»   » ಶಿವರಾತ್ರಿ ಹಬ್ಬಕ್ಕೆ ಹೊಸ ದಾಖಲೆ ಬರೆಯಲಿದ್ದಾರೆ ರವಿಚಂದ್ರನ್

ಶಿವರಾತ್ರಿ ಹಬ್ಬಕ್ಕೆ ಹೊಸ ದಾಖಲೆ ಬರೆಯಲಿದ್ದಾರೆ ರವಿಚಂದ್ರನ್

Posted by:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಗೆ ಈ ವರ್ಷದ ಶಿವರಾತ್ರಿ ಹಬ್ಬ ತುಂಬಾನೇ ವಿಶೇಷ. ಯಾಕಂದ್ರೆ, ರವಿಮಾಮ ಅಭಿನಯಿಸಲಿರುವ 3 ಚಿತ್ರಗಳು ಒಂದೇ ದಿನ ಸೆಟ್ಟೇರಲಿವೆ.

ಇದೇ ಮೊದಲ ಬಾರಿಗೆ ಒಂದೇ ದಿನ ಒಟ್ಟು 3 ಚಿತ್ರಗಳಿಗೆ ರವಿಚಂದ್ರನ್ ಚಾಲನೆ ನೀಡುತ್ತಿದ್ದು, ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೇ, ಮೂರನೇ ಚಿತ್ರವನ್ನ ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ.[ಓದುಗ ಪ್ರಭುಗಳ ತೀರ್ಪು: 2016ರ 'ಅತ್ಯುತ್ತಮ ನಿರ್ದೇಶಕ' ವಿ.ರವಿಚಂದ್ರನ್.!]

ಸದ್ಯ, ಸುದೀಪ್ ಮತ್ತು ಕ್ರೇಜಿಸ್ಟಾರ್ ಅಭಿನಯದ 'ಹೆಬ್ಬುಲಿ' ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯಲ್ಲಿ ರವಿಚಂದ್ರನ್ ತಮ್ಮ ಮುಂದಿನ ಚಿತ್ರಗಳಿಗೆ ಸಿದ್ದವಾಗಿದ್ದಾರೆ.

ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ಚಾಲನೆ

ರವಿಚಂದ್ರನ್ ನಿರ್ದೇಶನದ ಚಿತ್ರಕ್ಕೆ ಚಾಲನೆ

ಮೂರು ಚಿತ್ರಗಳ ಪೈಕಿ ರವಿಚಂದ್ರನ್ ನಿರ್ದೇಶಿಸಿ, ನಿರ್ಮಾಣ ಮಾಡಲಿರುವ ಹೊಸ ಚಿತ್ರವು ಸೇರಿದೆ. ಈ ಚಿತ್ರಕ್ಕೆ 'ರಾಜೇಂದ್ರ ಪೊನ್ನಪ್ಪ' ಎಂದು ಹೆಸರಿಡಲಾಗಿದೆ. ಈ ಹಿಂದೆ 'ದೃಶ್ಯ' ಚಿತ್ರದಲ್ಲಿ ರವಿಚಂದ್ರನ್ ನಿರ್ವಹಿಸಿದ್ದ ಪಾತ್ರದ ಹೆಸರು ಇದಾಗಿತ್ತು.['ಪ್ರೇಮಿಗಳ ದಿನ' ಪ್ರೇಮಲೋಕದ ರಣಧೀರನಿಗೆ ಡಬಲ್ ಸಂಭ್ರಮ]

'ಕ್ರಿಮಿನಲ್ ಲಾಯರ್' ಪಾತ್ರದಲ್ಲಿ ಕ್ರೇಜಿಸ್ಟಾರ್

'ಕ್ರಿಮಿನಲ್ ಲಾಯರ್' ಪಾತ್ರದಲ್ಲಿ ಕ್ರೇಜಿಸ್ಟಾರ್

'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ರವಿಚಂದ್ರನ್ ಅವರದ್ದು ಕ್ರಿಮಿನಲ್ ಲಾಯರ್ ಪಾತ್ರ. ಈ ಚಿತ್ರಕ್ಕೆ ಜಿ.ವಿ.ಎಸ್ ಸೀತಾರಂ ಛಾಯಗ್ರಾಹಣ ಮಾಡಲಿದ್ದು, ಗೌತಮ್ ಶ್ರೀವತ್ಸ ಸಂಗೀತ ಒದಗಿಸಲಿದ್ದಾರೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !]

'ದಶರಥ'ನಾದ ರವಿಚಂದ್ರನ್

'ದಶರಥ'ನಾದ ರವಿಚಂದ್ರನ್

ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಚಿತ್ರದೊಂದಿಗೆ ಮತ್ತೊಂದು ಹೊಸ ಚಿತ್ರ 'ದಶರಥ', ಶಿವರಾತ್ರಿ ಹಬ್ಬದಂದು ಸೆಟ್ಟೇರಲಿದೆ. ಈ ಚಿತ್ರವನ್ನ ಎಂ.ಎಸ್ ರಮೇಶ್ ನಿರ್ದೇಶನ ಮಾಡಲಿದ್ದಾರೆ.

'ಬಕಾಸುರು' ಜೊತೆ ರವಿಮಾಮ

'ಬಕಾಸುರು' ಜೊತೆ ರವಿಮಾಮ

ಇನ್ನೂ 'ಕರ್ವ' ಖ್ಯಾತಿಯ ನವನೀತ್ ನಿರ್ದೇಶನದ 'ಬಕಾಸುರು' ಚಿತ್ರದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಈ ಚಿತ್ರವೂ ನಾಳೆ (ಫೆಬ್ರವರಿ 24) ಶುರುವಾಗಲಿದೆ. ಈ ಚಿತ್ರದಲ್ಲಿ ಆರ್.ಜೆ ರೋಹಿತ್ ಪ್ರಮುಖ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.[ಟ್ರೈಲರ್: ಕ್ರೇಜಿಸ್ಟಾರ್ ಹಾದಿಯಲ್ಲೇ ಕ್ರೇಜಿಪುತ್ರನ 'ಸಾಹೇಬ' ಎಂಟ್ರಿ]

ಹೊಸ ದಾಖಲೆಯತ್ತ ಕ್ರೇಜಿಸ್ಟಾರ್

ಹೊಸ ದಾಖಲೆಯತ್ತ ಕ್ರೇಜಿಸ್ಟಾರ್

ರವಿಚಂದ್ರನ್ ಅವರ ಜರ್ನಿಯಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಮೂರು ಚಿತ್ರಗಳು ಒಂದೇ ದಿನ ಸೆಟ್ಟೇರುತ್ತಿರುವುದು ಹೊಸ ದಾಖಲೆಯಾಗಲಿದೆ. ಆದ್ರೆ, ಇವುಗಳಲ್ಲಿ ಯಾವ ಸಿನಿಮಾ ಮೊದಲು ಶೂಟಿಂಗ್ ಶುರು ಮಾಡುತ್ತೆ, ಯಾವ ಚಿತ್ರ ಮೊದಲು ತೆರೆಕಾಣುತ್ತೆ ಎಂಬುದನ್ನ ಕಾದುನೋಡಬೇಕಿದೆ.

English summary
Actor-director Ravichandran's three films is all set to be launched on the festival day of Shivaratri. This is the First time that 3 Films of Ravichandran is Being Launched on a Single Day.
Please Wait while comments are loading...

Kannada Photos

Go to : More Photos