. ಕಟೌಟ್ ಹಾಕಿದ್ರೆ ಏನಾಗುತ್ತೆ? ಮನಸ್ಸಲ್ಲಿರಬೇಕಲ್ವಾ!''


ಜನರ ಮನಸ್ಸಿನಲ್ಲಿ ಕಟೌಟ್ ಆಗಿ ಉಳಿದ್ದಿದ್ದೀನಿ!

ಜನರ ಮನಸ್ಸಿನಲ್ಲಿ ಕಟೌಟ್ ಆಗಿ ಉಳಿದ್ದಿದ್ದೀನಿ!

''ನಾವು ಜನಗಳ ಮನಸ್ಸಿನಲ್ಲಿ ಇವತ್ತಲ್ಲ ಉಳಿದಿರುವುದು. ಯಾವುತ್ತೋ ಕಟೌಟ್ ಆಗಿ ಉಳಿದುಕೊಂಡು ಬಿಟ್ಟಿದ್ದೀವಿ. ಇನ್ನೇನೂ ಹೊಸದಾಗಿ ಥಿಯೇಟರ್ ಮುಂದೆ ಕಟೌಟ್ ಹಾಕವುದು. ಸ್ಕ್ರೀನ್ ಒಳಗೆ ಹೆಸರು ಮಾಡಿದ್ವಾ? ಸ್ಕ್ರೀನ್ ನಲ್ಲಿ ನಮ್ಮ ಪಾತ್ರ ಸಿನಿಮಾನ ಗೆಲ್ಲಿಸ್ತಾ ಇದಿಯಾ? ಅದು ಖುಷಿ ಕೊಡುತ್ತೆ''.


ನಿರ್ಮಾಪಕರಿಗೆ ತೊಂದರೆ ಕೊಡಬಾರದು

ನಿರ್ಮಾಪಕರಿಗೆ ತೊಂದರೆ ಕೊಡಬಾರದು

''ಕಟೌಟ್ ಹಾಕಿಲ್ಲ ಅಂತ ಒಬ್ಬ ಪ್ರೊಡ್ಯೂಸರ್ ಗೆ ತೊಂದರೆ ಕೊಡುವುದು, ಅವರನ್ನ ಹಾಕಿ ಎನ್ನುವುದು, ಗಲಾಟೆ ಮಾಡಿ ಹಾಕಿಸಿಕೊಳ್ಳುವುದು. ಅದು ನನಗಂತೂ ಖಂಡಿತಾ ಇಷ್ಟ ಎಲ್ಲ, ಅದು ಬೇಕಾಗೂ ಇಲ್ಲ''.


ಅಭಿಮಾನಿಗಳ ಪರವಾಗಿ ಮಾತು ಕೊಟ್ಟ ಕ್ರೇಜಿಸ್ಟಾರ್!

ಅಭಿಮಾನಿಗಳ ಪರವಾಗಿ ಮಾತು ಕೊಟ್ಟ ಕ್ರೇಜಿಸ್ಟಾರ್!

''ಇದೇ ಕೊನೆ, ಇನ್ಮುಂದೆ, ಇವರೆಲ್ಲ (ಅಭಿಮಾನಿಗಳು) ನನ್ ಜೊತೆ ಇರ್ತಾರೆ ಹೊರತು, ಇನ್ನೊಬ್ಬ ಪ್ರೊಡ್ಯೂಸರ್ ಆಫೀಸ್ ಹತ್ರ ಹೋಗಿ, ಅದು ಮಾಡಿ, ಇದು ಮಾಡಿ ಎನ್ನುವ ಅಧಿಕಾರನೂ ಇಲ್ಲ ಇವರಿಗೆ, ಇಂತಹ ಕೆಲಸನಾ ಮಾಡುವುದಿಲ್ಲ. ಅದಕ್ಕೆ ಅವರ ಪರವಾಗಿ ನಾನು ಮಾತು ಕೊಡ್ತಿನಿ''


'ಹೆಬ್ಬುಲಿ' ಪಕ್ಕದಲ್ಲಿರಲಿಲ್ಲ ರವಿಮಾಮನ ಕಟೌಟ್!

'ಹೆಬ್ಬುಲಿ' ಪಕ್ಕದಲ್ಲಿರಲಿಲ್ಲ ರವಿಮಾಮನ ಕಟೌಟ್!

'ಹೆಬ್ಬುಲಿ' ಚಿತ್ರದ ಬಿಡುಗಡೆ ವೇಳೆ ಕೆ.ಜಿ ರಸ್ತೆಯಲ್ಲಿರುವ ಮುಖ್ಯ ಚಿತ್ರಮಂದಿರದ ಬಳಿ, ಸುದೀಪ್ ಅವರ ಕಟೌಟ್ ಮಾತ್ರ ನಿಲ್ಲಿಸಲಾಗಿದ್ದು, ರವಿಚಂದ್ರನ್ ಅವರ ಕಟೌಟ್ ಹಾಕಿರಲಿಲ್ಲ. ಇದರಿಂದ ಕ್ರೇಜಿಸ್ಟಾರ್ ಅಭಿಮಾನಿಗಳು 'ಹೆಬ್ಬುಲಿ' ನಿರ್ಮಾಪಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು.


ಭರವಸೆ ನೀಡಿದ್ದ 'ಹೆಬ್ಬುಲಿ' ಟೀಮ್

ಭರವಸೆ ನೀಡಿದ್ದ 'ಹೆಬ್ಬುಲಿ' ಟೀಮ್

ಅಭಿಮಾನಿಗಳ ಬೇಡಿಕೆಗೆ ಮಣಿದ 'ಹೆಬ್ಬುಲಿ' ಚಿತ್ರತಂಡ, ರವಿಚಂದ್ರನ್ ಅವರ ಕಟೌಟ್ ನಿಲ್ಲಿಸುವುದಾಗಿ ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದರು. ರವಿಚಂದ್ರನ್ ಅವರು ಮಾತನಾಡಿರುವ ವಿಡಿಯೋ ಬೈಟ್ ಇಲ್ಲಿದೆ ನೋಡಿ
English summary
Crazy Star Ravichandran Gives Reaction To Cut Out Controversy at Santhosh thater In Hebbuli Movie Release. Ravi Fans Have Alleged That, Ravichandran Was Dishonoured at the Santosh Theatre. Becuse, No Cut-out For Ravichandran.
Please Wait while comments are loading...

Kannada Photos

Go to : More Photos