»   » ವಿಕ್ರಂ ಆಸ್ಪತ್ರೆಗೆ ನಟ ಅಂಬರೀಶ್ ದಾಖಲು.!

ವಿಕ್ರಂ ಆಸ್ಪತ್ರೆಗೆ ನಟ ಅಂಬರೀಶ್ ದಾಖಲು.!

Posted by:
Subscribe to Filmibeat Kannada

ಇದೀಗ ಬಂದಿರುವ ಬ್ರೇಕಿಂಗ್ ನ್ಯೂಸ್....ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ನಟ, ವಸತಿ ಸಚಿವ ಅಂಬರೀಶ್ ದಾಖಲಾಗಿದ್ದಾರೆ.

ಹಾಗಂತ ಗಾಬರಿ ಪಡುವಂಥದ್ದೇನಾಗಿಲ್ಲ. ಅಂಬರೀಶ್ ಆರೋಗ್ಯದಲ್ಲಿ ಏರುಪೇರಾಗಿಲ್ಲ. ಆರೋಗ್ಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ.

Rebel Star Ambareesh admitted to Vikram Hospital

ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಅಂಬರೀಶ್ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅಂಬಿ, ತಿಂಗಳಿಗೊಮ್ಮೆ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುವುದು ಅವಶ್ಯ. [ಅಂಬರೀಶ್ ಅನಾರೋಗ್ಯ; ಲೇಟೆಸ್ಟ್ ರಿಪೋರ್ಟ್]

ಅದರಂತೆ ಆರೋಗ್ಯ ತಪಾಸಣೆಗಾಗಿ ನಿನ್ನೆ ಸಂಜೆ ವಿಕ್ರಂ ಆಸ್ಪತ್ರೆಗೆ ಅಂಬರೀಶ್ ತೆರಳಿದ್ದಾರೆ. ಬಿಪಿ, ಶುಗರ್ ಸೇರಿದಂತೆ ಸ್ಕ್ಯಾನ್ನಿಂಗ್ ಮತ್ತು ಇತರೆ ತಪಾಸಣೆ ಅನಿವಾರ್ಯವಾಗಿರುವುದರಿಂದ ಆಸ್ಪತ್ರೆಗೆ ಅಂಬಿ ದಾಖಲಾಗಿದ್ದಾರೆ. [ರೆಬೆಲ್ ಸ್ಟಾರ್ ಅಂಬರೀಶ್ ಕಂಡೀಷನ್ ಈಗ ಹೇಗಿದೆ?]

ಡಾ.ಸತೀಶ್ ನೇತೃತ್ವದ ವೈದ್ಯರ ತಂಡ ಅಂಬರೀಶ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಇಂದು ಅಥವ ನಾಳೆ ಸಂಪೂರ್ಣ ತಪಾಸಣೆ ಮುಗಿದ ಬಳಿಕ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

English summary
For General Health Check-up Rebel Star Ambareesh got admitted to Vikram Hospital, Bengaluru. After Scanning and other tests, Ambareesh might get discharged today (June 19th).
Please Wait while comments are loading...

Kannada Photos

Go to : More Photos