»   » ರಿಯಲ್ ಸ್ಟಾರ್ 'ಉಪ್ಪಿ 2' ಎಕ್ಸ್ ಕ್ಲೂಸೀವ್ ಚಿತ್ರಗಳು

ರಿಯಲ್ ಸ್ಟಾರ್ 'ಉಪ್ಪಿ 2' ಎಕ್ಸ್ ಕ್ಲೂಸೀವ್ ಚಿತ್ರಗಳು

Written by: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಉಪ್ಪಿ-2' ಸಿನಿಮಾ ಮೊದಲ ಶೆಡ್ಯೂಲ್ ಮುಗಿಸಿದೆ. ಹೊಸ ವರ್ಷಕ್ಕೆ ಉಪ್ಪಿ ಸಿನಿಮಾ ತೆರೆಗೆ ಬರೋದು ಅನುಮಾನ. 'ಉಪ್ಪಿ-2' ಸಿನಿಮಾವನ್ನ ನೂರಾರು ದಿನಗಳ ಕಾಲ ಶೂಟಿಂಗ್ ಮಾಡೋ ಪ್ಲಾನ್ ನಲ್ಲಿರೋ ಉಪ್ಪಿ ಅವರು ಮಂಡ್ಯ, ಮೈಸೂರು ಭಾಗದಲ್ಲಿ ಶೂಟಿಂಗ್ ಮುಗಿಸಿದ್ದಾರೆ.

ಉಪೇಂದ್ರ ಪ್ರೊಡಕ್ಷನ್ಸ್ ಸಿನಿಮಾ ಆಗಿರೋ 'ಉಪ್ಪಿ-2' ತಾನಂದುಕೊಂಡಂತೆ ಮಾಡಿ ಮುಗಿಸೋ ಯೋಚನೆಯಲ್ಲಿದ್ದಾರೆ ರಿಯಲ್ ಸ್ಟಾರ್ ಉಪ್ಪಿ. ತಾನೇ ಕ್ಯಾಮೆರಾ ಹಿಡಿದು ಕೆಲವು ಶಾಟ್ ಗಳು ಹೀಗೇ ಇರಬೇಕು ಅಂತ ಪಕ್ಕಾ ಮಾಡಿಸಿಕೊಳ್ತಿದ್ದಾರೆ. ಇಲ್ಲೂ ಉಪ್ಪಿ ವೆರೈಟಿ ಗೆಟಪ್ ಗಳಲ್ಲಿ ಮಿಂಚ್ತಾರೆ. ಉಪ್ಪಿ ಮಾಡ್ತಿರೋ ಆ ಒಂದೊಂದೇ ಗೆಟಪ್ ಗಳು ಈಗ ರಿವೀಲ್ ಆಗ್ತಿವೆ. [ಉಪ್ಪಿ 2 ಚಿತ್ರದ ಟ್ರೇಲರ್]

ಉಪ್ಪಿ ಈಗ ಫೈಟ್ ಶೂಟಿಂಗ್ ನಲ್ಲಿ ಬಿಜಿಯಾಗಿದ್ದು ಥ್ರಿಲ್ಲರ್ ಮಂಜು ಫೈಟ್ ಕೊರಿಯೋಗ್ರಫಿ ಮಾಡ್ತಿದ್ದಾರೆ. ಈ ಫೈಟ್ ನಲ್ಲಿ ನೀವು ಇಲ್ಲಿಯವರೆಗೂ ನೋಡಿರದ ಗೆಟಪ್ ನಲ್ಲಿ ಉಪ್ಪಿ ಬರ್ತಿದ್ದಾರೆ. ಉಪ್ಪಿ ಸಿನಿಮಾದಲ್ಲಿ ಬಳಸೋ ಬೈಕ್ ಮತ್ತು ಎಕ್ಸ್ ಕ್ಲೂಸೀವ್ ಗೆಟಪ್ ಗಳು ನಿಮ್ಮ ನೆಚ್ಚಿನ ಫಿಲ್ಮಿಬೀಟ್ ನಲ್ಲಿ ಮಾತ್ರ. [ಉಪ್ಪಿ 2 ಬಗ್ಗೆ ಕೈಕೈ ಹಿಸುಕಿಕೊಂಡವರು!]

ಅನ್ಯಗ್ರಹದ ಜೀವಿಗಳ ತರಹದ ಬೈಕ್

ಅನ್ಯಗ್ರಹದ ಜೀವಿಗಳ ತರಹದ ಬೈಕ್

ನಾವು ಅನ್ಯಗ್ರಹದ ಜೀವಿಗಳನ್ನ ಹೇಗೆ ನೋಡ್ತೀವೋ ಹಾಗೆ ವಿಶೇಷವಾಗಿ ಈ ಬೈಕನ್ನ ಡಿಸೈನ್ ಮಾಡಲಾಗಿದೆ. ಈ ಬೈಕ್ ನೋಡ್ತಿದ್ರೆ ಉಪ್ಪಿ ಕಲ್ಪನೆಯಲ್ಲಿ ಏನೇನಿರಬಹುದು ಅಂತ ಯೋಚಿಸಿ ಚಿತ್ರಪ್ರೇಮಿಗಳು ಥ್ರಿಲ್ಲಾಗೋದ್ರಲ್ಲಿ ಅನುಮಾನವಿಲ್ಲ.

