twitter
    For Quick Alerts
    ALLOW NOTIFICATIONS  
    For Daily Alerts

    ರೆಬೆಲ್ ಸ್ಟಾರ್ ಅಭಿನಯದ ಟಾಪ್ ಐದು ಚಿತ್ರಗಳು

    By Rajendra
    |

    ಮಂಡ್ಯದ ಗಂಡು, ಕಲಿಯುಗ ಕರ್ಣ, ರೆಬೆಲ್ ಸ್ಟಾರ್ ಅಂಬರೀಷ್ ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವುಗಳಲ್ಲಿ ಯಾವ ಚಿತ್ರ ಇಷ್ಟ ಎಂದು ಕೇಳಿದರೆ ಅವರ ಅಭಿಮಾನಿಗಳು ಕ್ಷಣಕಾಲ ಮೂಕರಾಗುತ್ತಾರೆ. ಅವರ ಕಣ್ಮುಂದೆ ಎಲ್ಲಾ ಚಿತ್ರಗಳು ಹಾದುಹೋಗುತ್ತವೆ. ಅವರ ಟಾಪ್ ಐದು ಚಿತ್ರಗಳನ್ನು ಆಯ್ಕೆ ಮಾಡುವುದಾದರೆ ನಮ್ಮ ಸೆಲೆಕ್ಷನ್ ಹೀಗಿದೆ.

    1. ಅಂಬರೀಷ್ ಅಭಿನಯದ 'ಅಂತ' ಚಿತ್ರಕ್ಕೆ ನಂಬರ್ ಒನ್ ಸ್ಥಾನ ನೀಡಬಹುದು. ಚಿತ್ರದ ಪಾತ್ರವರ್ಗದಲ್ಲಿ ಜಯಮಾಲಾ, ಪ್ರಭಾಕರ್, ಪಂಡರಿಭಾಯಿ, ಶಕ್ತಿಪ್ರಸಾದ್ ಮುಂತಾದವರಿದ್ದರು. 1981ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅಂಬರೀಷ್ ದ್ವಿಪಾತ್ರದಲ್ಲಿ ಅಮೋಘ ಅಭಿನಯ ನೀಡಿದ್ದರು.

    ಕನ್ವಾರ್ ಲಾಲ್ ಹಾಗೂ ಇನ್ಸೆಪೆಕ್ಟರ್ ಸುಶೀಲ್ ಕುಮಾರ್ ಪಾತ್ರಕ್ಕೆ ಜೀವತುಂಬಿದ್ದರು. ಈ ಚಿತ್ರದಲ್ಲಿ ಜಯಮಾಲಾ ಅವರು ಅಂಬರೀಷ್ ಅವರಿಗೆ ತಂಗಿಯಾಗಿ ಅಭಿನಯಿಸಿದ್ದಾರೆ. ಪ್ರೇಮವಿದೆ ಮನದಿ, ನಾನು ಯಾರು ಯಾವ ಊರು ಎಂಬ ಹಾಡುಗಳು ಇಂದಿಗೂ ಕಿವಿಗೆ ಬಿದ್ದರೆ ಪ್ರೇಕ್ಷಕರು 80ರ ದಶಕಕ್ಕೆ ಹೊರಳುತ್ತಾರೆ.

    2. ಅಂಬಿ ಅಭಿನಯದ ಮತ್ತೊಂದು ಮರೆಯಲಾಗದ ಚಿತ್ರ 'ರಂಗನಾಯಕಿ' (1981). oedipus complex (ಮಗನಿಗೆ ತಾಯಿಯಲ್ಲಿ ಲೈಂಗಿಕ ಆಸಕ್ತಿಯುಂಟಾಗುವುದು) ಚಿತ್ರದ ಕಥಾವಸ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಚಿತ್ರ ಅಮೋಘವಾಗಿ ಮೂಡಿಬಂದಿತ್ತು.

    ಆರತಿ, ರಾಮಕೃಷ್ಣ, ಅಶೋಕ್, ರಾಜಾನಂದ್ ಚಿತ್ರದ ಪಾತ್ರವರ್ತದಲ್ಲಿದ್ದರು. 'ನಾಗರಹಾವು' ಚಿತ್ರದಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಅಂಬಿ ಈ ಚಿತ್ರದ ಮೂಲಕ ಅಣ್ಣನಾಗಿ ಹೆಂಗೆಳೆಯರ ಹೃದಯಗೆದ್ದಿದ್ದಾರೆ.

