twitter
    For Quick Alerts
    ALLOW NOTIFICATIONS  
    For Daily Alerts

    ನೋಟ್ ಬ್ಯಾನ್: 9 ತಿಂಗಳ ಹಿಂದೆಯೇ ಉಪೇಂದ್ರಗೆ ಹೊಳೆದಿತ್ತು 'ಮಾಸ್ಟರ್ ಪ್ಲಾನ್'!

    By Harshitha
    |

    ಅದು...ನವೆಂಬರ್ 8, 2016, ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಇಡೀ ಭಾರತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಬಿಗ್ ಬ್ರೇಕಿಂಗ್ ನ್ಯೂಸ್' ನೀಡಿದರು.

    ಬ್ಲಾಕ್ ಮನಿ ಹಾಗೂ ಖೋಟಾ ನೋಟುಗಳ ವಿರುದ್ಧ ಸಮರ ಸಾರಿದ ಪ್ರಧಾನಿ ಮೋದಿ, ''ನವೆಂಬರ್ 8 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 500 ರೂಪಾಯಿ ಹಾಗೂ 1000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಬಂದ್'' ಅಂತ ಘೋಷಿಸಿಬಿಟ್ಟರು. ಇದು ಕಾಳಧನಿಕರ ಪಾಲಿಗೆ 'ಹಾರ್ಟ್ ಬ್ರೇಕಿಂಗ್' ನ್ಯೂಸ್ ಆಗಿದ್ದು ಮಾತ್ರ ಸುಳ್ಳಲ್ಲ. [ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ]

    ಹೀಗೆ, ನರೇಂದ್ರ ಮೋದಿ ಘೋಷಣೆ ಮಾಡುವ ಮುನ್ನ...ಅಂದ್ರೆ ಒಂಬತ್ತು ತಿಂಗಳ ಹಿಂದೆಯೇ ಭ್ರಷ್ಟಾಚಾರ, ಕಾಳಧನ, ಖೋಟಾ ನೋಟು...ಇವೆಲ್ಲದಕ್ಕೂ ಕಡಿವಾಣ ಹಾಕಲು ರಿಯಲ್ ಸ್ಟಾರ್ ಉಪೇಂದ್ರ 'ನೋಟ್ ಬ್ಯಾನ್' ಥಿಯರಿ ಪ್ರಸ್ತಾಪಿಸಿದ್ದರು ಅಂದ್ರೆ ನೀವು ನಂಬಲೇಬೇಕು.!

    ಉಪ್ಪಿಗೆ ಹೊಳೆದಿತ್ತು 'ನೋಟ್ ಬ್ಯಾನ್' ಐಡಿಯಾ.!

    ಉಪ್ಪಿಗೆ ಹೊಳೆದಿತ್ತು 'ನೋಟ್ ಬ್ಯಾನ್' ಐಡಿಯಾ.!

    ''ದೇಶದಲ್ಲಿ ಆರ್ಥಿಕ ಸುಧಾರಣೆ ಆಗಬೇಕು, ಭ್ರಷ್ಟಾಚಾರ ತಡೆಗಟ್ಟಬೇಕು, ಬ್ಲಾಕ್ ಮನಿ ಹೊರಗೆ ಬರಬೇಕು ಅಂದ್ರೆ 'ನೋಟ್ ಬ್ಯಾನ್' ಮಾಡಲೇಬೇಕು'' ಎಂಬ ಐಡಿಯಾ ಉಪ್ಪಿ ತಲೆಯಲ್ಲಿತ್ತು. ಅಚ್ಚರಿ ಅಂದ್ರೆ, ಈ 'ನೋಟ್ ಬ್ಯಾನ್' ಕುರಿತಾಗಿ ಫೆಬ್ರವರಿ ತಿಂಗಳಿನಲ್ಲೇ ಉಪೇಂದ್ರ ಮಾತನಾಡಿದ್ದರು.! [ಗಾಂಧಿನಗರದಲ್ಲಿ ಮೋದಿ ತಾಯಿಯಿಂದ ನೋಟು ಎಕ್ಸ್ ಚೇಂಜ್]

    ಮೋದಿಗಿಂತ ಉಪೇಂದ್ರ ಬಾಯಲ್ಲೇ ಮೊದಲು ಬಂದಿದ್ದು.!

    ಮೋದಿಗಿಂತ ಉಪೇಂದ್ರ ಬಾಯಲ್ಲೇ ಮೊದಲು ಬಂದಿದ್ದು.!