ಡಿಫರೆಂಟ್ ಅಂದ್ರೆ ಉಪ್ಪಿ

ಡಿಫರೆಂಟ್ ಅಂದ್ರೆ ಉಪ್ಪಿ

ಉಪ್ಪಿ ಏನೇ ಮಾಡಿದ್ರೂ ಡಿಫರೆಂಟ್ ಅನ್ನೋದು ಸ್ಯಾಂಡಲ್ ವುಡ್ ಗೂ ಗೊತ್ತು. ಅಷ್ಟೇ ಯಾಕೆ ರಜನಿಯಂತಹಾ ರಜನೀನೇ ಇದನ್ನ ಒಪ್ಪಿಕೊಂಡಿದ್ದಾರೆ. ಈ ಡಿಫರೆಂಟ್ ಉಪ್ಪಿ ಕಲ್ಪನೆಯ ಬೈಕ್ ಗೆ ಹಿಂದುಗಡೆ ಟ್ರ್ಯಾಕ್ಟರ್ ನ ಟೈರ್ ತರಹದ ಎರಡು ಟೈರ್ ಗಳಿವೆ.

ಫೈಟ್ ಗೆಟಪ್ ನಲ್ಲಿ ವಿಭಿನ್ನ

ಫೈಟ್ ಗೆಟಪ್ ನಲ್ಲಿ ವಿಭಿನ್ನ

ಫೈಟ್ ಗಾಗಿ ಉಪ್ಪಿ ಹಾಕಿರೋ ಗೆಟಪ್ ಕೂಡ ವಿಭಿನ್ನವಾಗಿದೆ. ರಾಜನಂತೆ ಕಾಣಿಸೋ ಉಪ್ಪಿ ಅತ್ತ ಕಡೆ ಪೌರಾಣಿಕಾನೂ ಅಲ್ಲದ, ಮಾಡರ್ನ್ ಅಲ್ಲದ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಉಪ್ಪಿ ಸಿಕ್ಸ್ ಪ್ಯಾಕ್ ನಲ್ಲಿರ್ತಾರಾ?

ಉಪ್ಪಿ ಸಿಕ್ಸ್ ಪ್ಯಾಕ್ ನಲ್ಲಿರ್ತಾರಾ?

ಗೆಟಪ್ ನೋಡ್ತಿದ್ರೆ ರಿಯಲ್ ಸ್ಟಾರ್ ಉಪ್ಪಿ ಸಿನಿಮಾದಲ್ಲಿ ಸಿಕ್ಸ್ ಪ್ಯಾಕ್ ಮಾಡ್ತಿದ್ದಾರೆ ಅನ್ನಿಸ್ತಿದೆ. ಹೋಮ್ ಪ್ರೊಡಕ್ಷನ್ಸ್ ಮೊದಲ ಸಿನಿಮಾಗಾಗೀನೇ ಉಪ್ಪಿ ಸಿಕ್ಸ್ ಪ್ಯಾಕ್ ಮಾಡಿದ್ರೂ ಆಶ್ಚರ್ಯವಿಲ್ಲ.

ಉದ್ದ ಕೂದಲು ಬಿಟ್ಟಿದ್ದಾರೆ ರಿಯಲ್ ಸ್ಟಾರ್

ಉದ್ದ ಕೂದಲು ಬಿಟ್ಟಿದ್ದಾರೆ ರಿಯಲ್ ಸ್ಟಾರ್

ಉಪ್ಪಿ ಗೆಟಪ್ ನೋಡಿದ್ರೆ ಉಪೇಂದ್ರ ಸಿನಿಮಾ ನೆನಪಾಗುತ್ತೆ. ಅಭಿಮಾನಿಗಳು ಉಪ್ಪಿಯ ಉದ್ದದ ಕೂದಲು ನೋಡಿ ಥ್ರಿಲ್ ಆಗೋದ್ರಲ್ಲಿ ಅನುಮಾನವಿಲ್ಲ. ಉಪೇಂದ್ರ ಮಸ್ತ್ ಮಜಾ ಕೊಡೋ ಎಂಟರ್ಟೈನರ್ ಆಗಿ 'ಉಪ್ಪಿ-2' ಚಿತ್ರವನ್ನ ತರ್ತಾರೆ ಅನ್ನೋ ನಿರೀಕ್ಷೆಗಳು ಹೆಚ್ತಿದೆ.

ಥ್ರಿಲ್ಲರ್ ಮಂಜು ಫೈಟ್

ಥ್ರಿಲ್ಲರ್ ಮಂಜು ಫೈಟ್

ಹಾಗೆ ನೋಡಿದ್ರೆ ಬಹುನಿರೀಕ್ಷಿತ ಸಿನಿಮಾಗೆ ಹಾಲಿವುಡ್, ಬಾಲಿವುಡ್ ಫೈಟ್ ಕೊರಿಯೋಗ್ರಾಫರ್ ಗಳನ್ನ ಕರೆಸಬೇಕಿತ್ತು. ಆದರೆ ಉಪ್ಪಿ ಕನ್ನಡದ ಥ್ರಿಲ್ಲರ್ ಕೈಯ್ಯಲ್ಲಿ ಮಾಡಿಸ್ತಿದ್ದಾರೆ. ಥ್ರಿಲ್ಲರ್ ಮಂಜು ಫೈಟ್ ನಲ್ಲಿ ಉಪ್ಪಿಯ ಗೆಟಪ್ ಬೈಕ್ ಗಳೇ ವಿಶೇಷ ಅನ್ನೋದು ಚಿತ್ರಪ್ರೇಮಿಗಳ ತರ್ಕ.

English summary
Real Star Upendra upcoming 'Uppi 2' is film with lots of suprises. The movie shooting is going on at a brisk pace. Filmibeat bringing you the exclusive photos of the movie.
Please Wait while comments are loading...

Kannada Photos

Go to : More Photos