    3. ಅಂಬರೀಷ್ ಅಭಿನಯದ ಮತ್ತೊಂದು ಅಮೋಘ ಚಿತ್ರಗಳ ಸಾಲಿಗೆ 'ಪಡುವಾರಳ್ಳಿ ಪಾಂಡವರು' (1978) ಚಿತ್ರವೂ ಸೇರ್ಪಡೆಯಾಗುತ್ತದೆ. ಇದೇ ಚಿತ್ರ 'ಹಮ್ ಪಾಂಚ್' ಎಂದು ಹಿಂದಿಗೆ ರೀಮೇಕ್ ಆಯಿತು. ತೆಲುಗಿನಲ್ಲಿ 'ಮನವೂರಿ ಪಾಂಡವಲು' ಎಂಬ ಹೆಸರಿನಲ್ಲಿ ರೀಮೇಕ್ ಆಗಿದೆ.

    ಜೈಜದೀಶ್, ರಾಮಕೃಷ್ಣ, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್, ಆರತಿ ಪಾತ್ರವರ್ಗದಲ್ಲಿದ್ದರು. ಈ ಚಿತ್ರದ ಜನ್ಮ ನೀಡಿದ ಭೂತಾಯಿಯ, ಹಾಡೊಮ್ಮೆ ಹಾಡಬೇಕು, ತೂಕಡಿಸಿ ತೂಕಡಿಸಿ ತಮ್ಮ ಎಂಬ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

    4. 1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಚಿತ್ರದ ಒಂದು ಹಾಡನ್ನು ಬಹುಶಃ ಯಾರೂ ಮರೆತಿರಕ್ಕಿಲ್ಲ. ಅಂಬರೀಷ್ ಹಾಗೂ ಅಂಬಿಕಾ ಮಳೆಯಲಿ ನೆನೆದು ಹೆಜ್ಜೆ ಹಾಕುತ್ತಿದ್ದರೆ ಎಂಥವರಿಗೂ ಚಳಿ ಚಳಿಯಾಗುತ್ತಿತ್ತು. ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ...

    ಚಿ. ಉದಯಶಂಕರ್ ಸಾಹಿತ್ಯಕ್ಕೆ ಶಂಕರ್ ಮತ್ತು ಗಣೇಶ್ ಸಂಗೀತ ಸಂಯೋಜನೆ ಸೊಗಸಾಗಿದೆ. ಜಾನಕಿ ಮತ್ತು ಬಾಲಸುಬ್ರಹ್ಮಣ್ಯಂ ಗಾಯನಕ್ಕೆ ಅಂಬರೀಷ್ ಮತ್ತು ಅಂಬಿಕಾ ಜೀವತುಂಬಿದ ಬಗೆಯನ್ನು ತೆರೆ ಮೇಲೆಯೇ ನೋಡಬೇಕು.

    5. ಅಂಬರೀಷ್ ಅಭಿನಯದ ಸಂಪೂರ್ಣ ಕೌಟುಂಬಿಕ ಚಿತ್ರ ಹೃದಯ ಹಾಡಿತು. ಈ ಚಿತ್ರ ಸೂಪರ್ ಹಿಟ್ ಕೂಡ ಆಯಿತು. ಈ ಚಿತ್ರಕ್ಕಾಗಿ ಗಾನ ಗಂಧರ್ವ ಡಾ.ರಾಜ್ ಕುಮಾರ್ ಅವರು "ನಲಿಯುತಾ ಹೃದಯ ಹಾಡನು ಹಾಡಿದೆ..." ಎಂಬ ಹಾಡು ತಮ್ಮ ಇಂದಿಗೂ ಹಸಿರಾಗಿಯೇ ಇದೆ. ಚಿ.ಉದಯಶಂಕರ್ ಸಾಹಿತ್ಯ ಅಷ್ಟೇ ಸೊಗಸಾಗಿ ಮೂಡಿಬಂದಿತ್ತು.

    ಅಂಬಿ ಅಭಿನಯದ ಉತ್ತಮ ಚಿತ್ರಗಳ ಸಂಖ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ. ನಾಗರಹೊಳೆ, ಹಾಂಕಾಂಗ್‌ನಲ್ಲಿ ಏಜೆಂಟ್ ಅಮರ್, ಮಸಣದ ಹೂವು, ಒಲವಿನ ಉಡುಗೊರೆ ಹೀಗೆ ಪಟ್ಟಿ ಬೆಳೆಯುತ್ತದೆ. ಇಲ್ಲಿ ನಾವು ಕೇವಲ ಟಾಪ್ ಐದು ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದೇವೆ. (ಒನ್‌ಇಂಡಿಯಾ ಕನ್ನಡ)

    English summary
    Kannada actor Rebel Star Ambarish acted in about 206 films. Here is the top 5 Kannada films of Ambarish. Antha, Ranganayaki, Paduvarahalli Pandavaru, Chakravyuha and Hrudaya Hadithu. Actor Ambarish's 60th Birthday to Celebrate in Bangalore Palace Ground on May 29 2012.
    Monday, May 28, 2012, 18:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X