»   » 'ಮೈತ್ರಿ' ರಿಲೀಸ್ ಡೇಟ್ ಖಾತ್ರಿ ಇಲ್ಲ ಕಣ್ರೀ..!

'ಮೈತ್ರಿ' ರಿಲೀಸ್ ಡೇಟ್ ಖಾತ್ರಿ ಇಲ್ಲ ಕಣ್ರೀ..!

Posted by:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸ್ಟಾರ್ ಮತ್ತು ಪವರ್ ಸ್ಟಾರ್ 'ಮೈತ್ರಿ' ದರ್ಶನವಾಗಿ ತಿಂಗಳುಗಳು ಕಳೆದಿರಬೇಕಿತ್ತು. ಆದ್ರೆ, 'ಮೈತ್ರಿ'ಗಿನ್ನು ಬಿಡುಗಡೆ ಭಾಗ್ಯ ದೊರಕಿಲ್ಲ.

ಶೂಟಿಂಗ್ ಕಂಪ್ಲೀಟ್ ಆಗಿದ್ದರೂ, ಪುನೀತ್ ಅಭಿನಯದ 'ಪವರ್ ***' ರಿಲೀಸ್ ಆಗುತ್ತಿದ್ದರಿಂದ 'ಮೈತ್ರಿ' ಪ್ರಚಾರ ಕಾರ್ಯ ಶುರುಮಾಡಿರಲಿಲ್ಲ. ಆದ್ರೆ 'ಪವರ್ ***' ಸಿನಿಮಾ ಸೆಂಚುರಿ ಬಾರಿಸಿದ್ದಾಗಿದೆ. ಇನ್ನಾದರೂ 'ಮೈತ್ರಿ' ದರ್ಶನವಾಗುತ್ತಾ ಅಂದ್ರೆ, ಚಿತ್ರತಂಡದಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ.


ಯಾಕಂದ್ರೆ, 'ಮೈತ್ರಿ' ಚಿತ್ರಕ್ಕಿನ್ನೂ ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಗಾಗಿ ನೂರಾರು ಚಿತ್ರಗಳು ಕ್ಯೂ ನಲ್ಲಿವೆ. ಸೆನ್ಸಾರ್ ಮುಗಿದ ಬಳಿಕವಷ್ಟೇ ರಿಲೀಸ್ ಡೇಟ್ ಅನೌನ್ಸ್ ಮಾಡಬಹುದು ಅಂತ ಚಿತ್ರತಂಡ ಹೇಳುತ್ತಿದೆ. [ಮೈತ್ರಿ ಹಾಡುಗಳನ್ನ ಇಲ್ಲಿ ನೋಡಿ]


Puneeth Rajkumar's Mythri release

ಹಾಗೆ ನೋಡಿದ್ರೆ, ಫೆಬ್ರವರಿ 13 ರಂದು 'ಮೈತ್ರಿ' ಸಿನಿಮಾ ಬಿಡುಗಡೆ ಆಗ್ಬೇಕಿತ್ತು. ಆದ್ರೆ, ಪ್ರೇಮ್ 'ಡಿ.ಕೆ' ರಿಲೀಸ್ ಆಗುತ್ತಿರುವುದು ಒಂದ್ಕಡೆಯಾದರೆ, ಇನ್ನೊಂದ್ಕಡೆ ಸೆನ್ಸಾರ್ ಸರ್ಟಿಫಿಕೇಟ್ ಇನ್ನೂ ಕೈಗೆ ಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ 'ಮೈತ್ರಿ' ಮುಂದಕ್ಕೆ ಹೋಗಿದೆ. [ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್]


ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್, ಪುನೀತ್ ರಾಜ್ ಕುಮಾರ್, ಅತುಲ್ ಕುಲಕರ್ಣಿ, ರವಿ ಕಾಳೆ, ಭಾವನಾ ಅಭಿನಯದ ಈ ಮಲ್ಟಿ ಸ್ಟಾರರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಗಿರಿರಾಜ್. ['ಸಿಪಾಯಿ ರಾಮು' ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್]


ಈಗಾಗಲೇ ರಿಲೀಸ್ ಆಗಿರುವ ಇಳಯರಾಜ ಸಂಯೋಜಿಸಿರುವ ಹಾಡುಗಳು ಎಲ್ಲರ ಮನ ಗೆದ್ದಿದೆ. ಸೆನ್ಸಾರ್ ಬೇಗ ಆದ್ರೆ, ಫೆಬ್ರವರಿ 20 ಕ್ಕೆ 'ಮೈತ್ರಿ' ರಿಲೀಸ್ ಆಗಬಹುದು. ಅದು ವರ್ಲ್ಡ್ ಕಪ್ ಭಯ ಇಲ್ಲಾಂದ್ರೆ..!

English summary
Power Star Puneeth Rajkumar and Malayalam Super Star Mohan Lal starrer 'Mythri' release has been postponed. The reason behind the postponement is here.
Please Wait while comments are loading...

Kannada Photos

Go to : More Photos