twitter
    For Quick Alerts
    ALLOW NOTIFICATIONS  
    For Daily Alerts

    ಟಿವಿ ರೈಟ್ಸ್ ನಲ್ಲಿ ಹೊಸ ದಾಖಲೆ ಬರೆದ 'ಮಾಣಿಕ್ಯ'

    By ಉದಯರವಿ
    |

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿ ಅಭಿನಯಿಸಿರುವ ಮಾಣಿಕ್ಯ ಚಿತ್ರ ಮೇ.1ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಸರಿಸುಮಾರು ಈ ಚಿತ್ರಕ್ಕೆ ರು.18 ಕೋಟಿ ಬಂಡವಾಳ ಹೂಡಲಾಗಿದ್ದು ಬರೋಬ್ಬರಿ 140 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

    ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ. [ತಮಿಳಿನಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಒಪ್ಪಿದ್ದೇಕೆ?]

    ಆ ಪ್ರಕಾರ ರು.5.5 ಕೋಟಿ ಟಿವಿ ರೈಟ್ಸ್ ಸುವರ್ಣ ವಾಹಿನಿ ಪಾಲಾಗಿದೆ ಎನ್ನುತ್ತವೆ ಮೂಲಗಳು. ಇನ್ನು ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ರು.1.5 ಕೋಟಿ ವಸೂಲಿಯಾಗಿದೆಯಂತೆ. ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ಬಿಂಗ್ ರೈಟ್ಸ್ ತಲಾ ರು.75 ಲಕ್ಷಕ್ಕೆ ಸೋಲ್ಡ್ ಔಟ್. ಅಲ್ಲಿಗೆ 'ಮಾಣಿಕ್ಯ' ಕಮರ್ಷಿಯಲಿ ಸೇಫ್.

    ಒಂದೇ ವಾರದಲ್ಲಿ ರು.10 ಕೋಟಿ ಕಲೆಕ್ಷನ್ ನಿರೀಕ್ಷೆ

    ಒಂದೇ ವಾರದಲ್ಲಿ ರು.10 ಕೋಟಿ ಕಲೆಕ್ಷನ್ ನಿರೀಕ್ಷೆ

    ಇನ್ನು ಚಿತ್ರ ಬಿಡುಗಡೆಯಾದ ಮೇಲೆ ಒಂದೇ ವಾರದಲ್ಲಿ ರು.10 ಕೋಟಿ ಪ್ಲಸ್ ಕಲೆಕ್ಷನ್ ಮಾಡುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಅಂದುಕೊಂಡಂತೆ ಲೆಕ್ಕಾಚಾರ ನಡೆದರೆ ಒಂದೇ ವಾರದಲ್ಲಿ ಚಿತ್ರದ ಬಂಡವಾಳ ವಾಪಸ್. ಆ ಬಳಿಕ ಬರುವುದೇನಿದ್ದರೂ ಲಾಭದ ಲೆಕ್ಕಾಚಾರ.

    ಡಿವಿಡಿ, ಆಡಿಯೋ ರೈಟ್ಸ್ ನಲ್ಲಿ ರು.50 ಲಕ್ಷ

    ಡಿವಿಡಿ, ಆಡಿಯೋ ರೈಟ್ಸ್ ನಲ್ಲಿ ರು.50 ಲಕ್ಷ

    ಇನ್ನು ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಾಲಾಗಿದೆ. ರು.25 ಲಕ್ಷಕ್ಕೆ ಮಾರಾಟವಾಗಿದೆ. ಚಿತ್ರದ ಡಿವಿಡಿ ರೈಟ್ಸ್ ಗೂ ಅಷ್ಟೇ ಮೊತ್ತ ಸಿಕ್ಕಿದೆ ಎನ್ನುತ್ತವೆ ಮೂಲಗಳು. ಅಳಿದುಳಿದ ರೈಟ್ಸ್ ನಲ್ಲಿ ರು.25 ಲಕ್ಷ ಬಂದಿದೆಯಂತೆ. ಮೇ.1ರಂದು ಸುಮಾರು 275 ಚಿತ್ರಮಂದಿರಗಳಲ್ಲಿ ಮಾಣಿಕ್ಯ ಚಿತ್ರ ಬಿಡುಗಡೆಯಾಗುತ್ತಿದೆ.

    ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

    ತಂದೆ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್

    ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಒಟ್ಟು 35 ಮಂದಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.

    ತೆಲುಗಿನ ಮಿರ್ಚಿ ರೀಮೇಕ್ ಆದರೂ ಕಿಚ್ಚನ ಟಚ್ ಇದೆ

    ತೆಲುಗಿನ ಮಿರ್ಚಿ ರೀಮೇಕ್ ಆದರೂ ಕಿಚ್ಚನ ಟಚ್ ಇದೆ

    ಕಳೆದ 35 ವರ್ಷಗಳಿಂದ ಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಎಂಎನ್ ಕುಮಾರ್ ಅವರ ಪಾಲಿಗೆ 'ಮಾಣಿಕ್ಯ' ಚಿತ್ರ ಅಪ್ಪಟ ಮಾಣಿಕ್ಯವೇ ಆಗಿದೆ. ಇದು ತೆಲುಗಿನ 'ಮಿರ್ಚಿ' ರೀಮೇಕ್ ಆದರೂ ಕಿಚ್ಚ ಸುದೀಪ್ ಏನೆಲ್ಲಾ ಹೊಸತನ್ನು ಸೇರಿಸಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.

    ಕಥೆ, ಚಿತ್ರಕಥೆ, ಆಕ್ಷನ್ ಕಟ್ ಹೇಳಿರುವ ಸುದೀಪ್

    ಕಥೆ, ಚಿತ್ರಕಥೆ, ಆಕ್ಷನ್ ಕಟ್ ಹೇಳಿರುವ ಸುದೀಪ್

    ಮಿರ್ಚಿ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ.

    English summary
    Kichcha Sudeep lead Kannada movie 'Maanikya' all set for release on May 1, 2014 around in 275 theatres. Reports suggest that the TV rights alone have been sold for a whopping Rs 5.5 crore to Suvarna Channel.
    Saturday, April 26, 2014, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X