»   » ಮಗನ ಬಳಿ ನೋವಿನಿಂದ ರವಿಚಂದ್ರನ್ ಕ್ಷಮೆ ಕೇಳಿದ್ದು ಯಾಕೆ?

ಮಗನ ಬಳಿ ನೋವಿನಿಂದ ರವಿಚಂದ್ರನ್ ಕ್ಷಮೆ ಕೇಳಿದ್ದು ಯಾಕೆ?

Posted by:
Subscribe to Filmibeat Kannada

ರವಿಚಂದ್ರನ್ ಅಂದರೆ ಸಿನಿಮಾ, ಸಿನಿಮಾ ಅಂದರೆ ರವಿಚಂದ್ರನ್. ಸಿನಿಮಾ ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ ಎನ್ನುವುದು ರವಿಚಂದ್ರನ್ ಅವರೇ ಹೇಳುವ ಮಾತು.

ಸಿನಿಮಾಕ್ಕಾಗಿ ರವಿಚಂದ್ರನ್ ಕುಟುಂಬದವರ ಬಳಿ ನಿಷ್ಠುರವಾದ ಉದಾಹರಣೆಗಳು ಇವೆ. ಸಿನಿಮಾ ತನ್ನಿಷ್ಟದಂತೆ ತೆರೆ ಮೇಲೆ ಬರಲು ರವಿಚಂದ್ರನ್ ಅಹೋರಾತ್ರಿ ದುಡಿದು ತಮ್ಮ ಮಕ್ಕಳ ಬಗ್ಗೆ ಕಾಳಜಿ ಕಮ್ಮಿಯಾದ ಘಟನೆಗಳನ್ನೂ ರವಿ ನೆನಪಿಸಿಕೊಂಡಿದ್ದುಂಟು.

ತನ್ನ ನಿರ್ದೇಶನದ ಚಿತ್ರ ಸೋತಾಗ ಪ್ರೇಕ್ಷಕ ಯಾತಕ್ಕಾಗಿ ಚಿತ್ರವನ್ನು ತಿರಸ್ಕರಿಸಿದ, ಮುಂದಿನ ಚಿತ್ರದಲ್ಲಿ ಇದರಿಂದ ಎಚ್ಚೆತ್ತು ಕೊಳ್ಳಬೇಕಾಗಿರುವುದು ಏನು ಎನ್ನುವುದರ ಬಗ್ಗೆ ವರ್ಕೌಟ್ ಮಾಡಿಕೊಳ್ಳುವ ಗುಣವನ್ನು ಹೊಂದಿರುವ ರವಿ, ಸದಾ ಹೊಸತನವನ್ನು ಬಯಸಿದವರು. (ಹಂಸಲೇಖ, ರವಿ ಮನಸ್ತಾಪದ ಕಾರಣ ಬಹಿರಂಗ)

ಕಿರುತೆರೆಯ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲೂ ಸ್ಪರ್ಧಾಳುಗಳ ತಪ್ಪುಒಪ್ಪುಗಳನ್ನು ತನ್ನದೇ ಶೈಲಿಯಲ್ಲಿ ವಿವರಿಸುವ ರವಿಚಂದ್ರನ್ ನೇರ ನುಡಿಗೆ ಹೆಸರಾದವರು.

ತನ್ನ ಹುಟ್ಟುಹಬ್ಬದ ದಿನವಾದ ಮೇ 30ರಂದು ರವಿಚಂದ್ರನ್ ತನ್ನ ಮಗ ಮನೋರಂಜನ್ ಬಳಿ ಸಾರಿ ಕೇಳಿದ್ದಾರೆ.

ಪ್ರೇಮಲೋಕದ ಸಮಯದಲ್ಲಿ

ಪ್ರೇಮಲೋಕದ ಸಮಯದಲ್ಲಿ

ತನ್ನ ಚೊಚ್ಚಲ ನಿರ್ದೇಶನದ ಪ್ರೇಮಲೋಕ ಚಿತ್ರದ ಸಂದರ್ಭದಲ್ಲಿ ರವಿ ವೈವಾಹಿಕ ಜೀವನಕ್ಕೆ ಒಂದು ವರ್ಷವಷ್ಟೇ ತುಂಬಿತ್ತು. ಆ ಚಿತ್ರದ ಸಮಯದಲ್ಲಿ ಮತ್ತು ನಂತರದ ಎರಡು ವರ್ಷ ಪತ್ನಿಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿರಲಿಲ್ಲ ಎಂದು ರವಿಚಂದ್ರನ್ ಈ ಹಿಂದೆ ಬೇಸರ ವ್ಯಕ್ತ ಪಡಿಸಿದ್ದುಂಟು.

ಏಕಾಂಗಿ ಸೋತಾಗ

ಏಕಾಂಗಿ ಸೋತಾಗ

ನಾನು ಬಹಳ ಇಷ್ಟ ಪಟ್ಟು ಮಾಡಿದ ಸಿನಿಮಾ ಏಕಾಂಗಿ. ಆ ಚಿತ್ರ ದಯನೀಯವಾಗಿ ಸೋತಾಗ ಚಿತ್ರ ಜಗತ್ತೇ ಸಾಕು ಎಂದನೆಸಿಬಿಟ್ಟಿತ್ತು. ಆರು ತಿಂಗಳು ಯಾವ ಹೊಸ ಚಿತ್ರಕ್ಕೂ ಒಪ್ಪದೇ, ಮನೆಯಿಂದ ಹೊರಬಂದಿರಲಿಲ್ಲ. ಮನೆಯವರ, ಹಿತೈಷಿಗಳ ಒತ್ತಾಯದಿಂದ ಮತ್ತೆ ಬಣ್ಣದಲೋಕಕ್ಕೆ ಬಂದೆ ಎಂದು ಅಂದಿನ ಘಟನೆಯನ್ನು ರವಿ ಆವಾಗಾವಾಗ ಸ್ಮರಿಸಿಕೊಳ್ಳುತ್ತಾರೆ.

ಸಹೋದರನನ್ನು ಪರಿಚಯಿಸಬೇಕಿತ್ತು

ಸಹೋದರನನ್ನು ಪರಿಚಯಿಸಬೇಕಿತ್ತು

ಚಿತ್ರೋದ್ಯಮದಲ್ಲಿ ನಾನು ಒಂದು ನೆಲೆಕಂಡ ಮೇಲೆ ಸಹೋದರ ಬಾಲಾಜಿಯನ್ನು ಬಣ್ಣದಲೋಕಕ್ಕೆ ಪರಿಚಯಿಸುವ ಜವಾಬ್ದಾರಿ ನನ್ನ ಮೇಲಿತ್ತು. ನಾನೇ ಕಥೆ, ಚಿತ್ರಕಥೆ ಹಣೆದು ನಿರ್ದೇಶಿಸಿ ಅಹಂ ಪ್ರೇಮಾಸ್ಮಿ ಚಿತ್ರ ನಿರ್ಮಿಸಿದೆ. ಆ ಚಿತ್ರವನ್ನೂ ಜನ ಸ್ವೀಕರಿಸಲಿಲ್ಲ.

ಮಗ ಮನೋರಂಜನ್

ಮಗ ಮನೋರಂಜನ್

ಮಗ ಬೆಳೆದು ದೊಡ್ಡವನಾಗಿದ್ದಾನೆ, ಇಷ್ಟು ದಿನವಾದರೂ ಮಗನಿಗೆ ಚಿತ್ರರಂಗದಲ್ಲಿ ಒಂದು ನೆಲೆಕಾಣಿಸಿಕೊಟ್ಟಿಲ್ಲ ಎಂದು ಮನೆಯಲ್ಲಿ ನಿತ್ಯ ಮನಸ್ತಾಪವಾಗುತ್ತಿತ್ತು. ಲೇಟಾದರೂ, ಲೇಟೆಸ್ಟಾಗಿ ಮಗ ಮನೋರಂಜನ್ ನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ನನ್ನ ಉದ್ದೇಶ - ರವಿಚಂದ್ರನ್

ಸಾರಿ ಮಗನೇ

ಸಾರಿ ಮಗನೇ

ನನ್ನಿಂದ ಲೇಟಾಯಿತು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕಾಗಿ ನಾನು ನಿನ್ನಲ್ಲಿ ಸಾರಿ ಕೇಳುತ್ತೇನೆ ಮಗನೇ. ನಿನ್ನನ್ನು ಭರ್ಜರಿಯಾಗಿ ಬೆಳ್ಳಿತೆರೆ ಮೇಲೆ ತರುತ್ತೇನೆಂದು ರವಿಚಂದ್ರನ್, ತನ್ನ ಹುಟ್ಟಿದ ಹಬ್ಬದ ದಿನದಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭರವಸೆ ನೀಡಿದ್ದಾರೆ.

ನೀನೇ ಮುಂದಿನ ಕ್ರೇಜಿಸ್ಟಾರ್

ನೀನೇ ಮುಂದಿನ ಕ್ರೇಜಿಸ್ಟಾರ್

ಅಪೂರ್ವ ಚಿತ್ರ ಮುಗಿದ ಮೇಲೆ ಮಗನ ಚೊಚ್ಚಲ ಸಿನಿಮಾ ರಣಧೀರ ಚಿತ್ರದ ಕೆಲಸ ಆರಂಭಿಸುತ್ತೇನೆ. ನನ್ನ ನಂತರ ಕನ್ನಡ ಚಿತ್ರೋದ್ಯಮದ ಕ್ರೇಜಿಸ್ಟಾರ್ ಪಟ್ಟ ನಿನ್ನದೇ ಮಗನೇ, ಅಪ್ಪನನ್ನು ಕ್ಷಮಿಸು ಎಂದು ಮತ್ತೊಮ್ಮೆ ರವಿ ಸರ್ ಮಗನಲ್ಲಿ ಸಾರಿ ಕೇಳಿದ್ದಾರೆ.

English summary
Crazy Star Ravichandran's son Manoranjan debut movie 'Ranadheera' shooting will commence soon after Apoorva movie.
Please Wait while comments are loading...

Kannada Photos

Go to : More Photos