    ಬ್ಲಾಕ್ ಮನಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ 'ಸರ್ಜಿಕಲ್ ಸ್ಟ್ರೈಕ್' ಶುರು ಮಾಡಿದ್ದು ನವೆಂಬರ್ ತಿಂಗಳಿನಲ್ಲಿ. ಆದ್ರೆ, ಫೆಬ್ರವರಿ ತಿಂಗಳಿನಲ್ಲೇ 'ನೋಟು ನಿಷೇಧ'ದ ಪ್ಲಾನ್ ನೀಡಿದ್ದರು 'ಬುದ್ಧಿವಂತ' ಉಪೇಂದ್ರ. [ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

    'ರೂಪತಾರಾ' ಸಂದರ್ಶನ ವೇಳೆ 'ನೋಟ್ ಬ್ಯಾನ್' ಸಲಹೆ

    'ರೂಪತಾರಾ' ಸಂದರ್ಶನ ವೇಳೆ 'ನೋಟ್ ಬ್ಯಾನ್' ಸಲಹೆ

    ಒಂಬತ್ತು ತಿಂಗಳ ಹಿಂದೆ, ಅಂದ್ರೆ ಫೆಬ್ರವರಿ ತಿಂಗಳಿನ 'ರೂಪತಾರಾ' ಸಂಚಿಕೆಗಾಗಿ ರಿಯಲ್ ಸ್ಟಾರ್ ಉಪೇಂದ್ರ ಸಂದರ್ಶನ ನೀಡಿದ್ದರು. ಆ ವೇಳೆ ''ನೋಟ್ ಬ್ಯಾನ್'ನಿಂದ ಮಾತ್ರ ಭ್ರಷ್ಟಾಚಾರ ತಡೆಗಟ್ಟುವುದು ಸುಲಭ'' ಅಂತ ಉಪೇಂದ್ರ ಹೇಳಿದ್ದರು.

    ಸಂದರ್ಶನದಲ್ಲಿ ಉಪೇಂದ್ರ ಹೇಳಿದ್ದೇನು.?

    ಸಂದರ್ಶನದಲ್ಲಿ ಉಪೇಂದ್ರ ಹೇಳಿದ್ದೇನು.?

    ''ಭ್ರಷ್ಟಾಚಾರ ತಡೆಯುವವರು ಯಾರು? ಅದು ಯಾರಿಗೂ ಗೊತ್ತಿಲ್ಲ. ಭ್ರಷ್ಟಾಚಾರದ ಮೂಲ ಯಾವುದು? ಅದೂ ಯಾರಿಗೂ ಗೊತ್ತಿಲ್ಲ. ಪ್ಲಾಸ್ಟಿಕ್ ಮನಿ ಮಾಡಿ. 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆ ನಿಲ್ಲಿಸಿ. ಆಗ ತನಗೆ ತಾನೇ ಕಪ್ಪು ಹಣ ನಿಂತೇ ಹೋಗುತ್ತದೆ'' ಅಂತ ಫೆಬ್ರವರಿ ತಿಂಗಳ 'ರೂಪತಾರಾ' ಸಂಚಿಕೆಗೆ ಉಪೇಂದ್ರ ಸಂದರ್ಶನ ನೀಡಿದ್ದರು.

    ಕಪ್ಪು ಹಣಕ್ಕೆ ಕಡಿವಾಣ

    ಕಪ್ಪು ಹಣಕ್ಕೆ ಕಡಿವಾಣ

    ''ಯಾರಿಗಾದರೂ ಒಂದು ಕೋಟಿ ರೂಪಾಯಿಯನ್ನು ನೂರರ ನೋಟುಗಳಲ್ಲಿ ಕೊಡಲು ಸಾಧ್ಯವೇ.? ನೂರು ರೂಪಾಯಿಯ ಹತ್ತು ಸಾವಿರ ಬಂಡಲುಗಳು ಬೇಕು. ಅದನ್ನು ಇಡುವುದಕ್ಕೆ ಎಷ್ಟೊಂದು ಜಾಗ ಬೇಕು.? ಕಪ್ಪುಹಣ ಬಚ್ಚಿಡಲು ಸಾಧ್ಯವೇ ಇಲ್ಲ. ಅಂದ್ರೆ ಪರಿಹಾರ ನಮ್ಮ ಕೈಯಲ್ಲೇ ಇದೆ'' - ಉಪೇಂದ್ರ

    ಪ್ಲಾಸ್ಟಿಕ್ ಮನಿ ಇದ್ದರೆ....

    ಪ್ಲಾಸ್ಟಿಕ್ ಮನಿ ಇದ್ದರೆ....

    ''ಅಮೇರಿಕಾದಂಥ ದೇಶಗಳಲ್ಲಿ ನೂರು ಡಾಲರ್ ಗಿಂತ ಹೆಚ್ಚಿನ ಮೊತ್ತವನ್ನು ಕ್ಯಾಶ್ ಮೂಲಕ ಸ್ವೀಕಾರ ಮಾಡುವುದೇ ಇಲ್ಲ. ಕಾರ್ಡು ಕೊಡಿ ಅಂತಾರೆ. ಕಾರ್ಡಿಲ್ಲ ಅಂದರೆ ಅವರೇ ಕಾರ್ಡು ಮಾಡಿಕೊಡುತ್ತಾರೆ'' - ಉಪೇಂದ್ರ

    ದುಡ್ಡಿನ ಮೇಲಿನ ಮೋಹ....

    ದುಡ್ಡಿನ ಮೇಲಿನ ಮೋಹ....

    ''ಎಲ್ಲವೂ ಪ್ಲಾಸ್ಟಿಕ್ ಮನಿ ಆದಾಗ ದುಡ್ಡಿನ ಮೇಲಿನ ಮೋಹವೂ ಹೊರಟು ಹೋಗುತ್ತದೆ. ವ್ಯವಸ್ಥೆಗೊಂಡು ಸರ್ಜರಿ ಮಾಡುವಂಥ ವ್ಯವಸ್ಥೆ ಬಂದರೆ ಎಷ್ಟು ಚೆನ್ನ'' ಅಂತ ಉಪೇಂದ್ರ ತಮ್ಮ ಐಡಿಯಾನ 'ರೂಪತಾರಾ' ಸಂದರ್ಶನದಲ್ಲಿ ಹಂಚಿಕೊಂಡಿದ್ದರು.

    ಉಪೇಂದ್ರ ಹೇಳಿದರು, ಮೋದಿ ಮಾಡಿ ತೋರಿಸಿದರು

    ಉಪೇಂದ್ರ ಹೇಳಿದರು, ಮೋದಿ ಮಾಡಿ ತೋರಿಸಿದರು

    ಒಂಬತ್ತು ತಿಂಗಳ ಹಿಂದೆ ಉಪೇಂದ್ರಗೆ ಹೊಳೆದಿದ್ದ ಮಾಸ್ಟರ್ ಪ್ಲಾನ್, ಇಂದು ಪ್ರಧಾನಿ ಮೋದಿಗೂ ಹೊಳೆದ ಪರಿಣಾಮ ಭಾರತದಲ್ಲಿ 500, 1000 ರೂಪಾಯಿ ಮುಖಬೆಲೆಯ ನೋಟು ನಿಷೇಧ ಆಗಿದೆ.

    ಟ್ವೀಟ್ ಮಾಡಿದ್ದ ಉಪೇಂದ್ರ.!

    ಟ್ವೀಟ್ ಮಾಡಿದ್ದ ಉಪೇಂದ್ರ.!

    ''ಮೋದಿಜಿ... ಒಳ್ಳೆ ದಿನಗಳು ಬಂದವು. ಆದ್ರೆ, 2000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳು ಯಾಕೆ? ಇದರಿಂದ ಮತ್ತೆ ಬ್ಲಾಕ್ ಮನಿಗೆ ದಾರಿ ಮಾಡಿಕೊಡುತ್ತದೆ. ಬರೀ ಪ್ಲಾಸ್ಟಿಕ್ ಮನಿ ಯಾಕೆ ತರಬಾರದು?'' ಅಂತ ಉಪೇಂದ್ರ ನವೆಂಬರ್ 10 ರಂದು ಟ್ವೀಟ್ ಕೂಡ ಮಾಡಿದ್ದರು.

    ಕ್ಯಾಶ್ ಲೆಸ್ ಎಕಾನಮಿ ಬೇಕು.!

    ಕ್ಯಾಶ್ ಲೆಸ್ ಎಕಾನಮಿ ಬೇಕು.!

    ''ಜನಸಾಮಾನ್ಯರ ಶ್ರಮ ವ್ಯರ್ಥ ಆಗಬಾರದು. ಕ್ಯಾಶ್ ಲೆಸ್ ಎಕಾನಮಿಗಾಗಿ ನಿಮ್ಮ ದನಿಯೆತ್ತಿ. 2000 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಬೇಡವೆನ್ನಿ'' ಅಂತಲೂ ಉಪೇಂದ್ರ ಟ್ವೀಟ್ ಮಾಡಿದ್ದರು.

    ಒಮ್ಮೆ ಊಹಿಸಿ....

    ಒಮ್ಮೆ ಊಹಿಸಿ....

    ''100, 50, 20 ರೂಪಾಯಿ ಮುಖಬೆಲೆಯ ನೋಟುಗಳ ಮೂಲಕ ಲಂಚ ಕೊಡುವುದು ಅಥವಾ ತೆಗೆದುಕೊಳ್ಳುವುದನ್ನು ಸ್ವಲ್ಪ ಊಹಿಸಿ...'' - ಉಪೇಂದ್ರ

    ಆರ್ಥಿಕ ಸುಧಾರಕ

    ಆರ್ಥಿಕ ಸುಧಾರಕ

    ಉಪೇಂದ್ರ ಹೇಳಿರುವುದಕ್ಕೂ, ಪ್ರಧಾನಿ ಮೋದಿ 'ನೋಟ್ ಬ್ಯಾನ್' ಮಾಡಿರುವುದಕ್ಕೂ ನಂಟಿದೆಯೋ, ಇಲ್ವೋ...ಗೊತ್ತಿಲ್ಲ. ಎಲ್ಲವೂ ಕಾಕತಾಳೀಯ ಇರಬಹುದು. ಆದ್ರೆ, ಉಪೇಂದ್ರ ರವರ ಒಳಗೂ ಒಬ್ಬ ಆರ್ಥಿಕ ಸುಧಾರಕ ಇದ್ದಾನೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಮತ್ತೊಂದು ಬೇಕಾ?

    English summary
    Kannada Actor, Real Star Upendra had spoken about advantages of 'Note Ban' during 'Roopataara' Interview in February 2016, Much before Prime Minister Narendra Modi announced 'Note Ban'.
    Friday, November 18, 2016, 14:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X