ಚಲನಚಿತ್ರ ಅಕಾಡೆಮಿಗೆ ಕ್ರೇಜಿಸ್ಟಾರ್ ಹೆಸರು

Written by: ಉದಯರವಿ
Give your rating:

ನಟಿ ತಾರಾ ಅನುರಾಧಾ ಅವರ ಬಳಿಕ ತೆರವಾಗಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಅಧ್ಯಕ್ಶ ಸ್ಥಾನಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಸರು ಕೇಳಿಬಂದಿದೆ. ಇನ್ನೊಂದು ಕಡೆ ಈ ಸ್ಥಾನಕ್ಕಾಗಿ ಹಲವರು ಲಾಬಿ ನಡೆಸುತ್ತಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ.

ಸನ್ಮಾನ್ಯ ವಾರ್ತಾ ಸಚಿವರಾದ ಸಂತೋಷ್ ಲಾಡ್ ಅವರು ಸ್ವತಃ ರವಿಚಂದ್ರನ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾಗಿ ಸುದ್ದಿ ಹರಿದಾಡುತ್ತಿದೆ. ಆದರೆ ರವಿಚಂದ್ರನ್ ಕಡೆಯಿಂದ ಇನ್ನೂ ಯಾವುದೇ ಉತ್ತರ ಸಿಕ್ಕಿಲ್ಲ ಎಂಬ ಸುದ್ದಿಯೂ ಇದೆ.

ಇನ್ನೊಂದು ಕಡೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಬಸಂತ್ ಕುಮಾರ್ ಪಾಟೀಲ್ ಹೆಸರು ಕೇಳಿಬರುತ್ತಿದೆ. ಸರ್ಕಾರ ತಮಗೆ ಈ ಅವಕಾಶ ಕೊಟ್ಟರೆ ಖಂಡಿತ ನಿಭಾಯಿಸುತ್ತೇನೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ತಾನೂ ಒಬ್ಬ ಎಂದಿದ್ದಾರೆ ಬಸಂತ್.

ಇದರ ಜೊತೆಗೆ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 7 ಹೆಸರುಗಳನ್ನೂ ಶಿಫಾರಸು ಮಾಡಿದೆ. ಅವರಲ್ಲಿ ಜಯಮಾಲಾ, ಕೆ.ವಿ.ಚಂದ್ರಶೇಖರ್, ಎ.ಆರ್.ರಾಜು, ಸಾ.ರಾ.ಗೋವಿಂದು, ಕೆಸಿಎನ್ ಚಂದ್ರಶೇಖರ್, ಚಿನ್ನೇಗೌಡ, ಬಸಂತ್ ಕುಮಾರ್ ಪಾಟೀಲ್ ಇದ್ದಾರೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗ ಲವರ್ ಬಾಯ್ ಅಲ್ಲ. ಅವರ ಪುತ್ರರು ಈಗ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಇಂತಹ ನಿರ್ಣಾಯಕ ಹಂತದಲ್ಲಿ ರವಿಚಂದ್ರನ್ ಅವರು ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ.

Read more about: ravichandran, crazy star, tara, ರವಿಚಂದ್ರನ್, ಕ್ರೇಜಿಸ್ಟಾರ್, ತಾರಾ

English summary
Crazy Star Ravichandran name has heard for the Chairperson of the Karnataka Chalanachitra Academy. Recently actress Tara has resigned from her position in the academy after a few weeks of going back and forth on the decision. Kannada film producer Basanth Kumar Patil name also in the list.
Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive