»   » ರಿಯಲ್ ಸ್ಟಾರ್ ಉಪ್ಪಿ ಬಗ್ಗೆ ಅವರ ತಾಯಿ ಹೇಳಿದ್ದೇನು?

ರಿಯಲ್ ಸ್ಟಾರ್ ಉಪ್ಪಿ ಬಗ್ಗೆ ಅವರ ತಾಯಿ ಹೇಳಿದ್ದೇನು?

Written by: ಉದಯರವಿ
Subscribe to Filmibeat Kannada

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಅವರ ಬಗ್ಗೆ ಸಾಕಷ್ಟು ಕೇಳಿರುತ್ತೀರಾ, ಓದಿರುತ್ತೀರಾ. ಆದರೆ ಇದೇ ಮೊದಲ ಬಾರಿಗೆ ಅವರ ಜೀವನದ ಕೆಲವು ರೋಚಕ ಪುಟಗಳು ತೆರೆದಿಡುವ ಪ್ರಯತ್ನ ಮಾಡುತ್ತಿದೆ ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿ.

ಪ್ರತಿ ವಾರಾಂತ್ಯ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ವಿಭಿನ್ನ, ವಿಶಿಷ್ಟ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಈ ಸಲದ ಅತಿಥಿ ಯಾರು ಗೊತ್ತೆ. ಈ ಬಾರಿ ಹಾಟ್ ಸೀಟ್ ಮೇಲೆ ಕೂರುತ್ತಿರುವುದು ಗಿರಗಿರ ಕಣ್ಣುಗಳ ಸರದಾರ ಉಪೇಂದ್ರ.

ಉಪೇಂದ್ರ ಅವರ 45ನೇ ಹುಟ್ಟುಹಬ್ಬದ ನಿಮಿತ್ತ ಅವರ ಅಭಿನಯ 'ಸೂಪರ್ ರಂಗ' ಚಿತ್ರ ಸೆಪ್ಟೆಂಬರ್ 19ರಂದು ತೆರೆಕಾಣುತ್ತಿದೆ. ಉಪೇಂದ್ರ ಅವರು ಪ್ರಪಂಚದ ನೂರು ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಹಾಗೆಯೇ ಭಾರತದ ಹತ್ತು ಖ್ಯಾತ ನಿರ್ದೇಶಕರಲ್ಲಿ ಒಬ್ಬರು.

ಹುಟ್ಟುವಾಗಲೇ ಕಣ್ಣಿನ ಸಮಸ್ಯೆ ಎದುರಾಯ್ತು

ಹುಟ್ಟುವಾಗಲೇ ಕಣ್ಣಿನ ಸಮಸ್ಯೆ ಎದುರಾಯ್ತು

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ತಾಯಿ ಅನುಷ್ಯಾ ಅವರು ಮಾತನಾಡುತ್ತಾ, "ಇವನು ಹೊಟ್ಟೆಯಲ್ಲಿದ್ದಾಗ ನಾನು ಸರಿಯಾಗಿ ಮಾತ್ರೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ಇವನಿಗೆ ಹುಟ್ಟುವಾಗಲೇ ಕಣ್ಣಿನ ಸಮಸ್ಯೆ ಎದುರಾಯ್ತು. ಚಿಕ್ಕವನಿದ್ದಾಗ ತಗ್ಗು ಗುಂಡಿ ಕಾಣಿಸ್ತಿರಲಿಲ್ಲ ಇವನಿಗೆ..."

ನಮ್ಮ ಬಳಿ ಹಾಲುತಗೊಳಕ್ಕೂ ಹಣ ಇರ್ತಿರಲಿಲ್ಲ

ನಮ್ಮ ಬಳಿ ಹಾಲುತಗೊಳಕ್ಕೂ ಹಣ ಇರ್ತಿರಲಿಲ್ಲ

ಡಾಕ್ಟರ್ ಹಸುವಿನ ಹಾಲು ಕುಡಿಸಿ ಅಂತ ಹೇಳಿದ್ರು ನಮ್ಮ ಬಳಿ ಹಾಲುತಗೊಳಕ್ಕೂ ಹಣ ಇರ್ತಿರಲಿಲ್ಲ. ಕೊನೆಗೆ ಪರಿಚಯ ಇರುವವರ ಮನೆಯಿಂದ ಒಂದು ಲೋಟ ಹಾಲು ತಂದು ಅದಕ್ಕೆ 5 ಲೋಟ ನೀರು ಬೆರಸಿ ಕುಡಿಸ್ತಾ ಇದ್ದೆ..." ಎಂದು ಹೇಳಿದ್ದಾರೆ.

ಗದ್ಗದಿತರಾದ ರಿಯಲ್ ಸ್ಟಾರ್ ಉಪೇಂದ್ರ

ಗದ್ಗದಿತರಾದ ರಿಯಲ್ ಸ್ಟಾರ್ ಉಪೇಂದ್ರ

ತಮ್ಮ ತಾಯಿಯ ಮಾತುಗಳನ್ನು ಕೇಳಿ ಉಪೇಂದ್ರರ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿತು. ಸ್ಟುಡಿಯೋದಲ್ಲಿ ಕುಳಿತ ಅನೇಕರ ಕಣ್ಣುಗಳು ಒದ್ದೆಯಾಗಿದ್ದವು. ನಿರೂಪಕ ರಮೇಶ್ ಅರವಿಂದ್ ಭಾವುಕರಾಗಿ ನಿಂತುಕೊಂಡ್ರು.ಕೊನೆಗೆ ಸ್ವತಃ ಉಪೇಂದ್ರ "ಹಳೆಯದನ್ನೆಲ್ಲ ಯಾಕೆ ನೆನಪಿಸ್ತಿರಿ" ಎಂದು ಗದ್ಗದಿತರಾದ್ರು.

ಅಡುಗೆ ಕೆಲಸವೇ ಆಧಾರವಾಗಿದ್ದ ಕುಟುಂಬ

ಅಡುಗೆ ಕೆಲಸವೇ ಆಧಾರವಾಗಿದ್ದ ಕುಟುಂಬ

ಈ ವಾರದ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ನಟ-ನಿರ್ದೇಶಕ ಉಪೇಂದ್ರರ ನೆನಪಿನ ಪುಟಗಳು ತೆರೆದುಕೊಂಡಿದ್ದು ಹೀಗೆ. ಅಡುಗೆ ಕೆಲಸವೇ ಆಧಾರವಾಗಿದ್ದ ಕುಟುಂಬದಲ್ಲಿ ಹುಟ್ಟಿದ ಉಪೇಂದ್ರ ತನ್ನ ಶ್ರದ್ಧೆ, ಶ್ರಮ, ಪ್ರತಿಭೆ ಹಾಗೂ ಬದ್ಧಿವಂತಿಕೆಯಿಂದ ಕನ್ನಡ ಚಿತ್ರರಂಗದ ಉತ್ತುಂಗದಲ್ಲಿರುವವರು.

ಉಪ್ಪಿ ಪಯಣದ ರೋಚಕ ಅನುಭವ ನೋಡಿ

ಉಪ್ಪಿ ಪಯಣದ ರೋಚಕ ಅನುಭವ ನೋಡಿ

ಇಲ್ಲಿಯವರೆಗಿನ ಅವರ ಜೀವನದ ಪಯಣವೇ ಒಂದು ರೋಚಕ ಅನುಭವ. ಅವರ ಬಗ್ಗೆ ಇದುವರೆಗೆ ಎಲ್ಲೂ ದಾಖಲಾಗದ ಮಾಹಿತಿಗಳೆಲ್ಲ ಈ ಶನಿವಾರ (ಸೆ.20) ಮತ್ತು ಭಾನುವಾರ (ಸೆ.21) ರಾತ್ರಿ 9 ಗಂಟೆಗೆ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ನೋಡಬಹುದು ಎಂದು ಜೀ ಕನ್ನಡದ ಪುನೀತ್ ಬಾರ್ಕೂರು ವಿವರ ನೀಡಿದರು.

English summary
Sandalwood Real Star Upendra is the guest honour of Ramesh Aravind's chat show Weekend With Ramesh on 20th and 21st Sept at 9 pm, where he will be seen in a candid avatar and many of his close friends, family and acquaintances will talk about his private life in the show.
Please Wait while comments are loading...

Kannada Photos

Go to : More Photos